ಕವನ: ನವಶಕ್ತಿ

0

*ನವಶಕ್ತಿ*

 

ನಮ್ಮೆಲ್ಲರ ಸಂತೋಷದ ದೀವಿಗೆ

ನಮ್ಮ ನಾಡದೇವಿಗೆ

ಬಂದಿತು ಆಶ್ವಯುಜ ಮಾಸ

ತಂದಿತು ಉಲ್ಲಾಸದ ಹರುಷ

ಒಂಭತ್ತು ಅವತಾರಗಳಿಂದ

ಕಣ್ಮನಸೆಳೆಯುವಳು ತಾಯಿ

ವಿವಿಧ ಭಂಗಿಗಳಲ್ಲಿ

ಪಟ್ಟೆ ಸೀರೆಯನ್ನುಟ್ಟಮಹಾಮಾಯಿ

ದಿನ ದಿನವೂ ಹೊಸ ಅರಿವೆಗಳ

ವಿನ್ಯಾಸ

ಭಕ್ತರಮನೆಗಳಲ್ಲಿ ತಾಯಿಯ

ಆವಾಸ

ಸಾಂಸ್ಕೃತಿಕ  ನಗರಿಯಲ್ಲಿ

ತಾಯಿ ಭುವನೇಶ್ವರಿಗೆ  ಅಂಬಾರಿ ಸವಾರಿ

ನೋಡುಗರಮನಸೂರೆಗೊಂಡಿದೆ

ಈ ವೈಭವದ ಪರಿ

ಭಯ – ಭಕ್ತಿಯಿಂದ ತಾಯಿಯ

ಪೂಜಿಸೋಣನಾವಿಂದು

ದೇವಿಯ ಆಶೀರ್ವಾದವಿರಲಿ

ನಮ್ಮೆಲ್ಲರ ಮೇಲೆ ಎಂದೆಂದೂ….

✍️ *ರಮ್ಯ*

ಸಹ ಶಿಕ್ಷಕಿ ವಿವೇಕಾನಂದ ಆಂಗ್ಲಮಾಧ್ಯಮಶಾಲೆ

ತೆಂಕಿಲ ಪುತ್ತೂರು

LEAVE A REPLY

Please enter your comment!
Please enter your name here