ಬಾಲವನ ತಿಂಗಳ ಸಂಭ್ರಮದಲ್ಲಿ ‘ಕಾವ್ಯ-ಕಲರವ’ ಉದ್ಘಾಟನೆ

0

ನಿರಂತರ ಅಭ್ಯಾಸವಿರಲಿ-ಕವಿಗಳಿಗೆ ಪ್ರೊ|ವಿ.ಬಿ ಅರ್ತಿಕಜೆ ಸಲಹೆ

ಪುತ್ತೂರು:ಸಾಹಿತ್ಯಗಳ ನಿರಂತರ ಅಭ್ಯಾಸದಿಂದ ಯುವ ಕವಿಗಳು ಬೆಳೆಯಲು ಸಾಧ್ಯ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ|ವಿ.ಬಿ.ಅರ್ತಿಕಜೆ ಹೇಳಿದರು.

ಡಾ|ಶಿವರಾಮ ಕಾರಂತರ ಬಾಲವನನದಲ್ಲಿ ನಡೆದ ತಿಂಗಳ ಸಂಭ್ರಮದ ‘ಕಡಲೂರಿನ ಲೇಖಕರು’ ಇವರ ಆಶ್ರಯದಲ್ಲಿ ಸೆ.28ರಂದು ನಡೆದ ‘ಕಾವ್ಯ ಕಲರವ’ವನ್ನು ಅವರು ಉದ್ಘಾಟಿಸಿ, ಕವಿಗೋಷ್ಠಿಯ ಬಳಿಕ ಮಾತನಾಡಿದರು. ನಿರಂತರ ಅಭ್ಯಾಸ ಮತ್ತು ಹಿರಿಯರಿಂದ ಮಾರ್ಗದರ್ಶನ ಪಡೆಯುವ ಗುಣದಿಂದ ಯುವ ಕವಿಗಳು ಬೆಳೆಯಲು ಸಾಧ್ಯ ಎಂದರು.ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಅವರು ಮಾತನಾಡಿ ಬಾಲವನದಲ್ಲಿ ಒಂದು ಗಂಟೆ ಮೌನವಾಗಿದ್ದರೂ ಕವಿತೆ, ಕವನ ಸ್ವರೂಪ ಪಡೆದು ಲಹರಿಯಲ್ಲಿ ಪ್ರಕಟವಾಗುತ್ತದೆ.ಕವಿಗೋಷ್ಠಿಯಿಂದ ಪ್ರಶಸ್ತಿ ಪಡೆದ ತಕ್ಷಣ ಬಹಳ ಉನ್ನತ ಎಂದು ಅರಿಯಬಾರದು.ಕಲಿಯುವಂತಹದು ಬಹಳಷ್ಟಿದೆ.ಕವನದಲ್ಲಿ ಲೋಪದೋಷವಿದ್ದರೆ ಹಿರಿಯರಾದ ಅರ್ತಿಕಜೆಯವರಿಂದ ಸಲಹೆ ಪಡೆಯಬೇಕು ಎಂದರು.ಗಾಂಽ ವಿಚಾರ ವೇದಿಕೆ ಅಧ್ಯಕ್ಷ, ಸಾಹಿತಿ ಅರವಿಂದ ಚೊಕ್ಕಾಡಿ ಉಪನ್ಯಾಸ ನೀಡಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕ್ಸೇವಿಯರ್ ಡಿ ಸೋಜ, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಸಂದರ್ಭೋಚಿತವಾಗಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್ ಅಧ್ಯಕ್ಷತೆ ವಹಿಸಿದ್ದರು.ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಬ್ದುಲ್ ಸಮದ್ ಬಾವ, ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಸಹಿತ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಸುಮಾರು ೩೫ಕ್ಕೂ ಅಽಕ ಮಂದಿ ಕವಿಗೋಷ್ಠಿಯಲ್ಲಿ ಭಾಗಿಯಾದರು.ಕಡಲೂರಿನ ಲೇಖಕ ಬಳಗದ ಅಧ್ಯಕ್ಷೆ ಜೆಸ್ಸಿ ಸ್ವಾಗತಿಸಿದರು.ಕಡಲೂರಿನ ಲೇಖಕ ಬಳಗದ ಕಾರ್ಯದರ್ಶಿ ನಳಿನಿ, ಉಪಾಧ್ಯಕ್ಷೆ ಇಂದಿರಾ, ಕಾರ್ಯಕಾರಿ ಸಮಿತಿ ಸದಸ್ಯ ಆಸೀಫ್, ಸಫ್ವಾನ್ ಸವಣೂರು, ನಾರಾಯಣ ಭಟ್, ಶಾಂತ, ಹರಿಣಾಕ್ಷಿ ಕಕ್ಕೆಪದವು ಅತಿಥಿಗಳನ್ನು ಗೌರವಿಸಿದರು.ಇಂದಿರಾ ಪಿ ವಂದಿಸಿದರು.

LEAVE A REPLY

Please enter your comment!
Please enter your name here