ಪುತ್ತೂರು : ಅವಿಭಜಿತ ಜಿಲ್ಲಾ ಕಂಬಳ ಸಮಿತಿಯು ಈ ಸಾಲಿನ ಕಂಬಳ ಋತುವಿನ ವೇಳಾಪಟ್ಟಿ ಪ್ರಕಟಿಸಿದ್ದು 2023ರ ಫೆ.4ರಂದು ಪುತ್ತೂರು ಹಾಗೂ ಮಾ.11ರಂದು ಉಪ್ಪಿನಂಗಡಿ ಕಂಬಳ ನಡೆಯಲಿದೆ.
ಮೂಡಬಿದಿರೆ ಸಮಾಜ ಮಂದಿರದಲ್ಲಿ ಅ.2ರಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ನೇತೃತ್ವದಲ್ಲಿ ನಡೆದ ಸ್ಥಳೀಯ ಕಂಬಳ ಸಮಿತಿಗಳ ವ್ಯವಸ್ಥಾಪಕರು ಹಾಗೂ ಕೋಣಗಳ ಮಾಲೀಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 2022-23ನೇ ಸಾಲಿನ ಕಂಬಳ ವೇಳಾಪಟ್ಟಿಯಂತೆ ಇದೇ ನ.5ರಂದು ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. 24 ಕಂಬಳಗಳು ವೇಳಾಪಟ್ಟಿಯಂತೆ ನಡೆಯಲಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳ 2023ರ ಫೆ.4ರಂದು ನಡೆಯಲಿದೆ. ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಮಾ.11ರಂದು ನಡೆಯಲಿದೆ.