ಪಂ. ಅಧ್ಯಕ್ಷರು, ಸದಸ್ಯರು ಬೇಜವಾಬ್ದಾರಿಯವರು, ಭ್ರಷ್ಟಾಚಾರಿಗಳು ಅದಕ್ಕಾಗಿ ಅವರಿಂದ ಆರ್ಥಿಕ, ನಿರ್ಣಯದ ಅಧಿಕಾರ ಹಿಂತೆಗೆತ ಎಂಬ ಸರಕಾರದ ನಿರ್ಣಯ ಪ್ರಜಾಪ್ರಭುತ್ವಕ್ಕೆ ಅವಮಾನ, ಗ್ರಾಮಸ್ವರಾಜ್ಯಕ್ಕೆ ಮಾರಕ, ಅಧಿಕಾರಿಗಳಿಗೆ ಪೂರ್ಣಾಧಿಕಾರ ನೀಡಿರುವುದು ಹಣ ಸುಲಿಗೆಗೆ, ನೂರಕ್ಕೆ ನೂರು ಭ್ರಷ್ಟಾಚಾರಕ್ಕೆ ಹೆದ್ದಾರಿ

0

ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಪಂಚಾಯತ್ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಆದೇಶವನ್ನು ಹೊರಡಿಸಿದೆ. * ಉದ್ಯೋಗ ಖಾತ್ರಿ, ವಸತಿ ಯೋಜನೆಗಳ ಅನುಷ್ಠಾನ, ಹಣಕಾಸಿನ ನಿಧಿ, ಪಂಚಾಯತ್ ತೆರಿಗೆ, ಖರ್ಚು-ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಅಧ್ಯಕ್ಷರ ಸಹಿ ಅಧಿಕಾರ ಹಿಂಪಡೆಯಲು ನಡಾವಳಿ * ಬಿಲ್ ಪಾವತಿಗೆ ಲಂಚ ಸ್ವೀಕಾರ, ವಿಳಂಬ ಬಿಲ್ ಪಾವತಿ ಆರೋಪ, ಚುನಾಯಿತ ಪ್ರತಿನಿಧಿಯಾಗಿರುವ ಅಧ್ಯಕ್ಷರು ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಪಿಡಿಒ, ಎಸ್‌ಡಿಎಎ ನಿರ್ವಹಿಸಬೇಕು * ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಿಗೆ, ಇ-ಸ್ವತ್ತು ಪರವಾನಿಗೆ ನೀಡುವ ಅಧಿಕಾರ ಪಿಡಿಒಗಳಿಗೆ ನೀಡಿದ ಬಳಿಕ ಗ್ರಾ.ಪಂ. ಸಭೆಯ ಗಮನಕ್ಕೆ ತರಲು ಸೂಚನೆ.

ಅಧ್ಯಕ್ಷರ ಅಧಿಕಾರ ಮೊಟಕು ಏಕೆ?: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಲಾಗಿದ್ದ ಸಹಿ ಅಧಿಕಾರವನ್ನು ಹಿಂಪಡೆಯಲು ಸರ್ಕಾರ ಪ್ರಮುಖವಾಗಿ ಎರಡು ಕಾರಣಗಳನ್ನು ಪಟ್ಟಿ ಮಾಡಿದೆ. ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಿಲ್ ಪಾವತಿ ಮಾಡಲು ಲಂಚ ಪಡೆಯುವಾಗ ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಹಲವು ಪ್ರಕರಣಗಳಲ್ಲಿ ವಿಳಂಬವಾಗಿ ಬಿಲ್ ಪಾವತಿ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿದ್ದು, ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರಲ್ಲದ ಕಾರಣ ಸರ್ಕಾರಿ ನೌಕರರಾದ ಪಿಡಿಒ, ಎಸ್‌ಡಿಎಎ ಇದನ್ನು ನಿರ್ವಹಿಸಬೇಕು. ಒಂದು ವೇಳೆ ಪಂಚಾಯಿತಿಗಳಲ್ಲಿ ಎಸ್‌ಡಿಎಎ ಸ್ಥಾನ ಖಾಲಿ ಇದ್ದರೆ, ಪಿಡಿಒ ಜತೆಗೆ ಕಾರ್ಯದರ್ಶಿ ಜಂಟಿ ಸಹಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿ ಸಭೆಗಳು ಸಕಾಲದಲ್ಲಿ ನಡೆಯದ ಕಾರಣ ವಿಳಂಬ ತಪ್ಪಿಸಲು ವಾಣಿಜ್ಯ ವಹಿವಾಟುಗಳ ಆರಂಭಕ್ಕೆ ಪರವಾನಿಗೆ, ಇ-ಸ್ವತ್ತು ಪರವಾನಿಗೆ ನೀಡುವ ಅಧಿಕಾರ ಪಿಡಿಒಗಳಿಗೆ ನೀಡಿದ ಬಳಿಕ ಗ್ರಾ.ಪಂ. ಸಭೆಯ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಮೇಲಿನ ಕಾರಣ ನೀಡಿ ಸರಕಾರವು ಪಂಚಾಯತ್‌ಗಳ ಅಧ್ಯಕ್ಷರುಗಳ ಆರ್ಥಿಕ ಅಧಿಕಾರ ಮತ್ತು ಪಂಚಾಯತ್ ಸದಸ್ಯರು ಉದ್ಯಮಗಳಿಗೆ ಪರವಾನಿಗೆ ನೀಡುವ ಅಽಕಾರವನ್ನು ಹಿಂತೆಗೆದುಕೊಳ್ಳುವ ನಿರ್ಣಯಕ್ಕೆ ಬಂದಿದೆ. ಚುನಾವಣೆಗೆ ಇನ್ನು 6 ತಿಂಗಳು ಇರುವಾಗ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಇಲ್ಲದೆ ಗೆದ್ದಿರುವ, ಸ್ವತಂತ್ರ ಅಸ್ತಿತ್ವ ಹೊಂದಿರುವ ಪಂಚಾಯತ್ ಸದಸ್ಯರುಗಳ ಮೇಲೆ ಹಿಡಿತಕ್ಕಾಗಿ, ಅಧಿಕಾರಿಗಳ ಮೂಲಕ ಆಡಳಿತಾತ್ಮಕ ಅಧಿಕಾರ ಹಿಡಿದುಕೊಳ್ಳಲು ಪ.ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಿದೆ. ಇದರ ಉದ್ದೇಶವೇನೆಂದರೆ ಪಿಡಿಓಗಳಿಗೆ ಅಧಿಕಾರ ದೊರಕಿದರೆ ಅವರು ಮೇಲಾಧಿಕಾರಿಗಳ, ಜನಪ್ರತಿನಿಧಿಗಳ, ಮಂತ್ರಿಗಳ ಹಿಡಿತದಲ್ಲಿರುತ್ತಾರೆ, ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ಮೂಲಕ ಪಂಚಾಯತ್‌ಗಳಲ್ಲಿ ತಮಗೆ ಬೇಕಾದಂತೆ ಕೆಲಸ ಮಾಡಿಸಬಹುದು. ಆರ್ಥಿಕ ವ್ಯವಹಾರ ನಿಯಂತ್ರಿಸಬಹುದು, ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಣವನ್ನು ವಸೂಲಿ ಮಾಡಲು ದಾರಿ ಮಾಡಿಕೊಟ್ಟು ಅದರ ಪಾಲು ಪಡೆಯಬಹುದು ಎಂಬುದೇ ಆಗಿದೆ. ಸರಕಾರದ ಈ ನಿರ್ಣಯವನ್ನು ಯಾವುದೇ ವಿರೋಧ ಪಕ್ಷದ ಸದಸ್ಯರು, ಸರಕಾರದ ಶಾಸಕರು ವಿರೋಧಿಸದೆ ಇರುವುದು, ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ಆ ಬಗ್ಗೆ ಪ್ರತಿಭಟಿಸದೆ ಇರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ.

ನಮ್ಮ ದೇಶದಲ್ಲಿ ಕುರಿ ಕಾಯುವವರು, ದನ ಕಾಯುವವರು ಮುಖ್ಯಮಂತ್ರಿಗಳಾಗಿದ್ದಾರೆ. ಚಹಾ ಮಾರುವವರು ಪ್ರಧಾನಿಯಾಗಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ ದೇಶದ ಅಧ್ಯಕ್ಷರಾಗಿದ್ದಾರೆ. ಆ ರೀತಿಯ ಅಧಿಕಾರ, ಆಡಳಿತದ ಜವಾಬ್ದಾರಿ ಸಾಮಾನ್ಯ ಜನರಿಗೂ ದೊರಕಬೇಕೆಂಬುದೇ ಪ್ರಜಾಪ್ರಭುತ್ವದ ಆಶಯವಾಗಿರುವಾಗ ನಮ್ಮ ಸರ್ಕಾರಗಳು ಕೈಗೊಂಡಿರುವ ನಿರ್ಣಯಗಳು ಅದಕ್ಕೆ ನೀಡಿರುವ ಕಾರಣಗಳು ಸರಿಯೇ…? ಪಂಚಾಯತ್‌ನಲ್ಲಿ ಆಡಳಿತ ನಡೆಸುವ ಸದಸ್ಯರು ಸ್ಥಳಿಯರೇ ಆಗಿರುವುದರಿಂದ ತಮ್ಮ ಜನರ ಎದುರೇ ಇರಬೇಕಾದುದರಿಂದ ಆ ಊರಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಬೇಕಾಗುತ್ತದೆ. ಉತ್ತಮ ಕೆಲಸ ಮಾಡಿದರೆ ಗೌರವ ಸಂಪಾದಿಸುತ್ತಾರೆ. ಕೆಟ್ಟ ಕೆಲಸ ಮಾಡಿದರೆ, ಭ್ರಷ್ಟಾಚಾರ ಮಾಡಿದರೆ ಅದಕ್ಕೆ ಹೊಣೆಗಾರರಾಗಿ ಗೌರವವನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೇರವಾಗಿ ಅಧಿಕಾರಿಗಳಿಗಾಗಲಿ, ಶಾಸಕರಿಗಾಗಲಿ, ಮಂತ್ರಿಗಳಿಗಾಗಲಿ ಹಣ ಸಂಗ್ರಹಿಸಿ ಕೊಡುವುದಿಲ್ಲ. (ಪಿಡಿಓಗಳಾದರೆ ಅವರು ಮೇಲಿನ ಅಧಿಕಾರಿಗಳ ನಿಯಂತ್ರಣದಲ್ಲಿದ್ದು ಜನಪ್ರತಿನಿಧಿಗಳ ಮತ್ತು ಮಂತ್ರಿಗಳ ನಿಯಂತ್ರಣದಲ್ಲಿರುತ್ತಾರೆ). ಪಂಚಾಯತ್‌ನಲ್ಲಿ ಆಡಳಿತ ನಡೆಸುವ ಪಂಚಾಯತ್ ಸದಸ್ಯರು ಆ ಊರಿನ ಅಭಿವೃದ್ಧಿಗೆ ಉತ್ತಮರೇ, ದಿಲ್ಲಿ, ಬೆಂಗಳೂರಿನಿಂದ ಅಽಕಾರಿಗಳ, ಜನಪ್ರತಿನಿಧಿಗಳ ನಿಯಂತ್ರಣದಲ್ಲಿ ಕೆಲಸ ಮಾಡುವ ಇಲ್ಲಿಯ ಅಽಕಾರಿಗಳು ಉತ್ತಮರೇ ಎಂದು ಆಯಾ ಊರಿನ ಜನರು ತೀರ್ಮಾನಿಸಬೇಕು. ನಮ್ಮ ಊರಿನಲ್ಲಿ, ನಮ್ಮ ಓಟಿನಲ್ಲಿ ಗೆದ್ದ ಜನಪ್ರತಿನಿಽಗಳಿಗೆ ಅಧಿಕಾರ ನೀಡುವುದು ಬಿಟ್ಟು ಅವರ ಮೇಲೆ ವಿಶ್ವಾಸವಿರಿಸದೇ ಅಧಿಕಾರವನ್ನೇ ಕಿತ್ತುಕೊಂಡು ಅಧಿಕಾರಿಗಳ ಕೈಗೆ ನೀಡುವುದನ್ನು ಒಪ್ಪಿಕೊಂಡರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ನಿರಂಕುಶ ಆಡಳಿತಕ್ಕೆ ಅದು ಕಾರಣವಾಗಿ ನೂರಕ್ಕೆ ನೂರು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವುದಕ್ಕೆ ಯಾವುದೇ ಸಂಶಯವಿಲ್ಲ. ಪಂಚಾಯತ್ ಸದಸ್ಯರುಗಳು, ಸಾರ್ವಜನಿಕರು, ಸಂಘಸಂಸ್ಥೆಗಳು ಮಹಾತ್ಮಾಗಾಂಧಿಯವರ ಗ್ರಾಮಸ್ವರಾಜ್ಯದ ಆಡಳಿತವನ್ನು ತರುವ ಪ್ರಯತ್ನವನ್ನು ಮಾಡಬೇಕು. ಲಂಚ, ಭ್ರಷ್ಟಾಚಾರವನ್ನು ತಡೆಯಲಿಕ್ಕಾಗಿ ಜನರಿಗೆ ಆಡಳಿತದ ಸ್ವಾತಂತ್ರ್ಯ ನೀಡುವವರಿಗೆ ತಮ್ಮ ಮತವನ್ನು ಚಲಾಯಿಸುವ ನಿರ್ಣಯವನ್ನು ಮಾಡಬೇಕು. ಈ ಮೇಲಿನ ವಿಚಾರದ ಪ್ರತಿಪಾದನೆಗಾಗಿ ‘ಸುದ್ದಿ’ ಹಲವಾರು ವರ್ಷಗಳಿಂದ ಜನಾಂದೋಲನ ನಡೆಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಽ, ಪ್ರಧಾನಿ ಮೋದಿಯವರ ಕ್ಷೇತ್ರದಲ್ಲಿ ಸ್ಪಽಸಲು ನಾನು ಬಯಸಿದ್ದೆ ಎಂಬುದನ್ನು ಓದುಗರ ಗಮನಕ್ಕೆ ತರಲು ಇಚ್ಚಿಸುತ್ತೇನೆ.

-ಸಂ.

LEAVE A REPLY

Please enter your comment!
Please enter your name here