ಕಡಬ: ಆಲಂಕಾರು ಮಾಯಿಲ್ಗ ರಕ್ತೇಶ್ವರಿ ದೈವಸ್ಥಾನದ ಸಮೀಪ ಆಶ್ಲೇಷ ನರ್ಸರಿ ಅ.5ರಂದು ಶುಭಾರಂಭಗೊಂಡಿತು.
ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿದ್ದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆ ಮುಖ್ಯಶಿಕ್ಷಕ ಹರಿಶ್ಚಂದ್ರ, ಆಲಂಕಾರು ಕೋಟಿಚೆನ್ನಯ ಮಿತ್ರವೃಂದ ಗೌರವ ಸಲಹೆಗಾರ ರವಿ ಮಾಯಿಲ್ಗ, ವನಶ್ರೀ ನರ್ಸರಿ ಮಾಲಕ ನಾಗರಾಜ್‌ರವರು ಶುಭಹಾರೈಸಿದರು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಆಲಂಕಾರು, ವಿಶ್ವೇಶ್ವರ ಭಟ್ ಬಳ್ಳಲಿಕೆ, ಆಲಂಕಾರು ಜೆಸಿ ಅಧ್ಯಕ್ಷ ಅಜಿತ್ ರೈ, ಜೆಸಿ ಮುಖಂಡರಾದ ಪ್ರದೀಪ್ ಬಾಕಿಲ, ಗುರುರಾಜ್ ಕೇವಳ, ರಕ್ತೇಶ್ವರ ದೈವಸ್ಥಾನದ ಅಧ್ಯಕ್ಷ ಲಿಂಗಪ್ಪ ಪೂಜಾರಿ ಮಾಯಿಲ್ಗ, ಪುರುಷೋತ್ತಮ ಬಿ.ಎಲ್., ಸವಿತಾ, ಸರೋಜಿನಿ, ವಿಜಯ ಕೆದಿಲ, ನವೀನ್ ಕೆದಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಶ್ಲೇಷ ನರ್ಸರಿ ಮಾಲಕ ಬಿ.ಎಲ್.ಜನಾರ್ದನರವರು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಎಲ್ಲಾ ಮಾದರಿಯ ಅಡಿಕೆ, ತೆಂಗು, ಹೂವಿನ ಹಾಗೂ ಹಣ್ಣಿನ ಗಿಡಗಳು ದೊರೆಯುತ್ತದೆ ಎಂದು ಹೇಳಿದರು. ಇನ್ನೋರ್ವ ಪಾಲುದಾರ ಗಂಗಯ್ಯ ವಂದಿಸಿದರು.