





ಪುತ್ತೂರು: ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಬೇಲೂರಿನ ನಾಟ್ಯ ಶಾಂತಲೆ ನಾಟ್ಯಮಯೂರಿ ಲಾಲಿತ್ಯ ಕುಮಾರವರ ಹುಟ್ಟಿದ ಹಬ್ಬದ ದಿನದಂದು ಅವರ ಮನೆಯಲ್ಲಿ ಸನ್ಮಾನ ಮಾಡಲಾಯಿತು.


ಮುಖ್ಯ ಅತಿಥಿ ಸಮಾಜ ಸೇವಕಿ ಸೀತಾ ಭಟ್ ಆರ್ಲಪದವು ಉಪಸ್ಥಿತರಿದ್ದರು. ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ಬೊಳುವಾರು ಪುತ್ತೂರು ಇದರ ಉದ್ಯೋಗಿ ಶ್ರೀ ಕೃಷ್ಣ ಯುವಕ ಮಂಡಲ ರಿ. ಇದರ ಅಧ್ಯಕ್ಷ ಬಿ ರಾಜೀವ ಗೌಡ ಸನ್ಮಾನ ಪತ್ರವನ್ನು ವಾಚಿಸಿದರು. ಕಲಾವಿದ ಚಿತ್ರನಟ ಕೃಷ್ಣಪ್ಪ ಶಿವನಗರ ಹಾಗೂ ಪ್ರತಿಭೆಯ ತಂದೆ ತಾಯಿ ಕುಮಾರ್ ಹಾಗೂ ಶೋಭಾ ರಾಣಿ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿಯಾದ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಅಭಿನಂದಿಸಿದರು.














