- ಅಧ್ಯಕ್ಷ ಎಸ್.ಬಿ. ದಾರಿಮಿ, ಪ್ರದಾನ ಕಾರ್ಯದಶಿ೯ ಹಮೀದ್, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಹಾಜಿ ಆಯ್ಕೆ
ಉಪ್ಪಿನಂಗಡಿ: ಸುನ್ನೀ ಮಹಲ್ ಫೆಡರೇಶನ್ ಉಪ್ಪಿನಂಗಡಿ ವಲಯ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿ, “ಸಮಸ್ತ”ದ ಮಾರ್ಗದರ್ಶನದಂತೆ ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗಿ ನೂತನ ಅಧ್ಯಕ್ಷರಾಗಿ ಎಸ್.ಬಿ. ಮಹಮ್ಮದ್ ದಾರಿಮಿ ಉಪ್ಪಿನಂಗಡಿ, ಪ್ರಧಾನ ಕಾರ್‍ಯದರ್ಶಿಯಾಗಿ ಬಿ.ಎ. ಹಮೀದ್ ಕರಾವಳಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್ ಆಯ್ಕೆಯಾಗಿದ್ದಾರೆ.
ವಲಯ ಸಮಿತಿಯ ಚುನಾವಣಾ ಉಸ್ತುವಾರಿ ನಝೀರ್ ಅಝ್‌ಹರಿ, ಸಯ್ಯದ್ ಅನಸ್ ತಂಗಳ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದು ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಸಯ್ಯದ್ ಅನಸ್ ತಂಗಳ್, ಅಶ್ರಫ್ ಹಾಜಿ ಸಿಟಿ., ಹಸೈನಾರ್ ಹಾಜಿ, ಜತೆ ಕಾರ್ಯದರ್ಶಿಗಳಾಗಿ ಹೆಚ್. ಯೂಸುಪ್ ಹಾಜಿ, ಮುಹಮ್ಮದ್ ಕರುವೇಲ್, ಅಬ್ದುಲ್ ಸಮದ್ ಕೂಕ್ಕಡ, ಜಿಲ್ಲಾ ಕೌನ್ಸಿಲರ್‌ಗಳಾಗಿ ಅದ್‌ನಾನ್ ಅನ್ಸಾರಿ, ಅಬೂಬಕ್ಕರ್ ಹಾಜಿ ಕೆ.ಕೆ., ಸದಸ್ಯರುಗಳಾಗಿ ಯೂಸುಫ್ ಹಾಜಿ ಪೆದಮಲೆ, ಮಹಮ್ಮದ್ ಕೂಟೇಲ್ ಇವರುಗಳನ್ನು ಆಯ್ಕೆ ಮಾಡಲಾಯಿತು.