ಪುತ್ತೂರು: ಶ್ರೀ ಮಹಾಲಿಂಗೇಶ್ವರದೇವಸ್ಥಾನದ ಉತ್ಸವ ಸಂದರ್ಭ ವಸ್ತ್ರಗಳ ಮಡಿವಂತಿಕೆ ಪರಿಚಾರಕ ವಸಂತ ಅವರ ಚಿಕ್ಕಪುತ್ತೂರು ಮನೆಯ ಭಾಗಶಃ ಕುಸಿದ ಘಟನೆ ಸೆ.25 ರಂದು ನಡೆದಿದೆ.
ವಸಂತ ಮತ್ತು ಮನೆ ಮಂದಿ ಮನೆಯೊಳಗೆ ಇದ್ದಂತೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಶಬ್ದ ಕೇಳಿ ಮನೆ ಮಂದಿ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಅಪಾಯ ಸಂಬಂವಿಸಿಲ್ಲ. ಮನೆ ಕುಸಿತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವಸಂತ್ ಅವರು ತಿಳಿಸಿದ್ದಾರೆ.