ಅ.10ಕ್ಕೆ ಬಾಲವನದಲ್ಲಿ ಡಾ| ಶಿವರಾಮ ಕಾರಂತರ 121ನೇ ಜನ್ಮದಿನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ

0

 ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಬೆಳಿಗ್ಗೆ ಭರತನಾಟ್ಯ ಪ್ರದರ್ಶನ, ಮಧ್ಯಾಹ್ನ ವಿಚಾರಗೋಷ್ಟಿ, ಯಕ್ಷಗಾನ, ಸಂಜೆ ಪ್ರಶಸ್ತಿ ಪ್ರದಾನ

ಕಾರಂತರ ಜ್ಞಾನಪೀಠ ಪ್ರಶಸ್ತಿ, ಕಾರಂತರ ಪುಸ್ತಕಗಳು, ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ ಸೇರಿದಂತೆ 35ಕ್ಕೂ ಅಧಿಕ ಪ್ರದರ್ಶನಗಳು

ಪುತ್ತೂರು : ಕಡಲತಡಿಯ ಭಾರ್ಗವ ಜ್ಞಾನಪೀಠ ಡಾ| ಶಿವರಾಮ ಕಾರಂತರ 121 ನೇ ಜನ್ಮದಿನಾಚರಣೆ ಮತ್ತು ಬಾಲವನ ಪ್ರಶಸ್ತಿ 2022 ರ ಪ್ರದಾನ ಸಮಾರಂಭವು ಅ.10ರಂದು ಪೂರ್ವಾಹ್ನ 9 ರಿಂದ ಸಂಜೆ 5 ರ ತನಕ ಪರ್ಲಡ್ಕ ಬಾಲವನದಲ್ಲಿ ನಡೆಯಲಿದೆ ಎಂದು ಪುತ್ತೂರು ಸಹಾಯಕ ಆಯುಕ್ತರಾಗಿರುವ ಬಾಲವನ ಸಮಿತಿಯ ಅಧ್ಯಕ್ಷ ಗಿರೀಶ್ ನಂದನ್  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಡಾ| ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು ಬೆಳಿಗ್ಗೆ ಕಾರಂತರ ಜನ್ಮದಿನೋತ್ಸವ, ಸಂಜೆ ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ ವಿ ಇವರಿಗೆ ಬಾಲವನ ಪ್ರಶಸ್ತಿ 2022ರ ಪ್ರದಾನ ಸಮಾರಂಭವು ನಡೆಯಲಿದೆ. ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಅವರಿಗೆ ಪುರಸ್ಕೃತಗೊಂಡ ಜ್ಞಾನಪೀಠ ಪ್ರಶಸ್ತಿಯನ್ನು ಮತ್ತು ಕಾರಂತರು ಬರೆದ ಪುಸ್ತಕಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದರ ಜೊತೆಗೆ ವರ್ಷಂಪ್ರತಿ ನಡೆಯುವ ಬಾಲವನ ಪ್ರಶಸ್ತಿ ಕಾರ್ಯಕ್ರಮ, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಅಂದು ಪೂರ್ವಾಹ್ನ 9.30 ರಿಂದ ವಿದುಷಿ  ನಯನಾ ವಿ ರೈ ಕುದ್ಕಾಡಿ ಇವರ ನಿರ್ದೇಶನದಲ್ಲಿ ವಿಶ್ವಕಲಾ ನಿಕೇತನ ಪುತ್ತೂರು ಇದರ ಸದಸ್ಯರಿಂದ ಪ್ರದರ್ಶನಗೊಳ್ಳುವ ಭರತನಾಟ್ಯದ ಮೂಲಕ ಕಾರ್ಯಕ್ರಮವು ಆರಂಭಗೊಳ್ಳಲಿದೆ. ಪೂರ್ವಾಹ್ನ 10.30 ಕ್ಕೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಕಾರಂತರ ವಾಸ್ತವ್ಯ ಮಾಡಿಕೊಂಡಿದ್ದ  ಮನೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ ನರೇಂದ್ರ ರೈ ದೇರ್ಲ ಕಾರಂತ ಸ್ಮರಣೆಯನ್ನು ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ರಾಜ್ಯಸಭೆಯ ಸಂಸದ ಡಾ| ಡಿ.ವೀರೇಂದ್ರ ಹೆಗ್ಗಡೆ, ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳಾದ ಯುಟಿ ಖಾದರ್, ರಾಜೇಶ್ ನಾಯ್ಕ್‌, ಹರೀಶ್ ಪೂಂಜ, ಡಾ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಹಾಗೂ ವಿಧಾನಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್, ಎಸ್ ಎಲ್ ಭೋಜೇಗೌಡ, ಮಂಜುನಾಥ ಭಂಡಾರಿ, ಬಿ.ಎಂ ಫಾರೂಕ್, ಆಯನೂರು ಮಂಜುನಾಥ್, ನಗರಸಭೆಯ ಅಧ್ಯಕ್ಷ ಕೆ. ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸ್ಥಳೀಯ ಸದಸ್ಯೆ ದೀಕ್ಷಾ ಪೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅಪರಾಹ್ನ ವಿಚಾರಗೋಷ್ಠಿ:
ಅಪರಾಹ್ನ ಗಂಟೆ 12 ರಿಂದ ಕಾರಂತರು ಮತ್ತು ರಂಗಭೂಮಿ ಎಂಬ ವಿಷಯದ ಬಗ್ಗೆ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಎಚ್.ಜಿ. ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿನ ಸಹಪ್ರಾಧ್ಯಾಪಕ ಸುಬ್ಬಪ್ಪ ಕೈಕಂಬ ಇವರು ವಿಚಾರ ಮಂಡನೆ ಮಾಡಲಿದ್ದಾರೆ. ಅಪರಾಹ್ನ 2.00ರಿಂದ ಚಂದ್ರಶೇಖರ ಸುಳ್ಯಪದವು ಇವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಪಾಂಚಜನ್ಯ ಎಂಬ ಯಕ್ಷಗಾನ ಕಾರ್ಯಕ್ರಮವು ನಡೆಯಲಿದೆ ಎಂದು ಸಹಾಯಕ ಕಮೀಷನರ್ ಹೇಳಿದರು.
ಬಾಲವನ ಪ್ರಶಸ್ತಿ ಪ್ರದಾನ:
ಅಪರಾಹ್ನ 3 ಗಂಟೆಗೆ ಸರಿಯಾಗಿ ಬಾಲವನ ಪ್ರಶಸ್ತಿ 2022ರ ಪ್ರದಾನ ಸಮಾರಂಭವು ನಡೆಯಲಿದ್ದು ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ ವಿ ಇವರಿಗೆ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಒಡಿಸಿ ಕಲಾವಿದೆ ಡಾ| ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್  ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್, ಕರ್ನಾಟಕ ಅರೇಭಾಷೆ ಅಕಾಡೆಮಿ ಅಧ್ಯಕ್ಷ  ಲಕ್ಷ್ಮೀನಾರಾಯಣ ಕಜೆಗದ್ದೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜಗದೀಶ್ ಪೈ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಂ.ಪಿ ಶ್ರೀನಾಥ್, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೊನಾವಾನೆ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಚಿದಾನಂದ ಕೆವಿ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ. ಸವಣೂರು ಸೀತಾರಾಮ ರೈ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚೇತನ್ ಆನೆಗುಂಡಿ, ಬಾಲಕೃಷ್ಣ ಪೊರ್ದಾಲ್, ಡಾ| ಶೋಭಿತ ಸತೀಶ್, ರಮೇಶ್ ಉಳಯ, ಚರಣಕುಮರ್ ಪುದು, ಶ್ರೀಕಾಂತ್ ನಾಯಕ ಕಂಬಳಕೋಡಿ, ಎಂಜಿ ತಿಲೊತ್ತಮೆ, ಶಾಂತಿ ಹೆಗ್ಗಡೆ ವಿವಿಧ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಎಂದು ಸಹಾಯಕ ಕಮೀಷನರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ಬಾಲವನ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ, ರಮೇಶ್ ಉಳಯ ಉಪಸ್ಥಿತರಿದ್ದರು.

ವಿವಿಧ ಪುಸ್ತಕ ಮೇಳ, ಕರಕುಶಲ ಮೇಳ ಹಾಗೂ ಕಲಾವಿದ ಕೇಶವ ಮೊಟ್ಟೆತ್ತಡ್ಕ ರವರ ಚಿತ್ರಕಲಾ ಪದರ್ಶನ ಸೇರಿದಂತೆ 35ಕ್ಕೂ ಹೆಚ್ಚು ಪ್ರದರ್ಶನಗಳು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರ ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಇವರ ಸಂಯೋಜನೆಯಲ್ಲಿ ನಡೆಯಲಿದೆ. ಅಲ್ಲದೆ ಕಾರಂತರ ಪುಸ್ತಕಗಳ ಪ್ರದರ್ಶನ ಮತ್ತು ಕಾರಂತರ ಜ್ಞಾನಪೀಠ ಪ್ರಶಸ್ತಿಯ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿದೆ.
ಗಿರೀಶ್ ನಂದನ್ ಸಹಾಯಕ ಕಮೀಷನರ್ ಪುತ್ತೂರು

LEAVE A REPLY

Please enter your comment!
Please enter your name here