ಈಶ್ವರಮಂಗಲದಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ

0

ಮದ್ಯವರ್ಜನದಿಂದ ಸುಖ ಸಂತೋಷದ ಜೀವನ ನಡೆಸಲು ಸಾಧ್ಯ: ಬಡಗನ್ನೂರು

ಈಶ್ವರಮಂಗಲ: ಗಾಂಧೀಜಿಯವರು ಮದ್ಯ ನಿಮೂರ್ಲನೆ ಮೂಲಕ ರಾಮರಾಜ್ಯದ ಆಶಯವಾಗಿತ್ತು.ಅದೇ ರೀತಿ ಖಾವಂದರು ಗಾಂಧೀಜಿಯವರ ಆದರ್ಶಗಳನ್ನೂ,ತತ್ವಗಳನ್ನು, ಸಮಾಜದಲ್ಲಿ ಅನುಷ್ಟಾನಗ್ಗೊಳಿಸಿ ಸಾಕಾರಗೊಳಿಸುವ ಪ್ರಯತ್ನ ನಡೆದಿದೆ.ಮದ್ಯವರ್ಜನ ಶಿಬಿರ ಮೂಲಕ ಸುಖ ಸಂತೋಷದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪುತ್ತೂರು ತಾ.ಪ.ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೇಳಿದರು.
ಅವರು ಈಶ್ವರ ಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ರವಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ಇದರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಪುತ್ತೂರು, ನವ ಜೀವನ ಸಮಿತಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ಇವುಗಳ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿಯವರ 153 ನೇ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲ ಮಾತನಾಡಿದರು.
ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಉದ್ಘಾಟಿಸಿ ಮಾತನಾಡಿ ಗಾಂಧೀಜಿಯವರು ಸರಳ ಉಡುಪುಗಳನ್ನು ಉಪಯೋಗಿಸಿ ಸಮಾಜಕ್ಕೆ ಮಾದರಿಯಾಗಿದ್ದರು.ಅವರ ಆದರ್ಶಗಳು ನಾವು ಪಾಲಿಸಿಕೊಂಡು ಗ್ರಾಮ ಅಭಿವೃದ್ಧಿಗೆ ಕಾರಣವಾಗಬೇಕಾಗಿದೆ. ಮದ್ಯ ವರ್ಜನ ಶಿಬಿರ ಪುಣ್ಯದ ಕೆಲಸ.ಇದರಿಂದ ಕುಟುಂಬದಲ್ಲಿ ಸುಖ ಸಂಸಾರ ಉದ್ದೀಪನಗೊಂಡು ಜೀವನ ಅಭಿವೃದ್ಧಿ ಗೊಳ್ಳಲು ಸಾಧ್ಯ ಎಂದು ಹೇಳಿದರು.

1562ನೆ ಮಧ್ಯವರ್ಧನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಕ್ರಮ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯಬೇಕಾದರೆ ಸುಂದರ ಜೀವನ ಪದ್ಧತಿಯನ್ನು ಅಳವಡಿಸುವುದು ಮುಖ್ಯ ಎಂದು ಹೇಳಿದರು. ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹಾಬಲ ರೈ, ಮಾಜಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ನೆಟ್ಟಣಿಗೆ ಮುಡ್ನುರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಮೇನಾಲ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಹಿಮಾನ್ ಹಾಜಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅರಿಯಡ್ಕ ವಲಯದ ನವೀನಾ ಬಿ. ಡಿ, ಕುರ್ತಿಗೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್ ಪಾಂಬಾರು ಉಪಸ್ಥಿತರಿದ್ದರು.


ಪುತ್ತೂರು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಆನಂದ್ ಕೆ ಸ್ವಾಗತಿಸಿದರು. ಮೇನಾಲ ಒಕ್ಕೂಟದ ಸೇವಾ ಪ್ರತಿನಿಧಿ ಸುಂದರ್ ಜಿ ವಂದಿಸಿದರು ಅರಿಯಡ್ಕ ವಲಯದ ಮೇಲ್ವಿಚಾರಕ ಮೋಹನ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here