ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

0

ಸರಕಾರದಿಂದ ಮಹಾನುಭಾವರನ್ನು ಸ್ಮರಣೆ ಮಾಡಿ ಕುಲೀನ ಮನೆತನಕ್ಕೂ ಗೌರವ – ಸಂಜೀವ ಮಠಂದೂರು

ಪುತ್ತೂರು: ರಾಮ ಸೀತೆಯರ ಆದರ್ಶ, ಆಂಜನೇಯನ ಸ್ವಾಮಿ ನಿಷ್ಠೆಯ ಮೂಲಕ ದೇಶದ ಆಧ್ಯಾತ್ಮಿಕ ಬದುಕಿಗೆ ದೊಡ್ಡ ಕೊಡುಗೆಯನ್ನು ಕೊಟ್ಟ ವಾಲ್ಮೀಕಿ ಮಹರ್ಷಿಯನ್ನು ಸ್ಮರಣೆ ಮಾಡಿ ಕುಲೀನ ಮನೆತನಕ್ಕೂ ವಿಶೇಷ ಸ್ಥಾನಮಾನ ನೀಡಿ ಗೌರವ ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅ.9ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಇವತ್ತು ವ್ಯಕ್ತಿಗೆ ಹೇಗೆ ಜೀವನ ಮಾಡಬೇಕು ಒಂದು ಕುಟುಂಬ ಹೇಗೆ ಇರಬೇಕೆಂಬುದನ್ನು ಆದರ್ಶವನ್ನು ಕೊಟ್ಟ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು ದೇಶದ ಆಧ್ಯಾತ್ಮಿಕ ಬದುಕಿಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಾಲ್ಮೀಕಿಯಂತ ಸಮಾನ್ಯ ವ್ಯಕ್ತಿ ಮಹರ್ಷಿಯಾಗಿ, ರಾಮಯಣದಂತಹ ಮಹಾಕಾವ್ಯ ಬರೆದು ರಾಮಯಾಣವನ್ನು ಜಗತ್ತಿಗೆ ದರ್ಶನ ಮಾಡಿದ ಅವರನ್ನು ಸ್ಮರಣೆ ಮಾಡುತ್ತಾ ಇವತ್ತು ಆ ಕುಲೀನ ಮನೆತನಕ್ಕೂ ಭಾರತ ಮತ್ತು ಕರ್ನಾಟಕ ಸರಕಾರ ವಿಶೇಷ ಸ್ಥಾನ ಮಾನ ಕೊಟ್ಟದೆ. ಮಹರ್ಷಿ ವಾಲ್ಮೀಕಿಯಂತಹ ವ್ಯಕ್ತಿತ್ವ ಇನ್ನಷ್ಟು ರೂಪಿಸಬೇಕು. ಸಮಾಜದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು ಆ ಸಮಾಜನ್ನು ಮೇಲೆತ್ತುವ ಸಂಗತಿ ಆಗಿದೆ ಎಂದು ಹೇಳಿದರು.

ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ ಯವರು ವಾಲ್ಮೀಕಿ ಮಹರ್ಷಿಗಳ ಕುರಿತ ಜೀವನ ಚರಿತ್ರೆ ತಿಳಿಸಿ ಇವತ್ತು ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಏಳಿಗೆಗಾಗಿ ನಿಗಮ ಕೂಡಾ ಬಿಜೆಪಿ ಸರಕಾರ ಮಾಡಿದೆ. ಜಿಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭವನ ನಿರ್ಮಾಣ ಮಾಡುವ ಮೂಲಕ ಸಮಾಜವನ್ನು ಜನಪ್ರಿಯಗೊಳಿಸಿದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್, ನಿತೀಶ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮೀನಾಕ್ಷಿ ಮಂಜುನಾಥ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಎಸ್ಟಿ ಮೋರ್ಚಾದ ನಗರ ಮಂಡಲದ ಅಧ್ಯಕ್ಷ ಅಶೋಕ್ ಬಲ್ನಾಡು ಸ್ವಾಗತಿಸಿ, ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್ ವಂದಿಸಿದರು.

LEAVE A REPLY

Please enter your comment!
Please enter your name here