ಸೆ.25ರಿಂದ ಬಾಲವನ ಈಜುಕೊಳದಲ್ಲಿ ಶಿಬಿರ

0

ಪುತ್ತೂರು : ಪುತ್ತೂರು ಅಕ್ವೆಟಿಕ್ ಕ್ಲಬ್ ಆಶ್ರಯದಲ್ಲಿ ಪರ್ಲಡ್ಕ ಬಾಲನ ಈಜುಕೊಳದಲ್ಲಿ ಸೆ.25ರಿಂದ ಅ.10ರ ತನಕ ದಸರಾ ಈಜು ಶಿಬಿರ ನಡೆಯಲಿದೆ. ಬೆಳಿಗ್ಗೆ 6.30ರಿಂದ 7.15, 7.30ರಿಂದ 8.15, 8.30ರಿಂದ 9.15, 9.30ರಿಂದ 10.15 ರ ತನಕ ನಾಲ್ಕು ವಿಭಾಗ, ಅಪರಾಹ್ನ 3.30ರಿಂದ 4.15, ಸಂಜೆ 4.30ರಿಂದ 5.15, 6.30ರಿಂದ 7.15, 7.30ರಿಂದ 8.15ರ ತನಕ ಶಿಬಿರ ನಡೆಯಲಿದೆ. 5.30ರಿಂದ 615ರ ತನಕ ಮಹಿಳೆಯರಿಗೆ ಹಾಗೂ 12 ವರ್ಷ ಕೆಳಗಿನ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಫ್ಯಾಮಿಲಿ ಪ್ಯಾಕೇಜ್ ಮತ್ತು ಗ್ರೂಪ್ ರಿಯಾಯಿತಿ ಇದೆ. ಕೆಲವೇ ಪ್ರವೇಶಗಳು ಮಾತ್ರ ಉಳಿದಿದೆ. ದಸರಾ ಈಜು ಶಿಬಿರ ಸ್ಪರ್ಧೆಗೆ ಹೆಸರು ನೋಂದಾಯಿಸಲು 8904997518, 9449143263, 9743702470 ಸಂಪರ್ಕಿಸಬಹುದು.

2019ರ ಟೀಂ ಇಂಡಿಯಾ ತರಬೇತುದಾರ ಪಾರ್ಥ ವಾರಣಾಸಿ 2012ರಲ್ಲಿ ಪುತ್ತೂರಿನಲ್ಲಿ ಪ್ರಾರಾಂಭಿಸಲಾದ ಪುತ್ತೂರು ಅಕ್ವೆಟಿಕ್ ಕ್ಲಬ್ ದಶಮಾನೋತ್ಸವ ಸಂಭ್ರಮದಲ್ಲಿದೆ. ಕ್ಲಬ್ ಹಲವು ಈಜು ಸ್ಪರ್ಧೆಗಳಲ್ಲಿ ದಾಖಲೆ ಸೃಷ್ಟಿಸಿ ಈರೆಗೆ 2,440 ಪದಕಗಳನ್ನು ಗೆದ್ದುಕೊಂಡಿದೆ. ಇಲ್ಲಿ ತರಬೇತಿ ಪಡೆದ ಈಜುಪಟುಗಳು ಅಂತರಾಷ್ಟ್ರೀಯ ಮಟ್ಟ, ಖೇಲೋ ಇಂಡಿಯಾ, ಭಾರತೀಯ ನೌಕಾ ಸೇನೆಯಲ್ಲಿ ಸಾಧನೆ ಮೆರೆದಿದ್ದಾರೆ. ದೇಶದಲ್ಲೇ ಮೊದಲ ಜೀವರಕ್ಷಕ ಈಜು ತರಬೇತಿ ಇಲ್ಲಿ ನೀಡಲಾಗುತ್ತಿದ್ದು 2018ರ ಜೀವರಕ್ಷಕ ವಿಶ್ವ ಚಾಂಪಿಯನ್‌ಶಿಪ್ ಮತ್ತು 2019ರ ಕಾಮನ್‌ವೆಲ್ತ್ ಜೀವರಕ್ಷಕ ಫೆಸ್ಟ್ ಇದರ ಭಾರತೀಯ ತಂಡದ ಕೋಚ್ ಆಗಿರುವ ರೋಹಿತ್ ಇಲ್ಲಿ ತರಬೇತುದಾರರಾಗಿದ್ದಾರೆ.

LEAVE A REPLY

Please enter your comment!
Please enter your name here