ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ 2021ನೇ ಇಸವಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದಿದ್ದ ಗ್ರಾಮ ಸ್ವರಾಜ್ಯ ಗಾಂಧಿ ನಡಿಗೆ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಮುಂಡೂರು ಗ್ರಾಮ ಪಂಚಾಯತ್‌ಗೆ ಪ್ರಶಸ್ತಿ ಮತ್ತು ಅಭಿನಂದನಾ ಪತ್ರವನ್ನು ಸೆ.30ರಂದು ಮುಂಡೂರು ಗ್ರಾ.ಪಂ.ನಲ್ಲಿ ವಿತರಿಸಲಾಯಿತು.
ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಊರುಬೈಲು ಪ್ರಶಸ್ತಿ ಪತ್ರವನ್ನು ಗ್ರಾ.ಪಂ.ಗೆ ನೀಡಿ ಅಭಿನಂದಿಸಿದರು. ಸುದ್ದಿ ಬಿಡುಗಡೆ ವರದಿಗಾರ ಯೂಸುಫ್ ರೆಂಜಲಾಡಿಯವರು ಪ್ರಶಸ್ತಿ ವಿತರಿಸಿದರು.
ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ ಹಾಗೂ ಕರುಣಾಕರ ಗೌಡ ಎಲಿಯ ಸಂದರ್ಭೋಚಿತವಾಗಿ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷೆ ಪ್ರೇಮಾ ಎಸ್, ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್, ಸದಸ್ಯರಾದ ಉಮೇಶ್ ಗೌಡ ಅಂಬಟ, ಬಾಬು ಕಲ್ಲಗುಡ್ಡೆ, ಬಾಲಕೃಷ್ಣ ಪೂಜಾರಿ ಕುರೆಮಜಲು, ದುಗ್ಗಪ್ಪ ಕಡ್ಯ, ಕಾವ್ಯ ತೌಡಿಂಜ, ಅರುಣಾ ಕಣ್ಣಾರ್ನೂಜಿ, ದೀಪಿಕಾ ಕಲ್ಲಗುಡ್ಡೆ, ಯಶೋಧ ಅಜಲಾಡಿ, ಸುನಂದ, ವಿಜಯ ಕರ್ಮಿನಡ್ಕ, ಸಿಬ್ಬಂದಿಗಳಾದ ದೇವಪ್ಪ ನಾಯ್ಕ ಕೇದಗೆದಡಿ, ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಕವಿತಾ, ಮೋಕ್ಷಾ, ಸತೀಶ, ಸುದ್ದಿ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಕುಶಾಲಪ್ಪ ಉಪಸ್ಥಿತರಿದ್ದರು.
ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ: ಇದೇ ಸಂದರ್ಭದಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಳೆದ ವರ್ಷ ಸುದ್ದಿ ಕರೆ ನೀಡಿದ್ದ ಗ್ರಾಮ ಸ್ವರಾಜ್ಯ ಗಾಂಧಿ ನಡಿಗೆಯನ್ನು ಮುಂಡೂರು ಗ್ರಾಮ ಪಂಚಾಯತ್ ಅತ್ಯುತ್ತಮವಾಗಿ ನಡೆಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮುಂದಕ್ಕೆ ಇಡೀ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಊರು ಮಾಡುವ ಮೂಲಕ ಮಾದರಿ ಗ್ರಾ.ಪಂ ಮಾಡಲು ಪ್ರಯತ್ನಿಸಿ. ಸುದ್ದಿಯ ಆಂದೋಲನಗಳಿಗೆ ಸಹಕಾರ ನೀಡುತ್ತಿರುವ ಮುಂಡೂರು ಗ್ರಾ.ಪಂ.ಗೆ ಅಭಿನಂದನೆಗಳು.
-ಸೃಜನ್ ಊರುಬೈಲು, ಸಿಇಒ ಸುದ್ದಿ ಸಮೂಹ ಸಂಸ್ಥೆ