ನಿಡ್ಪಳ್ಳಿ; ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪಾಣಾಜೆ ಮತ್ತು ಗ್ರಾಮ ಪಂಚಾಯತ್ ಪಾಣಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಪಾಣಾಜೆ ಗ್ರಾಮದ 8 ಕೇಂದ್ರಗಳಲ್ಲಿ ಹುಚ್ಚುನಾಯಿ ರೋಗದ ವಿರುದ್ದ ಉಚಿತ ಲಸಿಕಾ ಕಾರ್ಯಕ್ರಮ ಸೆ. 28 ರಂದು ನಡೆಯಿತು.
ಗ್ರಾಮ ಪಂಚಾಯತ್ ಅದ್ಯಕ್ಷರಾದ ಭಾರತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಉಪಾದ್ಯಕ್ಷ ಅಬೂಬಕ್ಕರ್.ಕೆ ಹಾಗೂ ಪಂಚಾಯತ್ ಸದಸ್ಯರು ,ಪಿಡಿಓ ಚಂದ್ರಮತಿ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಲಸಿಕಾ ಕಾರ್ಯವನ್ನು ಜಾನುವಾರು ಅಧಿಕಾರಿ ಪುಷ್ಪರಾಜ ಶೆಟ್ಚಿ ನೆರವೇರಿಸಿದರು. ಪಶುವೈದ್ಯ ಪರೀಕ್ಷಕರು ಪಶು ಚಿಕಿತ್ಸಾ ಕೇಂದ್ರ ಕೌಡಿಚ್ಚಾರು ಇಲ್ಲಿಯ ವೀರಪ್ಪ ಜಮೇದಾರ್, ಹಿರಿಯ ಡಿ . ಗ್ರೂಪ್ ಸಿಬ್ಬಂದಿ ಪ್ರದೀಪ ಇವರು ಸಹಕರಿಸಿದರು. ಸುಮಾರು 210 ನಾಯಿಗಳಿಗೆ ಲಸಿಕೆ ಹಾಕಲಾಯಿತು.