ಕಡಬ: ನೂಜಿಬಾಳ್ತಿಲದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಅತ್ಯಾಚಾರ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕಡಬ ಪೋಲೀಸರು ಬುಧವಾರ ಬಂಧಿಸಿದ್ದಾರೆ.
ಬoಧಿತನನ್ನು ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್ ಎಂದು ಗುರತಿಸಲಾಗಿದೆ. ಈತ ನೂಜಿಬಾಳ್ತಿಲದ ಖಾಸಗಿ ಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಬಲತ್ಕಾರವಾಗಿ ಅತ್ಯಾಚಾರಗೈದಿರುವ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಕಡಬ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಾಲಕಿಯು ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದು, ಆಕೆಯ ತಂದೆ ಇನ್ನೋಂದು ಮನೆಯಲ್ಲಿ ಬೇರೆಯೇ ವಾಸವಾಗಿರುತ್ತಾರೆ. ತಾಯಿ 5 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರು ವಾಪಾಸಗಿಲ್ಲ. ಆರೋಪಿಯು ಬಾಲಕಿಯ ಮನೆಯ ಪಕ್ಕದ ಜೋಬಿ ಎಂಬವರ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಬರುತ್ತಿದ್ದು, ಬಾಲಕಿಯ ಮೇಲೆ ವಕ್ರದೃಷ್ಠಿ ಇಟ್ಟಿದ್ದ ಆರೋಪಿ ಬಾಲಕಿಯ ಅಜ್ಜನಲ್ಲಿ ಮಾತನಾಡುವ ನೆಪದಲ್ಲಿ ಅಲ್ಲಿಗೆ ಬಂದು ಬಾಲಕಿಯ ಮೊಬೈಲ್ ನಂಬರ್ ಕೇಳಿದ್ದ, ಅದಕ್ಕೆ ಬಾಲಕಿ ಕೊಡದೆ ಇದ್ದಾಗ ಆಕೆಯ ಅಜ್ಜಿನಿಂದ ನಂಬರ್ ಪಡೆದು ಆಕೆ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಬರುವಾಗ ಕಾಲ್ ಮಾಡಿ ಆತನ ಬೈಕಿನಲ್ಲಿ ಬಲವಂತ ಮಾಡಿ ಕುಳ್ಳಿರಿಸಿಕೊಂಡು ಕಲ್ಲುಗುಡ್ಡೆ ಪೇಟೆಯಲ್ಲಿ ಬಿಟ್ಟು ಮರಳಿ ಸಂಜೆ ಶಾಲೆಯಿಂದ ಮನೆಗೆ ಬರುವಾಗ ನನಗೆ ಫೋನ್ ಮಾಡು ಎಂದು ತಾಕೀತು ಮಾಡುತ್ತಿದ್ದ.
ಸೆಪ್ಟೆಂಬರ್ 8 ರಂದು ಸಂಜೆ ಆರೋಪಿಯು ಬಾಲಕಿ ಇದ್ದ ಮನೆಗೆ ಬಂದು ಬಾಲಕಿಯ ಅಜ್ಜನಿಗೆ ಮದ್ಯಪಾನ ಕುಡಿಸಿ ಬಾಲಕಿಯನ್ನು ಬಲವಂತವಾಗಿ ರೂಮಿಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೇ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಬೇರೆ ಹಾಕಿರುತ್ತಾನೆ. ಬಳಿಕ ಸೆಪ್ಟೆಂಬರರ್ 26 ರಂದು ಮನೆಯಲ್ಲಿ ಬಾಲಕಿಯ ತಾತ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮತ್ತೊಮ್ಮೆ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಕಡಬ ಪೋಲೀಸರು ಪೋಕ್ಸೋ ಪ್ರಕರಣ ದಾಖಲಿಸಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.