ಸೆ.30: ಕೋಡಿಂಬಾಡಿ ಶಾಲಾ ಶಿಕ್ಷಕಿ ಲಕ್ಷ್ಮೀ ರೈ ಸೇವಾ ನಿವೃತ್ತಿ

0

ಪುತ್ತೂರು : ಕೋಡಿಂಬಾಡಿ ಹಿ.ಪ್ರಾ.ಶಾಲಾ ಸಹಶಿಕ್ಷಕಿ ಲಕ್ಷ್ಮಿ ಕೆ.ರವರು ಸೆ.೩೦ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಕೋಡಿಂಬಾಡಿ ಬರೆಮೇಲು ನಿವಾಸಿ ಆದಪ್ಪ ಶೆಟ್ಟಿ ಮತ್ತು ಕಮಲಾ ದಂಪತಿ ಪುತ್ರಿಯಾಗಿ ೧೯೬೨ರಲ್ಲಿ ಜನಿಸಿದ ಲಕ್ಷ್ಮೀ ರೈರವರು ಕೋಡಿಂಬಾಡಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಪ.ಪೂ.ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಮಂಗಳೂರು ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದಿದ್ದರು.

೧೯-೧೦-೧೯೮೯ರಲ್ಲಿ ಬೆಳ್ಳಿಪ್ಪಾಡಿ ಗ್ರಾಮದ ಕೈಪ ರಾಘವೇಂದ್ರ ರೈರವರನ್ನು ವಿವಾಹವಾದ ಇವರು ಕೋಡಿಂಬಾಡಿ ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿದ ಬಳಿಕ ಮಜೀದಿಯಾ ದೋರ್ಮೆ ಖಾಸಗಿ ಹಿ.ಪ್ರಾ.ಶಾಲೆ ಪೆರ್ನೆಯಲ್ಲಿ ಗೌರವಶಿಕ್ಷಕಿಯಾಗಿ ೨೨-೦೫-೧೯೯೫ರಿಂದ ೬ ತಿಂಗಳ ಕಾಲ ಬೆಳ್ಳಿಪ್ಪಾಡಿ ಅಂಗನವಾಡಿ ಕಾರ್ಯಕರ್ತೆಯಾಗಿ, ೧೨-೦೧-೧೯೯೬ರಿಂದ ೨೭-೦೫-೨೦೧೫ರವರೆಗೆ ನೆಕ್ಕಿಲಾಡಿ ಹಿ.ಪ್ರಾ.ಶಾಲೆಯಲ್ಲಿ ೨೮-೦೫-೨೦೧೫ ರಿಂದ ೩೦-೦೯-೨೦೨೨ರವರೆಗೆ ಕೋಡಿಂಬಾಡಿ ಹಿ.ಪ್ರ.ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತಯ ನಿರ್ವಹಿಸಿದ್ದಾರೆ. ಇವರು ಪ್ರಸ್ತುತ ಬೆಳ್ಳಿಪ್ಪಾಡಿ ಕೈಪದಲ್ಲಿ ಪತಿ ರಾಘವೇಂದ್ರ ರೈ, ಪುತ್ರ ರಕ್ಷಿತ್ ಆರ್. ರೈ, ಸೊಸೆ ಕಾವ್ಯ ಶೆಟ್ಟಿ ಮತ್ತು ಮೊಮ್ಮಗಳು ಗೌರಿ ಆರ್. ರೈಯವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here