ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು, ಸ್ವರ್ಣದಿಂದ ಕೆಸರುಗದ್ದೆ ಕ್ರೀಡಾಕೂಟ

0

ಪುತ್ತೂರು: ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಹಾಗೂ ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣದ ಆಶ್ರಯದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಸರ್ವೆ ಎಲಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಜರಗಿತು.

ಪುತ್ತೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ ಪಿ.ಬಿ. ಅವರು ತೆಂಗಿನಕಾಯಿ ಒಡೆಯುವ ಮೂಲಕ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರೋಟರಿ ಕ್ಲಬ್ ಸದಸ್ಯ ಚಿದಾನಂದ ಬೈಲಾಡಿ ಮುಖ್ಯ ಅತಿಥಿಯಾಗಿದ್ದರು. ರೋಟರ್‍ಯಾಕ್ಟ್ ಜಿಲ್ಲಾ ಪ್ರತಿನಿಧಿ ನಿಖಿಲ್ ಆರ್.ಕೆ., ಕೆನರಾ ವಲಯ ಪ್ರತಿನಿಧಿ ಸಿಯಾಕ್, ರೋಟರಿ ಕ್ಲಬ್ ಜನ ಸೇವಾ ನಿರ್ದೇಶಕ ಪ್ರೇಮಾನಂದ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ರೋಟರ್‍ಯಾಕ್ಟ್ ಸಭಾಪತಿಗಳಾದ ಶ್ರೀಧರ ಆಚಾರ್ಯ, ಸತೀಶ್ ನಾಯಕ್, ರೋಟರ್‍ಯಾಕ್ಟ್ ಸ್ವರ್ಣದ ಅಧ್ಯಕ್ಷೆ ದೀಪಿಕಾ, ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಕಾರ್ಯದರ್ಶಿ ಮಹೇಶ್ಚಂದ್ರ ಉಪಸ್ಥಿತರಿದ್ದರು. ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸಿದ್ದರು.

ವೆಂಕಪ್ಪ ನಾಯ್ಕ ಅವರ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಯುವಕರಿಗೆ ನಿಧಿಶೋಧನೆ, ಉಪ್ಪು ಮೂಟೆ ಓಟ, ೧೦೦ ಮೀಟರ್ ಓಟ, ಮಡಕೆ ಒಡೆಯುವುದು, ಅಪ್ಪಂಗಾಯಿ ಓಟ, ಹಿಂಬದಿ ಓಟ, ಮೂರುಕಾಲಿನ ಓಟ ಸ್ಪರ್ಧೆಗಳು ನಡೆಯಿತು. ಯುವತಿಯರಿಗೆ ನಿಧಿ ಶೋಧನೆ, ಉಪ್ಪು ಮೂಟೆ ಓಟ, ೧೦೦ ಮೀಟರ್ ಓಟ, ಮಡಕೆ ಒಡೆಯುವುದು, ಹಿಂಬದಿ ಓಟ, ಮೂರುಕಾಲಿನ ಓಟ, ಚಮಚದ ಚಮತ್ಕಾರ ಸ್ಪರ್ಧೆ ಹಾಗೂ ಗುಂಪು ಆಟಗಳಾದ ವಾಲಿಬಾಲ್, ತ್ರೋ ಬಾಲ್, ಹಗ್ಗಜಗ್ಗಾಟ ಸ್ಪರ್ಧೆ ಜರಗಿತು.

ಬಹುಮಾನ ವಿತರಣೆ:
ಸಮಾರೋಪದಲ್ಲಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರೋಟರಿ ಕ್ಲಬ್ ಸದಸ್ಯ ಪರಮೇಶ್ವರ ಗೌಡ, ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಕಿಶನ್ ಬಿ.ವಿ., ರೋಟರಿಯ ಮಾಜಿ ಯುವಜನ ಸೇವಾ ನಿರ್ದೇಶಕ ಸುಜಿತ್ ರೈ, ರೋಟರ್‍ಯಾಕ್ಟ್ ಕ್ಲಬ್ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾಪತಿ ಪ್ರೀತಾ ಹೆಗ್ಡೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಉಪನ್ಯಾಸಕಿ ಪ್ರತಿಭಾ ಮುಖ್ಯ ಅತಿಥಿಯಾಗಿದ್ದರು.

ಪುತ್ತೂರು ರೋಟರ್‍ಯಾಕ್ಟ್ ಕ್ಲಬ್ ಸದಸ್ಯರಾದ ಶಶಿಧರ್ ಕೆ. ಮಾವಿನಕಟ್ಟೆ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿ, ಸುಬ್ರಹ್ಮಣಿ ವಂದಿಸಿದರು. ಧನುಷಾ ಹಾಗೂ ಸಾಯಿಶ್ರುತಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಪ್ರಥಮ:
ರೋಟರ್‍ಯಾಕ್ಟ್ ಕ್ಲಬ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ರೋಟರ್‍ಯಾಕ್ಟ್‌ನ ಕೆನರಾ ವಲಯದ ಅಂದರೆ ಪುತ್ತೂರು ರೋಟರ್‍ಯಾಕ್ಟ್ ಕ್ಲಬ್, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ, ರೋಟರ್‍ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು, ರೋಟರ್‍ಯಾಕ್ಟ್ ಎಲೈಟ್ ಕ್ಲಬ್, ರೋಟರ್‍ಯಾಕ್ಟ್ ಕ್ಲಬ್ ತಿಂಗಳಾಡಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ರೋಟರ್‍ಯಾಕ್ಟ್ ಕ್ಲಬ್ ಕೆಸರು ಗದ್ದೆ ಕ್ರೀಡಾಕೂಟ ಜರಗಿತು.

LEAVE A REPLY

Please enter your comment!
Please enter your name here