ಲ್ಯಾಂಪ್ಸ್ ಸೊಸೈಟಿ ನೆಕ್ಕಿಲಾಡಿ ಶಾಖೆಯ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ, ಬ್ಯಾಂಕಿಂಗ್ ವಿಸ್ತೃತ ವಿಭಾಗದ ಉದ್ಘಾಟನೆ

0

  • ಲ್ಯಾಂಪ್ಸ್ ಸೊಸೈಟಿ ಬ್ಯಾಂಕ್‌ಗೆ ಸರಿಸಮಾನವಾಗಿ ಬೆಳೆದಿದೆ-ನಳಿನ್ ಕುಮಾರ್ ಕಟೀಲ್
  • ಬುಡಕಟ್ಟು ಸಮುದಾಯಕ್ಕೆ ಆರ್ಥಿಕ ಚೈತನ್ಯ ನೀಡದ ಲ್ಯಾಂಪ್ಸ್-ಸಂಜೀವ ಮಠಂದೂರು
  • ಕಾಡುತ್ಪತ್ತಿ ಸಂಗ್ರಹಣೆಗೆ ೨೩ ಸಂಘಗಳಿಗೂ ಏಕರೂಪದ ಕಾನೂನು ಜಾರಿಯಾಗಲಿ-ಮುತ್ತಪ್ಪ
  • ನೆಕ್ಕಿಲಾಡಿಯಲ್ಲಿ ಲ್ಯಾಂಪ್ಸ್‌ನಿಂದ ಪ್ರಥಮ ಬ್ಯಾಂಕಿಂಗ್ ಸೇವೆ-ಪ್ರಶಾಂತ್

ಪುತ್ತೂರು:ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘದ ೩೪ನೇ ನೆಕ್ಕಿಲಾಡಿ ಶಾಖೆಯಲ್ಲಿ ಸರಕಾರದ ಸುಮಾರು ರೂ.೭೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಮಾರಾಟ ಮಳಿಗೆ, ಗೋದಾಮು ಕಟ್ಟಡ ಹಾಗೂ ಬ್ಯಾಂಕಿಂಗ್ ವಿಭಾಗದ ವಿಸ್ತೃತ ವಿಭಾಗವು ಸೆ.೨೪ರಂದು ಉದ್ಘಾಟನೆಗೊಂಡಿತು.

ನೂತನ ಮಾರಾಟ ಮಳಿಗೆ ಮತ್ತು ಗೋದಾಮು ಕಟ್ಟಡವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಿದರು. ಬ್ಯಾಂಕಿಂಗ್ ವಿಸ್ತೃತ ವಿಭಾಗವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲ ಮೈಸೂರು ಇದರ ಅಧ್ಯಕ್ಷ ಮುತ್ತಪ್ಪ ಉದ್ಘಾಟಿಸಿದರು.

ಕಂಪ್ಯೂಟರ್ ವಿಭಾಗವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸಭಾಭವನನ್ನು ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಎನ್ ಉದ್ಘಾಟಿಸಿದರು.

ಲ್ಯಾಂಪ್ಸ್ ಸೊಸೈಟಿ ಬ್ಯಾಂಕ್‌ಗೆ ಸರಿಸಮಾನವಾಗಿ ಬೆಳೆದಿದೆ-ನಳಿನ್ ಕುಮಾರ್ ಕಟೀಲ್
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಹುಟ್ಟುಕೊಂಡ ಲ್ಯಾಂಪ್ಸ್ ಸಹಕಾರ ಸಂಘವು ಉತ್ತಮವಾಗಿ ಬೆಳೆದು ಗೃಹ ಸಾಲ, ವಾಹನ ಸಾಲ ನೀಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದ್ಬುತವಾದ ಸಾಧನೆ ಮಾಡಿದ್ದು ಬ್ಯಾಂಕ್‌ಗೆ ಸರಿಸಮಾನವಾಗಿ ಬೆಳೆಯುತ್ತಿದೆ. ಪಾರದರ್ಶಕವಾಗಿ ವ್ಯವಹಾರ ನೀಡುತ್ತಿರುವ ಲ್ಯಾಂಪ್ಸ್ ಸಮಾಜದ ಕಣ್ಣಿರು ಒರೆಸುವ ಕೆಲಸ ಮಾಡುವ ಮೂಲಕ ಸಹಕಾರ ರಂಗದಲ್ಲಿ ಅದ್ಬುತ ಸಾಧನೆ ಮಾಡಿದೆ. ಸ್ವಚ್ಚ ಆಡಳಿತ ನಡೆಸಿ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಪ್ರದೇಶಕ್ಕೂ ವ್ಯವಹಾರವನ್ನು ವಿಸ್ತರಿಸುತ್ತಿದೆ ಎಂದರು. ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶಕ್ತಿ ನೀಡುವ ಕಾರ್ಯಮಾಡಿರುವ ಲ್ಯಾಂಪ್ಸ್ ಗ್ರಾಹಕರ ಪ್ರೀತಿಯ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದ ಸಂಸದರು ಬ್ಯಾಂಕಿಂಗ್ ವ್ಯವಹಾರದಲ್ಲಿ ಠೇವಣಿದಾರರು ಹಾಗೂ ಸಾಲಗಾರರು ಎರಡು ಕಣ್ಣುಗಳಿದ್ದಂತೆ. ಇಬ್ಬರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಪ್ರಧಾನಿಯಿಂದ ಸಹಕಾರಿ ಕ್ಷೇತ್ರ ಇನ್ನಷ್ಟು ಶಕ್ತಿ:
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಸರಕಾರದಿಂದ ಸಹಕಾರಿ ಕ್ಷೇತ್ರವು ಕಡೆಗಣಿಸಲ್ಪಟ್ಟಿತ್ತು. ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡಿ ಪ್ರತ್ಯೇಕ ಸಚಿವಾಲಯನ್ನೇ ಸ್ಥಾಪಿಸಿ ಇನ್ನಷ್ಟು ಶಕ್ತಿ ನೀಡಿ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಕೆಲಸ ಮಾಡಿದ್ದಾರೆ. ಸಹಕಾರಿ ಕಾಶಿಯಾಗಿರುವ ದ.ಕ ಜಿಲ್ಲೆಯಲ್ಲಿ ಪ್ರಾರಂಭಗೊಂಡ ಸಹಕಾರಿ ಕ್ಷೇತ್ರವು ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಅಭಿವೃದ್ಧಿಯಲ್ಲಿ ಶಿಸ್ತುನ್ನು ತೋರಿಸಿಕೊಟ್ಟಿದೆ. ಕೋವಿಡ್‌ನಿಂದ ಎಲ್ಲಾ ದೇಶಗಳು ಆರ್ಥಿಕ ಕುಸಿತಗೊಂಡರೂ ಭಾರತದಲ್ಲಿ ಸಹಕಾರಿ ಕ್ಷೇತ್ರದಿಂದಾಗಿ ಆರ್ಥಿಕವಾಗಿ ಉತ್ತಮವಾಗಿದೆ. ಸಹಕಾರಿ ಕ್ಷೇತ್ರ ಆರ್ಥಿಕ ಸುಸ್ಥಿರ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸಹಕಾರಿ ಕ್ಷೇತ್ರದಿಂದಾಗಿ ದೇಶದ ಆರ್ಥಿಕ ಸ್ಥಿತಿ ಸದೃಡವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಬುಡಕಟ್ಟು ಸಮುದಾಯಕ್ಕೆ ಆರ್ಥಿಕ ಚೈತನ್ಯ ನೀಡಿದ ಲ್ಯಾಂಪ್ಸ್-ಸಂಜೀವ ಮಠಂದೂರು:
ಅಧ್ಯಕ್ಷತೆ ವಹಿಸಿದ್ದ ಸಂಘದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬುಡಕಟ್ಟು, ಮರಾಠಿ, ಮಲೆಕುಡಿಯ ಸಮುದಾಯದವರು ತನ್ನದೇ ಸ್ವಂತ ಸಹಕಾರಿ ಸಂಘ ಸ್ಥಾಪಿಸಿ, ಸಮಾಜಕ್ಕೆ ಆರ್ಥಿಕ ಚೈತನ್ಯ ನೀಡುವಲ್ಲಿ ಲ್ಯಾಂಪ್ಸ್ ಪ್ರಮುಖ ಪಾತ್ರವಹಿಸಿದೆ. ೩ ಶಾಖೆ ತೆರೆದು ಸೇವೆ ನೀಡುವ ಮೂಲಕ ಸಹಕಾರಿ ಕ್ಷೇತ್ರ ದೊಡ್ಡ ಕೊಡುಗೆ ನೀಡಿರುವ ಸಂಘದ ಕಾರ್ಯವನ್ನು ಅಭಿನಂದಿಸಿದರು. ಸಂಘವು ಕಾಡುತ್ಪತ್ತಿಗೆ ಸೀಮಿತವಾಗಿರದೇ ಸಮಾಜದ ಎಲ್ಲರಿಗೂ ಸಾಲ ಸೌಲಭ್ಯ, ರೇಶನ್ ಸರಕಾರ ಯೋಜನೆ ಸೇರಿದಂತೆ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸಮುದಾಯದ ಅಭಿವೃದ್ಧಿಗಳಿಗೆ ಸಹಕಾರ ನೀಡಿದ ಲ್ಯಾಂಪ್ಸ್ ಪ್ರಾಮಾಣಿಕ ಸೇವೆಯ ಮೂಲಕ ಸಾಧನೆ ಮಾಡಿದೆ ಎಂದ ಶಾಸಕರು, ಪುತ್ತೂರಿನಲ್ಲಿ ಮರಾಠಿ ಭವನ ನಿರ್ಮಾಣಕ್ಕೆ ರೂ.೫ಕೋಟಿ ಅನುದಾನ ನೀಡುವಂತೆ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದೇನೆ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಕಾಮಗಾರಿಗೆ ಮತ್ತೆ ರೂ.೧೦ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿಯ ಸಂದರ್ಭದಲ್ಲಿ ಲ್ಯಾಂಪ್ಸ್‌ನ ಕಟ್ಟಡಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುವುದು.

ಕಾಡುತ್ಪತ್ತಿ ಸಂಗ್ರಹಣೆಗೆ ೨೩ ಸಂಘಗಳಿಗೂ ಏಕರೂಪದ ಕಾನೂನು ಜಾರಿಯಾಗಲಿ-ಮುತ್ತಪ್ಪ:
ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಲ್ಯಾಂಪ್ಸ್ ಮಹಾಮಂಡಲ ಮೈಸೂರು ಇದರ ಅಧ್ಯಕ್ಷ ಮುತ್ತಪ್ಪ ಮಾತನಾಡಿ, ಕಾಡುತ್ಪತ್ತಿ ಸಂಗ್ರಹಣೆಯೇ ಲ್ಯಾಂಪ್ಸ್ ಸಹಕಾರಿ ಸಂಘದ ಮುಖ್ಯ ಉದ್ದೇಶ. ಕಳೆದ ಹಲವುವರ್ಷಗಳನ್ನು ಕಾಡುತೊತ್ತಿ ಸಂಗ್ರಹ ಮಾಡುತ್ತಾ ಬಂದಿರುತ್ತದೆ. ಆದರೆ ಸರಕಾರದ ಒಂದೊಂದು ಜಿಲ್ಲೆಗೆ ಒಂದೊಂದು ರೀತಿಯ ಕಾನೂನು ಮಾಡಿ ತಾರತಮ್ಯದ ಆದೇಶ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಅರಣ್ಯದೊಳಗೆ ಹೋಗಿ ಕಾಡುತ್ಪತ್ತಿ ಸಂಗ್ರಹಿಸಬಹುದು. ದ.ಕ ಜಿಲ್ಲೆಯಲ್ಲಿ ಕಾಡಿಗೆ ಹೋಗುವಂತಿಲ್ಲ. ಹೀಗಾಗಿ ಸರಕಾರ ರಾಜ್ಯದ ೨೩ ಲ್ಯಾಂಪ್ಸ್ ಸಂಘಗಳಿಗೂ ಏಕ ರೂಪದ ಆದೇಶ ಆಗಬೇಕು ಎಂದು ಒತ್ತಾಯಿಸಿದ ಅವರು ಮಹಾಮಂಡಲದಿಂದ ಶೇ.೭ರ ಬಡ್ಡಿದರದಲ್ಲಿ ರೂ೧೫ ಲಕ್ಷ ಅನುದಾನ ನೀಡಿದೆ. ಸಂಘದ ಬೇಡಿಕೆಯಂತೆ ಎಂ,ಎಸ್‌ಬಿಯಲ್ಲಿ ಬಡ್ಡಿ ರಹಿತವಾಗಿ ರೂ.೩೫ ಲಕ್ಷ ನೆರವು ನೀಡಲಾಗುವುದು ಎಂದರು.

ನೆಕ್ಕಿಲಾಡಿಯಲ್ಲಿ ಲ್ಯಾಂಪ್ಸ್‌ನಿಂದ ಪ್ರಥಮ ಬ್ಯಾಂಕಿಂಗ್ ಸೇವೆ-ಪ್ರಶಾಂತ್:
ಸಭಾ ಭನವನನ್ನು ಉದ್ಘಾಟಿಸಿದ ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಎನ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಲ್ಯಾಂಪ್ಸ್ ಸಹಕಾರ ಸಂಘದ ಕೊಡುಗೆ ಅಪಾರ. ಪ್ರಥಮ ಬಾರಿಗೆ ನೆಕ್ಕಿಲಾಡಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ಪ್ರಾರಂಭಿಸಿ ಈ ಭಾಗದ ಜನರ ಆರ್ಥಿಕ ಸಮಸ್ಯೆಗನ್ನು ಪೂರೈಸುವಲ್ಲಿ ಸಂಘವು ಸಹಕಾರಿಯಾಗಿದೆ. ಸಂಘದ ಮುಖಾಂತರ ಇನ್ನಷ್ಟು ಶಾಖೆಗಳು ತೆರೆಯಲಿ ಎಂದು ಹಾರೈಸಿದರು.

ಮಹಾಮಂಡಲದ ನಿರ್ದೇಶಕ ಕಾವೇರಪ್ಪ ಎಚ್.ಡಿ ಕೋಟೆ ಮಾತನಾಡಿ, ಬುಡಕಟ್ಟು ಸಮುದಾಯದ ಸಹಕಾರಿ ಸಂಘಕ್ಕೂ ಇತರ ಸಂಘಕ್ಕೂ ವ್ಯತ್ಯಾಸವಿದೆ. ಲ್ಯಾಂಪ್ಸ್ ಸಹಕಾರಿ ಸಂಘವು ಬುಡಕಟ್ಟು ಸಮುದಾದಯದವರನ್ನು ಅಭಿವೃದ್ಧಿ ಪಡಿಸಲು ಅಡಳಿತ ಮಂಡಲಿ ಪ್ರಯತ್ನಿಸುತ್ತಿದೆ. ಅರಣ್ಯ ಇಲಾಖೆಯ ಹೊಸ ಕಾಯಿದೆಯಿಂದಾಗಿ ಸಂಘಕ್ಕೆ ಈಗ ಕಿರು ಕಾಡುತ್ಪತ್ತಿಗಳನ್ನು ಸಂಗ್ರಹಿಸಲು ಸಮಸ್ಯೆಯಿದೆ. ಈ ಮಾರಕ ಕಾಯಿದೆಯನ್ನು ಹಿಂಪಡೆದು ಎಲ್ಲಾ ೨೩ ಸಂಘಗಳ ಮುಖಾಂತರವೂ ಕಿರು ಕಾಡುತ್ಪತ್ತಿ ಸಂಗ್ರಹಣೆಗೆ ಅವಕಾಶ ನೀಡುವಂತೆ ಸರಕಾರವನ್ನು ಆಗ್ರಹಿಸಬೇಕು ಎಂದರು.

ಲ್ಯಾಂಪ್ಸ್‌ನ ಮಹಾಮಂಡಲದ ನಿರ್ದೇಶಕ ರಂಜನ್, ಲ್ಯಾಂಪ್ಸ್ ಸಹಕಾರ ಸಂಘದ ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಗೌರವಾರ್ಪಣೆ:
ನಿರ್ಮೀತಿ ಕೇಂದ್ರದ ಇಂಜಿನಿಯರ್ ಹರೀಶ್, ಗುತ್ತಿಗೆದಾರ ಆಸೀಫ್ ಕುಂಬ್ರ, ಲ್ಯಾಂಪ್ಸ್ ಮಹಾಮಂಡಲದ ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ಸಹಕರಿಸಿದ ಸೀತಾರಾಮ ನಾಯ್ಕ ಉಪ್ಪಿನಂಗಡಿ, ವಿಶ್ವನಾಥ ನಾಯ್ಕ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ಸಿಬಂದಿಗಳಾದ ಹೊನ್ನಪ್ಪ ನಾಯ್ಕ, ನಾಣ್ಯಪ್ಪ, ಪೂವಪ್ಪ ನಾಯ್ಕ ಕೆ., ರವಿಕಲಾ ಟಿ.ನಾಯ್ಕ, ಕೃಷ್ಣಪ್ಪ ನಾಯ್ಕ ಟಿ., ಹರೀಶ್ ನಾಯ್ಕ, ಸುಮನ್ ರಾಜ್, ಸೇಸಪ್ಪ ನಾಯ್ಕ, ನಿರ್ದೇಶಕರಾದ ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ. ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿಯವರನ್ನು ಗೌರವಿಸಲಾಯಿತು.

ಅನನ್ಯ ಹಾಗೂ ಚೈತನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರು ಸ್ವಾಗತಿಸಿದರು. ಸಂಘದ ನಿರ್ದೇಶಕರು, ಲ್ಯಾಂಪ್ಸ್ ಮಹಾಮಂಡಲದ ಉಪಾಧ್ಯಕ್ಷರಾಗಿರುವ ಮಂಜುನಾಥ ಎನ್.ಎಸ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ವಂದಿಸಿದರು. ನಿರ್ದೇಶಕರಾದ ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ. ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿಯವರು ಅತಿಥಿಗಳನ್ನು ಹೂಗುಚ್ಚ, ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here