ಸೆಲ್ ಝೋನ್‌ನಲ್ಲಿ ಸ್ಮಾರ್ಟ್ ಪೋನ್ ಫೆಸ್ಟ್- ಪ್ರತೀ ತಿಂಗಳು ಟಿವಿಎಸ್ ಜುಪಿಟರ್ ಸಹಿತ 5 ಎಲ್‌ಇಡಿ ಟಿವಿ ಗೆಲ್ಲುವ ಅವಕಾಶ

0

ಪುತ್ತೂರು: ಪುತ್ತೂರಿನಲ್ಲಿ ಸುಮಾರು 22 ವರ್ಷಗಳಿಂದ ನಗುಮೊಗದ ಸೇವೆಯೊಂದಿಗೆ ಜನತೆಯ ಮನೆಮಾತಾಗಿರುವ ಪ್ರತಿಷ್ಠಿತ ಮೊಬೈಲ್ ಮಳಿಗೆ ಸೆಲ್ ಝೋನ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ ಸ್ಮಾರ್ಟ್ ಪೋನ್ ಫೆಸ್ಟ್ ಆಯೋಜಿಸಲಾಗಿದ್ದು, ಸ್ಮಾರ್ಟ್ ಪೋನ್ ಖರೀದಿಸಿ ಸ್ಕ್ರ್ಯಾಚ್ ಕೂಪನ್ ಪಡೆಯುವ ಅವಕಾಶದೊಂದಿಗೆ ಪ್ರತಿ ತಿಂಗಳು 1 ಟಿವಿಎಸ್ ಜುಪಿಟರ್ ಸ್ಕೂಟರ್ ಮತ್ತು 5 ಎಲ್‌ಇಡಿ ಟಿವಿಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿರುವ ದಸರಾ ಹಬ್ಬದ ಅಂಗದ ಸ್ಮಾರ್ಟ್ ಪೋನ್ ಫೆಸ್ಟ್‌ನಲ್ಲಿ ಈ ಕೊಡುಗೆಗಳಿದ್ದು, 2023ನೇ ಜ.10ರ ತನಕ ಈ ಕೊಡುಗೆಗಳಿವೆ. ಸ್ಮಾರ್ಟ್ ವಾಚ್, ಏರ್‌ಪೋಡ್, ತವಾ, ನೆಕ್‌ಬ್ಯಾಂಡ್, ಇಯರ್ ಪೋನ್, ಸರ್‌ಪ್ರೈಜ್ ಉಡುಗೊರೆಗಳನ್ನು, ಖಚಿತ ಬಹುಮಾನಗಳನ್ನು ಜೊತೆಗೆ ಕ್ಯಾಶ್‌ಬ್ಯಾಕ್ ವೋಚರ್‌ಗಳ ಸೌಲಭ್ಯ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here