ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ವತಿಯಿಂದ 22ನೇ ವರ್ಷದ ಶಾರದಾ ಪೂಜೆ, ಅಕ್ಷರ ಅಭ್ಯಾಸ ಹಾಗೂ ವಾಹನ ಪೂಜೆ ಕಾರ್ಯಕ್ರಮವು ಅ.5ರಂದು ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ಜರುಗಿತು. ಹಲವು ವರ್ಷಗಳಿಂದ ಕಾರಣಾಂತರದಿಂದ ನಿಂತಿದ್ದ ಕಾರ್ಯಕ್ರಮವನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಪುನರ್ ಪ್ರಾರಂಭಿಸಿತು.
ಬೆಳಿಗ್ಗೆ ಗಂಟೆ 9:00ಕ್ಕೆ ಶಾರದಾ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಭಜನಾ ತಂಡಗಳಿಂದ ಭಜನೆ ಪ್ರಾರಂಭಗೊಂಡು ಪುಟಾಣಿಗಳು ಅಕ್ಷರ ಅಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ನಂತರ ಶಾರದಾ ದೇವಿಗೆ ಮಹಾ ಮಂಗಳಾರತಿ ನಡೆದು, ವಾಹನ ಪೂಜೆಗೆ ಸೇರಿದ ಸುಮಾರು 250ಕ್ಕೂ ಹೆಚ್ಚಿನ ಎಲ್ಲಾ ವಾಹನಗಳಿಗೆ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.
ಅಕ್ಷರ ಅಭ್ಯಾಸ ಮಾಡಿದ ಪುಟಾಣಿಗಳಿಗೆ ಪುಸ್ತಕ, ಬಳಪ, ಕಡ್ಡಿ, ಭಜನಾ ಪುಸ್ತಕವನ್ನು ವಿತರಿಸಲಾಯಿತು. ಅದೇ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಭಜನಾ ಪುಸ್ತಕವನ್ನು ನೀಡಲಾಯಿತು. ನಂತರ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಇದರ ಅಧ್ಯಕ್ಷಮಂಜುನಾಥ್ ದುಗ್ಗಳ, ಕಾರ್ಯದರ್ಶಿ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ, ಖಜಾಂಜಿ ಪ್ರವೀಣ್ ಗೋಳಿತ್ತಡ್ಕ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮಾಜಿ ಪದಾಧಿಕಾರಿಗಳು, ಊರಿನ ಹಿರಿಯರು, ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.