ಜಿ. ಎಲ್. ಆಚಾರ್ಯ ಸ್ವರ್ಣ ಮಳಿಗೆಗಳಲ್ಲಿ ‘ಜಿ.ಎಲ್. ಸ್ವರ್ಣ ಹಬ್ಬʼಕ್ಕೆ ಚಾಲನೆ

0

ಪುತ್ತೂರು; ನಗರದ ಪ್ರತಿಷ್ಠಿತ ಸ್ವರ್ಣಾಭರಣ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳೊಂದಿಗೆ ನಡೆಯಲಿರುವ ‘ಜಿ. ಎಲ್. ಸ್ವರ್ಣ ಹಬ್ಬ’ಕ್ಕೆ ಸೆ.26ರಂದು ಚಾಲನೆ ನೀಡಲಾಯಿತು.

ಸ್ವರ್ಣ ಹಬ್ಬಕ್ಕೆ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಚಿನ್ನಾಭರಣಗಳ ವ್ಯಾಪಾರದಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ರಾಜ್ಯದಲ್ಲಿಯೇ ಆಚಾರ್ಯ ಸ್ಥಾನದಲ್ಲಿದೆ. ಪುತ್ತೂರಿನ ಕೀರ್ತಿಯನ್ನು ಹತ್ತೂರಿಗೂ ಪಸರಿಸಿದ ಕೀರ್ತಿ ಸಂಸ್ಥೆಗಿದೆ. ಕ್ಷಮತೆ ಹಾಗೂ ಬದ್ಧತೆಯೊಂದಿಗೆ ಸಂಸ್ಥೆಯು ಉನ್ನತ ಸ್ಥಾನಕ್ಕೆ ಏರಿದೆ. ತಲ ತಲಾಂತರಗಳಿಂದ ಬಂದಿರುವ ಪರಂಪರೆ ಈಗ ಮೂರನೇ ತಲೆಮಾರಿಗೂ ಮುಂದುವರಿಯುತ್ತಿದೆ. ಸಂಸ್ಥೆಯ ನೌಕರರಿಂದ ಗ್ರಾಹಕರಿಗೆ ನಗುಮೊಗದ ಸೇವೆ ದೊರೆಯುತ್ತಿದ್ದು ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ನಂಬಿಕೆ ಆಧಾರದಲ್ಲಿ ಬೆಳೆದು ಬಂದಿರುವ ಸಂಸ್ಥೆಯು ಗ್ರಾಹಕರನ್ನು ತನ್ನತ್ತ ಸೆಲೆಯುತ್ತಿದೆ ಎಂದರು.

ಸಂಸ್ಥೆಯ ಮ್ಹಾಲಕ ಬಲರಾಮ ಆಚಾರ್ಯ ಸ್ವಾಗತಿಸಿ, ವಂದಿಸಿದರು. ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದ ಲಕ್ಷ್ಮೀಕಾಂತ ಆಚಾರ್ಯ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ಸ್ವರ್ಣ ಹಬ್ಬದ ವಿಶೇಷತೆ:

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 05ರವರೆಗೆ ನಡೆಯುವ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರಿಗೆ ಪ್ರತಿ ಒಂದು ಗ್ರಾಂ ಚಿನ್ನ ಖರೀದಿಗೆ 1 ಗ್ರಾಂ ಬೆಳ್ಳಿಯ ನಾಣ್ಯ ಉಚಿತ, ಪ್ರತೀ ಒಂದು ಕ್ಯಾರೆಟ್ ವಜ್ರಾಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಉಚಿತ, ಬೆಳ್ಳಿಯ ಎಂಆರ್‌ಪಿ ಆಭರಣಗಳ ಮೇಲೆ 5% ರಿಯಾಯಿತಿ ಹಾಗೂ ಪ್ರತೀ 1 ಕೆ.ಜಿ ಬೆಳ್ಳಿಯ ಸಾಮಾಗ್ರಿಗಳ ಮೇಲೆ ರೂ. 2,000/- ರಿಯಾಯಿತಿ ಇದೆ. ಪ್ರಸ್ತುತ ಗ್ರಾಹಕರು ಚಿನ್ನದ ದರ ಇಳಿಕೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಜೊತೆಗೆ 916 ಪರಿಶುದ್ಧತೆಯಲ್ಲಿ ನೂರಾರು ವಿನ್ಯಾಸದ ಮದುವೆ ಚಿನ್ನಾಭರಣಗಳು, ಕರಿಮಣಿ ಸರಗಳು, ಮುತ್ತಿನ ಹಾರಗಳು, ‘ಪ್ರಾಚಿ’ ಲೈಟ್ ವೇಟ್ ಆ್ಯಂಟಿಕ್‌ ಚಿನ್ನಾಭರಣಗಳು, ಜಗಮಗಿಸುವ ಅಂತರಾಷ್ಟ್ರೀಯ ಲ್ಯಾಬ್ ಸರ್ಟಿಫೈಡ್ ‘ಗ್ಲೋ’ ವಜ್ರಾಭರಣಗಳು ಕಂಗೊಳಿಸುವ ಬೆಳ್ಳಿ ಆಭರಣಗಳು ಹಾಗೂ ಪಾತ್ರವಾಗಿದೆ ಎಂದು ಬಲರಾಮ ಆಚಾರ್ಯ ತಿಳಿಸಿದರು.

LEAVE A REPLY

Please enter your comment!
Please enter your name here