ಅ.6-16: ಕಡತ, ದಾಖಲೆಗಳ ವ್ಯವಸ್ಥಿತ ಜೋಡಣೆ ತಾಲೂಕು ಆಡಳಿತ ಸೌಧದಲ್ಲಿರುವ ಅಭಿಲೇಖಾಲಯ ಬಂದ್

0

ಪುತ್ತೂರು: ಪುತ್ತೂರು ತಾಲೂಕು ಕಛೇರಿಯು ಹಳೆಯ ಕಟ್ಟಡದಿಂದ ತಾಲೂಕು ಆಡಳಿತ ಸೌಧ ಕಟ್ಟಡದ 1ನೇ ಮಹಡಿಗೆ ಕಳೆದ ಒಂದು ವರ್ಷ ಮೊದಲು ದಾಖಲೆಗಳೊಂದಿಗೆ ವರ್ಗಾವಣೆಯಾಗಿರುತ್ತದೆ. ಪ್ರಸ್ತುತ ಅಲ್ಲಿ ಸ್ಥಳದ ಅಭಾವದಿಂದಾಗಿ ಎಲ್ಲಾ ದಾಖಲೆಪತ್ರಗಳನ್ನು ಕಟ್ಟಡದ ನೆಲ ಅಂತಸ್ತಿಗೆ ವರ್ಗಾಯಿಸಿ ಬದಲಾವಣೆಯನ್ನು ಮಾಡಲಾಗಿರುತ್ತದೆ.

ಎರಡೂ ಕಡೆಯಿಂದ ತುರ್ತಾಗಿ ಕಡತಗಳನ್ನು ಸ್ಥಳಾಂತರಿಸುವಾಗ ಅಭಿಲೇಖಾಲಯದಲಿರುವ ಎಲ್ಲಾ ವಿಷಯ ಸಂಕಲನದ ಕಡತಗಳು ಹಾಗೂ ಬಂಡಲ್‌ಗಳು (ಕಟ್ಟುಗಳು) ಅದಲು ಬದಲಾಗಿ ಅಥವಾ ವ್ಯವಸ್ಥಿತ ರೀತಿಯಲ್ಲಿ ಜೋಡಿಸಲು ಸಾಧ್ಯವಾಗಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅಭಿಲೇಖಾಲಯದಲ್ಲಿ ಇರುವ ಎಲ್ಲಾ ಕಡತಗಳು ಹಾಗೂ ದಾಖಲೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಜೋಡಿಸಲು ಹಾಗೂ ಇನ್ನು ಮುಂದೆ ಯಾವುದೇ ದೂರುಗಳು ಬಾರದ ಹಾಗೇ ಕರ್ತವ್ಯ ನಿರ್ವಹಣೆಗೆ ಹಾಗೂ ಸಾರ್ವಜನಿಕರಿಗೆ ಕ್ಲಪ್ತ ಸಮಯದಲ್ಲಿ ದಾಖಲೆಗಳನ್ನು ಒದಗಿಸಲು ಅಭಿಲೇಖಾಲಯವನ್ನು ಅ.6ರಿಂದ 16ರವರೆಗೆ ಒಟ್ಟು 10 ದಿನಗಳವರೆಗೆ ಮುಚ್ಚಲು ತೀರ್ಮಾನಿಸಲಾಗಿರುತ್ತದೆ. ಸಾರ್ವಜನಿಕರಿಗೆ ಈ ದಿನಾಂಕಗಳಂದು ದಾಖಲೆಯನ್ನು ಪಡೆಯಲು ಅನಾನುಕೂಲತೆ ಉಂಟಾಗುವುದರಿಂದ ತಾಲೂಕು ಆಡಳಿತದೊಂದಿಗೆ ಸಹಕರಿಸುವಂತೆ ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here