ಬಿಬಿಪಿಎಸ್ ಮೂಲಕ ಬಿಲ್ಲು ಪಾವತಿಗೆ ನಗರಸಭೆ ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಗಾರ
ಪುತ್ತೂರು:ನಗರಸಭೆ ಪೌರಾಡಳಿತ ಸೇವೆಗಳಿಗೆ ಆಪ್‌ಗಳ ಮೂಲಕ ಹಣ ಪಾವತಿಸಲು ಅವಕಾಶ ಮಾಡಿಕೊಡುವುದರೊಂದಿಗೆ ಸಕಾಲದಲ್ಲಿ ಸೇವೆ ನೀಡಲು ಪುತ್ತೂರು ನಗರಸಭೆ ಸಿದ್ಧತೆ ನಡೆಸಿದ್ದು, ಆಪ್‌ಗಳಾದ ಭೀಮ್, ಭಾರತ್ ಬಿಲ್ ಪೇ, ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ಹಣ ಪಾವತಿ ಸೇವೆಗಳಿಗೆ ಅ.7ರಂದು ಚಾಲನೆ ನೀಡಲಾಗಿದೆ.
ನಗರಸಭೆ ಲೆಕ್ಕಅಧೀಕ್ಷಕ ಸಿ.ಆರ್.ದೇವಾಡಿಗ ಅವರು ಈ ಕುರಿತು ನಗರಸಭೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಈಗಾಗಲೇ ನಗರಸಭೆಯಲ್ಲಿ ಇ-ಸಿಸ್ಟಮ್‌ನಲ್ಲಿ ಬ್ಯಾಂಕ್ ಮೂಲಕ ಚಲನ್ ಪಡೆದು ಕೌಂಟರ್‌ನಲ್ಲಿ ನಗದು ಪಾವತಿಸುವುದು ಮತ್ತು ಆನ್‌ಲೈನ್ ಪೇ ಮಾಡುವುದು ಈಗಾಗಲೇ ಚಾಲ್ತಿಯಲ್ಲಿದೆ. ಇದೀಗ ಮೂರನೆಯದಾಗಿ ಇವಿ ಪೇ ಸಿಸ್ಟಮ್‌ನಲ್ಲಿ ಭಾರತ್ ಬಿಲ್ ಪೇ ಮೆಂಟ್ ಅಳವಡಿಸಲಾಗಿದೆ. ಇದು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿದೆ.ಇದರ ಜೊತೆಗೆ ಕ್ಯೂಆರ್ ಕೋಡ್ ಬಳಸಿ ಆಪ್ ಮೂಲಕವೂ ಹಣ ಪಾವತಿ ಮಾಡಬಹುದು.ನಗದು ಪಾವತಿಸುವ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ನೀರಿನ ಬಿಲ್ ಪಾವತಿಯನ್ನು ಗೂಗಲ್ ಪೇ ಮೂಲಕ ಮಾಡಿದರು.ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸದಸ್ಯೆ ದೀಕ್ಷಾ ಪೈ, ಪೂರ್ಣಿಮಾ,ನಗರಸಭೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮುಂದೆ ವರ್ತಕರು, ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದು ಅವರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷರು ಹೇಳಿದರು
ಭೀಮ್, ಭಾರತ್ ಬಿಲ್ ಪೇ, ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಎಂಬ ಹೊಸ ವ್ಯವಸ್ಥೆಯನ್ನು ನಗರಸಭೆ ಅಳವಡಿಸುವ ಮೂಲಕ ಬಹಳ ಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಸರಕಾರ ಇವತ್ತು ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ನೀಡಿದೆ.ಅದಕ್ಕೆ ಚಾಲನೆ ನೀಡಲಾಗಿದೆ.ಇದರ ಪೂರ್ಣ ಸದುಪಯೋಗವನ್ನು ಪಡೆಯಬಹುದು.ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಗರಸಭೆಯಿಂದ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ.ಮುಂದೆ ಸಾರ್ವಜನಿಕವಾಗಿ ಮಾಹಿತಿ ನೀಡಲಾಗುವುದು.ನಗರಸಭೆ ಸಾಮಾನ್ಯ ಸಭೆಯ ಬಳಿಕ ಸದಸ್ಯರಿಗೂ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ ಪುತ್ತೂರು