ಕಡಬ; ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ

0

ಲಂಚ ಕೇಳಿದರೆ ಮಾಹಿತಿ ನೀಡಿ-ಚೆಲುವರಾಜ್

ಕಡಬ: ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರಗಿತು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ವಿಭಾಗದ ಮಂಗಳೂರು ಡಿವೈಎಸ್ಪಿ ಚೆಲುವರಾಜ್ ಮಾತನಾಡಿ ಸರಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಕಾನೂನಿನ ವ್ಯಾಪ್ತಿಯೊಳಗೆ ಮಾಡಿಕೊಡಬೇಕಾದ ಕೆಲಸದಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ, ಕೆಲಸ ಮಾಡಲು ಲಂಚ ಕೇಳಿದರೆ ನೇರವಾಗಿ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದರು. ಬಳಿಕ ಸಾರ್ವಜನಿಕರಿಂದ ಜಾಗದ ತಕರಾರು, ರಸ್ತೆಯ ಸಮಸ್ಯೆ, ಅಧಿಕಾರಿಗಳಿಂದ ಕೆಲಸದಲ್ಲಿ ವಿಳಂಬ, ಜಾಗದ ನಕ್ಷೆಯ ಸಮಸ್ಯೆಗಳು ಸೇರಿದಂತೆ ಹಲವಾರು ದೂರುಗಳು ಸಲ್ಲಿಕೆಯಾದವು. ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜ್ ಅವರು ನ್ಯಾಯಯುತವಾಗಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿಕೊಡುವಂತೆ ಅಽಕಾರಿಗಳಿಗೆ ಸೂಚಿಸಿದರು. ಕಡಬ ಉಪ ತಹಶೀಲ್ದಾರ್ ಮನೋಹರ್ ಕೆ.ಟಿ., ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಗ್ರಾಮ ಕರಣಿಕೆ ಶಶಿಕಲಾ, ಭೂ ಮಾಪನ ಇಲಾಖೆಯ ಚಂದ್ರಶೇಖರ್, ಲೋಕಾಯುಕ್ತ ಪೊಲೀಸ್ ಸಿಬ್ಬಂದಿಗಳಾದ ಶರತ್ ಸಿಂಗ್, ಗಾಯತ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here