





ಪುತ್ತೂರು:ಮಂಗಳೂರುನಿಂದ ಕುಕ್ಕೆ ಸುಬ್ರಹ್ಮಣ್ಯ ನಡುವಿನ ರೈಲಿಗೆ ಹತ್ತಿ ಶೌಚಾಲಯದಲ್ಲಿ ಅವಿತಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಸಹಕಾರದಿಂದ ಹಿಡಿದು ಪುತ್ತೂರು ಆರ್ಪಿಎಫ್ ಪೊಲೀಸರ ವಶಕ್ಕೆ ನೀಡಲಾಗಿದೆ.


ಮಂಗಳೂರು, ಬಿ.ಸಿ ರೋಡ್ ನಿಲ್ದಾಣಗಳಲ್ಲಿ ಪೊಲೀಸರು ಈತನನ್ನು ಹಿಡಿಯಲು ಯತ್ನಿಸಿದರೂ ಈತ ಶೌಚಾಲಯದ ಒಳಗಿನಿಂದ ಲಾಕ್ ಮಾಡಿರುವುದರಿಂದ ಸಾಧ್ಯವಾಗಿರಲಿಲ್ಲ. ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದರಿಂದ ಪೊಲೀಸರು ಈತನಿಗೆ ಆಹಾರ ಕೊಡಿಸಿ ಹೊರ ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.













