14 ರಿಂದ 18 ವರ್ಷದೊಳಗಿನ ಬಾಲಕ, ಬಾಲಕಿಯರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ; ಅ.9ರಂದು ಕಡಬದಲ್ಲಿ ಆಯ್ಕೆ ಪ್ರಕ್ರಿಯೆ

0

ಕಡಬ: ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯಲಿರುವ ದ.ಕ. ಜಿಲ್ಲಾ ಮಟ್ಟದ 14 ರಿಂದ 18 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಕಡಬ ತಾಲೂಕಿನ ತಂಡ ರಚನೆಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಅ.9ರಂದು ಕಡಬ ಸೈಂಟ್ ಆನ್ಸ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು, ಕಾರ್ಯದರ್ಶಿ ಮೋಹಿತ್ ಏನೆಕಲ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

14 ವರ್ಷದ ಒಳಗಿನ, 16 ವರ್ಷದ ಒಳಗಿನ ಹಾಗೂ 18 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ಕಡಬ ತಾಲೂಕಿನ ವಾಲಿಬಾಲ್ ತಂಡ ರಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಶಾಲೆಯ ಉತ್ತಮ ವಾಲಿಬಾಲ್ ಆಟಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಕಡಬ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶವಿದ್ದು 14, 16, 18 ವರ್ಷದ ಬಾಲಕ, ಬಾಲಕಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿಗಳು ಆಯ್ಕೆ ನಡೆಯುವ ಅ.9ರಂದು ಬೆಳಿಗ್ಗೆ 9 ಗಂಟೆಗೆ ಮೊದಲು ಸ್ಥಳದಲ್ಲಿ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳತಕ್ಕದ್ದು. ವಿದ್ಯಾರ್ಥಿಗಳು ಕಡ್ಡಾಯವಾಗಿ ವ್ಯಾಸಂಗ ಮಾಡುತ್ತಿರುವ ಶಾಲೆಯ ವಿದ್ಯಾರ್ಥಿ ಅನ್ನುವುದಕ್ಕೆ ದೃಢೀಕರಣ ಪತ್ರ ಒದಗಿಸಬೇಕು. ಅಲ್ಲದೇ ಆಟವಾಡಲು ಅನುಕೂಲವಾಗುವಂತೆ ಸ್ಪೋರ್ಟ್ಸ್ ಉಡುಗೆ ಕಡ್ಡಾಯವಾಗಿದ್ದು ಸ್ಪೋರ್ಟ್ ಶೂ ಬಳಸುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ 9449990967, 9845675823ಗೆ ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here