ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿಂದ ವ್ಹೀಲ್ ಚೇರ್ ಕೊಡುಗೆ

ಪುತ್ತೂರು: ವಿಕಲಚೇತನ ಚೈತ್ರಾ ಅವರಿಗೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ನಿಂದ ವ್ಹೀಲ್ ಚೇರನ್ನು ಕೊಡುಗೆಯಾಗಿ ನೀಡಲಾಯಿತು. ಅರಿಯಡ್ಕದ ಪಾಪೆಮಜಲು ನಿವಾಸಿಯಾಗಿರುವ ಚೈತ್ರಾ ಅವರು, ಪದವಿ ವ್ಯಾಸಂಗವನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದ್ದಾರೆ. ಹುಟ್ಟಿನಿಂದಲೇ ಅಂಗವಿಕಲೆಯಾಗಿರುವ ಇವರು, ತಮ್ಮ ದೈನಂದಿನ ಕೆಲಸ ಕಾರ್ಯಕ್ಕೂ ಹೆತ್ತವರನ್ನೇ ಅವಲಂಭಿಸಿದ್ದಾರೆ.
ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಶುಭಹಾರೈಸಿದರು. ಸಭಾಪತಿ ಶ್ರೀಧರ್ ಆಚಾರ್ಯ, ಸದಸ್ಯರಾದ ನವೀನ್ಚಂದ್ರ, ಸುಬ್ರಹ್ಮಣಿ, ಶ್ರೇಯಸ್, ವಿಜಯ್, ಯಶವಂತ್ ಹಾಗೂ ಚೈತ್ರಾ ಅವರ ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.