ಎನ್‌ಆರ್‌ಎಲ್‌ಎಂ ಪ್ರಗತಿ ಪರಿಶೀಲನಾ ಸಭೆ

0

ಸುದ್ದಿ ಕೃಷಿ ಕೇಂದ್ರದ ಮಾಹಿತಿ ನೀಡಿದ ಡಾ. ಯು.ಪಿ. ಶಿವಾನಂದ್

ಪುತ್ತೂರು: ಎನ್‌ಆರ್‌ಎಲ್‌ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಯೋಜನೆಯ ಪುತ್ತೂರು ಹಾಗೂ ಕಡಬ ತಾಲೂಕಿನ ಸ್ವಸಹಾಯ ಸಂಘಗಳ ಪ್ರಗತಿ ಪರಿಶೀಲನಾ ಸಭೆ ಸೆ. 27ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು.

ಇದೇ ಸಂದರ್ಭ ಸುದ್ದಿ ಕೃಷಿ ಕೇಂದ್ರದ ಬಗ್ಗೆ ಡಾ. ಯು.ಪಿ. ಶಿವಾನಂದ್ ಅವರು ಮಾಹಿತಿ ನೀಡಿದರು. ಎನ್‌ಆರ್‌ಎಲ್‌ಎಂ ಯೋಜನೆಯ ಸಂಜೀವಿನಿ ಒಕ್ಕೂಟದ ಸದಸ್ಯರು ತಯಾರಿಸುವ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಹಕಾರವನ್ನು ನೀಡಲು ಸುದ್ದಿ ಕೃಷಿ ಕೇಂದ್ರ ಸಿದ್ಧವಿದೆ. ಇದರೊಂದಿಗೆ ಇಲಾಖೆಯ ಮಾಹಿತಿಯನ್ನು ಒದಗಿಸುವ, ಇಲಾಖಾ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಕೃಷಿಕರಿಗೆ ತರಬೇತಿ ನೀಡುವ ದಿಶೆಯಲ್ಲಿ ಸುದ್ದಿ ಕೃಷಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಸುದ್ದಿ ಕೃಷಿ ಕೇಂದ್ರದ ಕನ್ಸಲ್ಟಿಂಗ್ ಅಡ್ವೈಸರ್ ಚೇತನ್ ಶರ್ಮಾ ಮಾತನಾಡಿ, ಸುದ್ದಿ ಕೃಷಿ ಕೇಂದ್ರ 5 ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದೆ. ಕಾಲ್‌ಸೆಂಟರ್, ಮಾರ್ಗದರ್ಶನ, ತರಬೇತಿ, ಘಟಕ ನಿರ್ಮಾಣಕ್ಕೆ ಸಹಕಾರ ಹಾಗೂ ಪ್ರಚಾರ ಅಥವಾ ಮಾರುಕಟ್ಟೆ ಬೆಂಬಲವನ್ನು ಸುದ್ದಿ ಕೃಷಿ ಕೇಂದ್ರ ನೀಡಲಿದೆ. ಇದರೊಂದಿಗೆ ಕೃಷಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲಿದೆ ಎಂದು ವಿವರಿಸಿದರು.

ಈ ಸಂದರ್ಭ ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಕಡಬ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಜಿಲ್ಲಾ ಪಂಚಾಯತ್‌ನ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ತಾಪಂ ತಾಲೂಕು ಯೋಜನಾಽಕಾರಿ ಸುಕನ್ಯಾ, ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಎನ್‌ಆರ್‌ಎಲ್‌ಎಂ ಪುತ್ತೂರು ವಲಯ ಮೇಲ್ವಿಚಾರಕಿ ನಮಿತಾ ಕೆ., ಸಂಯೋಜಕರಾದ ದಿವ್ಯಲಕ್ಷ್ಮೀ, ಯಕ್ಷಿತಾ ಉಪಸ್ಥಿತರಿದ್ದರು.

ಸಹಾಯಧನದ ಚೆಕ್ ವಿತರಣೆ

ಸಮಾಜ ಕಲ್ಯಾಣ ಇಲಾಖೆ ಮತ್ತು ಎನ್‌ಆರ್‌ಎಲ್‌ಎಂನ ಪ್ರಧಾನ ಮಂತ್ರಿ ಪರಿಶಿಷ್ಟ ಜಾತಿಗಳ ಅಭ್ಯುದಯ ಯೋಜನೆಯಡಿ ಪುತ್ತೂರು ತಾಲೂಕಿನ ೨೭ ಸ್ವಸಹಾಯ ಸಂಘ ಹಾಗೂ ಕಡಬ ತಾಲೂಕಿನ ೨೨ ಸ್ವಸಹಾಯ ಸಂಘದ ಸದಸ್ಯರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಬಿ.ರವರು ಚೆಕ್ ವಿತರಿಸಿದರು.

LEAVE A REPLY

Please enter your comment!
Please enter your name here