ಗಾಂಧಿ ಜಯಂತಿ ಪ್ರಯುಕ್ತ ಮುಂಡೂರು ಶಾಲೆಯಲ್ಲಿ ಸರ್ವಧರ್ಮ ಪ್ರಾರ್ಥನೆ

0

ಪುತ್ತೂರು: ಮಕ್ಕಳಿರುವಾಗಲೇ ಸತ್ಯವನ್ನು ಮೈಗೂಡಿಸಿಕೊಂಡರೆ ದೊಡ್ಡವರಾದ ಮೇಲೂ ಸತ್ಯದ ದಾರಿಯಲ್ಲೇ ಮುನ್ನಡೆಯಲು ಕಾರಣವಾಗುತ್ತದೆ. ಸತ್ಯ ಮತ್ತು ಅಹಿಂಸೆಯ ಧ್ಯೋತಕವಾಗಿರುವ ಗಾಂಧೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೋರ್ವರೂ ಪ್ರಯತ್ನಿಸಬೇಕೆಂದು ಮುಂಡೂರು ಸ.ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ವಿಜಯಾ ಪಿ ಹೇಳಿದರು.


ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಅ.2ರಂದು ಮುಂಡೂರು ಶಾಲೆಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಅಧ್ಯಕ್ಷತೆ ವಹಿಸಿದ್ದರು.
ದೈ.ಶಿ.ಶಿಕ್ಷಕಿ ವನಿತಾ ಬಿ ಸ್ವಾಗತಿಸಿದರು. ಶಿಕ್ಷಕ ರವೀಂದ್ರ ಶಾಸ್ತ್ರಿ ವಂದಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು. ಸರ್ವಧರ್ಮೀಯ ಪ್ರಾರ್ಥನೆ ಹಿನ್ನೆಲೆಯಲ್ಲಿ ಸರ್ವ ಧರ್ಮೀಯ ಚಿಹ್ನೆಯನ್ನು ಅಳವಡಿಸಲಾಗಿತ್ತು.

ಗಾಂಧಿ ನೋಡಿ ಖುಷಿಪಟ್ಟ ಮಕ್ಕಳು…!
ಗಾಂಧಿ ವೇಷಭೂಷಣ ತೊಟ್ಟಿದ್ದ ಮುಂಡೂರು ಗ್ರಾ.ಪಂ ಸದಸ್ಯರು, ಮುಂಡೂರು ಶಾಲಾ ಎಸ್‌ಡಿಎಂಸಿ ನಾಮನಿರ್ದೇಶಿತ ಸದಸ್ಯರೂ ಆಗಿರುವ ಉಮೇಶ್ ಗೌಡ ಅಂಬಟರವರು ವೇದಿಕೆಯಲ್ಲಿ ಚರಕದ ಎದುರು ಕುಳಿತುಕೊಂಡು ಗಮನ ಸೆಳೆದರು. ನಂತರ ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗಾಂಧಿ ವೇಷಭೂಷಣ ತೊಟ್ಟಿದ್ದ ಉಮೇಶ್ ಅಂಬಟರವರಿಗೆ ನಮಸ್ಕರಿಸಿದರು. ಒಟ್ಟಿನಲ್ಲಿ ಗಾಂಧೀಜಿ ವೇಷಭೂಷಣಗಳೊಂದಿಗೆ ಗಮನ ಸೆಳೆದಿದ್ದ ಉಮೇಶ್ ಗೌಡ ಅಂಬಟರವರನ್ನು ನೋಡಿ ಮಕ್ಕಳು ಖುಷಿಪಟ್ಟರು.

LEAVE A REPLY

Please enter your comment!
Please enter your name here