ಸೆ.30: ಆಲಂಕಾರು ಸಿ.ಎ ಬ್ಯಾಂಕ್ ಹಿರಿಯ ಶಾಖಾ ವ್ಯವಸ್ಥಾಪಕ ಆರುವಾರ ಬಾಳಿಕೆ ಸಂತೋಷ್ ರೈ ಸಬಳೂರು ಸೇವಾ ನಿವೃತ್ತಿ

0

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾದ ಆರುವಾರ ಬಾಳಿಕೆ ಸಂತೋಷ ರೈ ಸಬಳೂರು ಸೆ.30 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ. ‘

ಆರುವಾರ ಸಂತೋಷ ರೈ ಸಬಳೂರು ರವರು ಆರುವಾರ ಬಾಳಿಕೆ ದಿ.ಶೀನಪ್ಪ ರೈ ಹಾಗು ಕೌಡೂರು ದಿ.ಸುನಂದಾ ಎಸ್ ರೈ ದಂಪತಿಗಳ ಮಗನಾಗಿ ಸಬಳೂರಿನಲ್ಲಿ ಜನಿಸಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಸಬಳೂರು ಹಾಗು ರಾಮಕುಂಜದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಪ್ರೌಡ ಶಿಕ್ಷಣವನ್ನು ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ಯಲ್ಲಿ ಪಡೆದು ಆನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸರಕಾರಿ ಜ್ಯೂನಿಯರ್ ಕಾಲೇಜ್ ಉಪ್ಪಿನಂಗಡಿಯಲ್ಲಿ ಪಡೆದು,ಪದವಿ ಶಿಕ್ಷಣ ವನ್ನು ಸೈಂಟ್ ಫೀಲೋಮಿನಾ ಕಾಲೇಜ್ ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದು ಸಹಕಾರಿ ಡಿಪ್ಲೋಮ ವನ್ನು ಸಹಕಾರಿ ತರಬೇತಿ ಮೂಡಬಿದ್ರೆಯಲ್ಲಿ ಪಡೆದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 1988ರಲ್ಲಿ ಗುಮಸ್ತನಾಗಿ ಸೇವೆ ಸೇರ್ಪಡೆಗೊಂಡು ನಂತರ ವಿವಿದ ಹುದ್ದೆಗಳನ್ನು ಆಲಂಕಾರಿಸಿ ಮಾರಾಟ ವ್ಯವಸ್ಥಾಪಕರಾಗಿ ಕುಂತೂರು ಬ್ಯಾಕಿಂಗ್ ವಿಭಾಗದಲ್ಲಿ ಮ್ಯಾನೇಜರ್ ಆಗಿ ಸಂಘದ ಪ್ರದಾನ ಕಛೇರಿಯಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಒಟ್ಟು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಾಳೆ ಸೆ.30 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.

.ಸೆ.30 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಪರಾಹ್ನ 3:30 ಕ್ಕೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here