ಪುತ್ತೂರು: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಜೂಮ್ ಇನ್ ಟಿವಿ ನೇತೃತ್ವದಲ್ಲಿ ಪುತ್ತೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪುತ್ತೂರ‍್ದ ಪಿಲಿರಂಗ್ ಸಿಸನ್ -1 ಪಿಲಿನಲಿಕೆ ಸ್ಪರ್ಧೆಯಲ್ಲಿ ಕಲ್ಲಡ್ಕ ಟೈಗರ‍್ಸ್ ತಂಡವು ಪ್ರಥಮ ಹಾಗೂ ಕಲ್ಲೇಗ ಟೈಗರ‍್ಸ್ ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
ಪ್ರಥಮ ಬಹುಮಾನ ಪಡೆದ ಕಲ್ಲಡ್ಕ ಟೈಗರ‍್ಸ್ ತಂಡಕ್ಕೆ 1 ಲಕ್ಷ ರೂ., ನಗದು ಬಹುಮಾನ ಹಾಗೂ ಫಲಕ ಮತ್ತು ದ್ವಿತೀಯ ಬಹುಮಾನ ಪಡೆದುಕೊಂಡ ಕಲ್ಲೇಗ ತಂಡವು 50 ಸಾವಿರ ರೂ., ನಗದು ಮತ್ತು ಫಲಕ ಪಡೆದು ಕೊಂಡಿದೆ. ಭಾಗವಹಿಸಿದ ಎಲ್ಲಾ ತಂಡಗಳಿಗೆ ತಲಾ 25 ಸಾವಿರ ರೂ., ಮತ್ತು ಫಲಕ ನೀಡಲಾಯಿತು. ಪ್ರಥಮ ಬಹುಮಾನ ಬಂದ ಕಲ್ಲಡ್ಕ ತಂಡಕ್ಕೆ ಶೇಟ್ ಇಲೆಕ್ಟ್ರಿಕಲ್ಸ್‌ನ ರೂಪೇಶ್‌ರವರು ಎಲ್‌ಇಡಿ ಟಿವಿಯನ್ನು ಬಹುಮಾನವಾಗಿ ನೀಡಿದರು.
6 ತಂಡಗಳು ಭಾಗಿ: ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಿದ್ದು, ಕಲ್ಲೇಗ ಟೈಗರ‍್ಸ್, ಟೈಗರ್ ಫ್ರೆಂಡ್ಸ್ ಕಲ್ಲಡ್ಕ, ಅಯ್ಯಪ್ಪ ಟೈಗರ‍್ಸ್ ಮುಲ್ಕಿ, ವಿಟ್ಲ ಉಮಾನಾಥೇಶ್ವರ ಟೈಗರ‍್ಸ್, ಮುರಳೀ ಬ್ರದರ‍್ಸ್ ಟೈಗರ‍್ಸ್ ಪುತ್ತೂರು, ಅಂಗಾರಗುಡ್ಡೆ ಟೈಗರ‍್ಸ್ ಭಾಗವಹಿಸಿತ್ತು. ಉಡುಪಿಯ ಸುಷ್ಮಾರಾಜ್ ಅವರ ಮಹಿಳಾ ತಂಡದಿಂದ ಹುಲಿ ಕುಣಿತ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಆತಿಥಿಗಳಾಗಿ ಆಗಮಿಸಿದ ಮಾಜಿ ಸಚಿವರುಗಳಾದ ಬೆಳ್ಳಿಪ್ಪಾಡಿ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಂಗಳೂರು ಪಿಲಿನಲಿಕೆ ನೇತೃತ್ವ ವಹಿಸಿರುವ ಮಿಥುನ್ ರೈ, ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ, ತುಳು ಚಲನಚಿತ್ರ ನಟ ರವಿ ರಾಮಕುಂಜ, ಉದ್ಯಮಿ ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತಿತರರು ಮಾತನಾಡಿ ಮೆಚ್ಚುಗೆ ಸೂಚಿಸಿದರು.
ಸನ್ಮಾನ: ಕಿಲ್ಲೆ ಮೈದಾನದ ಗಣಪತಿ ಸಹಿತ ಕಳೆದ ಹಲವಾರು ವರ್ಷಗಳಿಂದ ಬಣ್ಣ ಹಾಕುವ ಸಾಧಕ ರಮೇಶ್ ಪೂಜಾರಿ, ಉಡುಪಿ ಹುಲಿಕುಣಿತದ ಸುಷ್ಮಾರಾಜ್‌ರವರ ತಂದೆ ಹಿರಿಯ ಹುಲಿಕುಣಿತದಾರಿ ಅಶೋಕ್ ರಾಜ್, ಪುತ್ತೂರಿನಲ್ಲಿ ಪ್ರಥಮ ಭಾರಿಗೆ ನಡೆದ ಪಿಲಿರಂಗ್ ಸ್ಪರ್ಧೆಗೆ ಹೆಸರು ನೀಡಿದ ಪಂಜಿಗುಡ್ಡೆ ಈಶ್ವರ ಭಟ್‌ರವರ ಪತ್ನಿ ಜಯಶ್ರೀ ಈಶ್ವರ ಭಟ್, ಹುಲಿ ಕುಣಿತಕ್ಕೆ -ಲಕ ನೀಡಿ ಸಹಕರಿಸಿದ ಅಕ್ಕ ತರಕಾರಿ ಅಂಗಡಿಯ ಮಾಲಕ ಬಿ.ಎಚ್.ಅಬ್ದುಲ್ ರಜಾಕ್ ಬಪ್ಪಳಿಗೆ ಹಾಗೂ ತುಳು ಚಲನಚಿತ್ರ ನಟ ರವಿರಾಮಕುಂಜ, ಮಹಿಳಾ ಹುಲಿಕುಣಿತದಾರಿ ಸುಷ್ಮಾರಾಜ್, ಚಿತ್ರನಟ ರಾಜೀವ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದರ ಜೊತೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಅಶೋಕ್ ಪೂಜಾರಿ, ಸಿದ್ದಿಕ್ ಸುಲ್ತಾನ್, ಶರತ್ ಕೇಪುಳು, ಅಭಿಷೇಕ್ ಬೆಳ್ಳಿಪ್ಪಾಡಿ, ರಾಮಚಂದ್ರ ನಾಯ್ಕ್, ಪೂರ್ಣೇಶ್ ಭಂಡಾರಿ, ರಂಜಿತ್ ಬಂಗೇರ, ನಗರಸಭಾ ಸದಸ್ಯ ರಿಯಾಜ್, ಪ್ರಜ್ವಲ್ ತೋಟ್ಲ, ಪುತ್ತೂರು ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಸತನ್ ರೈ ವಳತ್ತಡ್ಕ, ಹುನೈಸ್ ಗಡಿಯಾರ, ಒಳಮೊಗ್ರು ಗ್ರಾ.ಪಂ ಸದಸ್ಯ ಶಿವಪ್ಪ ನಾಯ್ಕ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಶರೀಫ್ ಬಲ್ನಾಡು, ರೋಶನ್ ರೈ ಬನ್ನೂರು, ಕಾರ್ಯಕ್ರಮ ನಿರೂಪಕಿ ಪ್ರಜ್ಞಾ ಒಡಿನ್ನಾಲರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಅಜಿತ್ ಕುಮಾರ್ ಶೆಟ್ಟಿ ಕಡಬ ಬೆಂಗಳೂರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಚಂದ್ರ ಆಳ್ವ, ಉಮೇಶ್ ನಾಡಾಜೆ, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಪುತ್ತೂರು ಬ್ಲಾಕ್ ಅಧ್ಯಕ್ಷ ಹರೀಶ್ ಕೋಟ್ಯಾನ್, ಕಾರ್ಮಿಕ ಘಟಕದ ಅಧ್ಯಕ್ಷ ಶರನ್ ಸಿಕ್ವೇರಾ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಸೌರಬ್ ಬಲ್ಲಾಳ್ ಉಡುಪಿ, ಮೋಹನ್ ವಿಟ್ಲ, ಯೂಸುಪ್ ಜೆಟಿಎಮ್, ಸೇವಾದಳದ ಅಧ್ಯಕ್ಷ ವಿಶ್ವಜೀತ್ ಅಮ್ಮುಂಜ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಉಡುಪಿ ಎನ್‌ಎಸ್‌ಯುಐಯ ಸ್ವರೂಪ್, ದಿನೇಶ್ ಪಿವಿ, ಶೇಖರ್ ರೈ, ಎ.ಕೆ. ಜಯರಾಮ ರೈ, ಮನೋಜ್, ಬಾಲಕೃಷ್ಣ, ಶಾರದಾ ಚಿತ್ರ, ಜಯಂತ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ರಾಜೇಶ್ ವಿಟ್ಲ, ಕೃಷ್ಣಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಮಹೇಶ್ ಕಜೆ ಕವನ ವಾಚಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಖಜಾಂಜಿ ರಂಜಿತ್ ಬಂಗೇರ, ಸನತ್ ರೈ ಏಲ್ನಾಡುಗುತ್ತು, ರೋಶನ್ ರೈ ಬನ್ನೂರು, ಪೂರ್ಣೇಶ್ ಭಂಡಾರಿಯವರು ಮಾತನಾಡಿ ಕಾರ್ಯಕ್ರಮ ಅತ್ಯಂತ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.