ಪುತ್ತೂರಿನಲ್ಲಿ ಬೃಹತ್ ಮೀಲಾದ್ ಸಮಾವೇಶ

0

ದರ್ಬೆಯಿಂದ ಕಿಲ್ಲೆ ಮೈದಾನಕ್ಕೆ ಆಕರ್ಷಕ ಕಾಲ್ನಡಿಗೆ ಜಾಥಾ

ಪುತ್ತೂರು: ಪ್ರವಾದಿ ಮುಹಮ್ಮದ್(ಸ.ಅ) ಅವರು ಸಮಾನತೆ, ಸೌಹಾರ್ದತೆಯನ್ನು ವಿಶ್ವಕ್ಕೆ ಸಾರಿದ ಮಹಾನ್ ನಾಯಕರಾಗಿದ್ದು ಅವರು ತೋರಿಸಿದ ಹಾದಿ ಸತ್ಯ ಮತ್ತು ನ್ಯಾಯದ ಹಾದಿಯಾಗಿದೆ ಎಂದು ಮಿತ್ತೂರು ಕೆಜಿಎನ್ ದಅವಾ ಕಾಲೇಜಿನ ಪ್ರಾಂಶುಪಾಲ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ಹೇಳಿದರು.

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಹಾಗೂ ಈದ್ ಮೀಲಾದ್ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಅ.9ರಂದು ಕಿಲ್ಲೆ ಮೈದಾನದಲ್ಲಿ ಮರ್‌ಹೂಂ ಬೊಳ್ವಾರ್ ಅಬ್ಬಾಸ್ ಹಾಜಿ ವೇದಿಕೆಯಲ್ಲಿ ನಡೆದ 30ನೇ ವರ್ಷದ ಬೃಹತ್ ಮೀಲಾದ್ ಸಮಾವೇಶದಲ್ಲಿ ಅವರು ಪ್ರಭಾಷಣ ನಡೆಸಿದರು. ಅಂಧಕಾರ ಅಜ್ಞಾನದ ಮುಳುಗಿದ್ದ ಜನ ಸಮೂಹವನ್ನು ಜ್ಞಾನದ ಬೆಳೆಕಿನೆಡೆಗೆ ಕೊಂಡೊಯ್ದ ಪ್ರವಾದಿಯವರು ಜಗತ್ತಿಗೆ ಆದರ್ಶ ನಾಯಕರಾಗಿದ್ದಾರೆ. ಇಸ್ಲಾಂ ಇನ್ನೊಂದು ಧರ್ಮವನ್ನು ಗೌರವಿಸಲು ಕಲಿಸಿಕೊಟ್ಟಿದ್ದು ಏಕತೆ, ಐಕ್ಯತೆ, ಸಮಗ್ರತೆ ಮತ್ತು ಸೌಹಾರ್ದತೆಯನ್ನು ಸಾರಿದ ಧರ್ಮವಾಗಿದೆ ಎಂದವರು ಹೇಳಿದರು.

ಪ್ರವಾದಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ-ಖಾದರ್ ದಾರಿಮಿ: ಉದ್ಘಾಟಿಸಿದ ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ದಾರಿಮಿ ಮಾತನಾಡಿ ಪ್ರವಾದಿ ಮುಹಮ್ಮದ್(ಸ.ಅ) ಅವರು ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ್ದು ಅವರ ಜೀವನವೇ ಸತ್ಯ, ಶಾಂತಿಯ ಸಂದೇಶವಾಗಿದೆ. ಎಲ್ಲ ಧರ್ಮಗಳು ಶಾಂತಿ ಸೌಹಾರ್ದತೆಯನ್ನು ಬೋಧಿಸಿದ್ದು ಅದನ್ನು ಅನುಸರಿಸುವುದು ಕಾಲದ ಅವಶ್ಯಕತೆಯಾಗಿದೆ ಎಂದು ಅವರು ಹೇಳಿದರು. ಗಾಂಜಾ ಅಮಲು ಪದಾರ್ಥ ಮುಕ್ತ ಸಮಾಜಕ್ಕಾಗಿ ನಾವು ಪಣ ತೊಡಬೇಕಾಗಿದ್ದು ವಿದ್ಯಾರ್ಥಿ ಸಮೂಹ ಅದಕ್ಕೆ ಬಲಿಬೀಳದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ನ್ಯಾಯದ ಹಾದಿಯಲ್ಲಿ ಧೃಢವಾಗಿ ನಿಲ್ಲಬೇಕು-ಹಮೀದ್ ಸಾಲ್ಮರ: ಪ್ರಾಸ್ತಾವಿಕವಾಗಿ ಈದ್ ಮಿಲಾದ್ ಸಮಿತಿ ಪ್ರ.ಕಾರ್ಯದರ್ಶಿ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಸತ್ಯ, ನ್ಯಾಯದ ಹಾದಿಯಲ್ಲಿ ನಾವು ಧೃಢವಾಗಿ ನಿಲ್ಲಬೇಕು. ವಿಶ್ವಕ್ಕೆ ಶಾಂತಿಯನ್ನು ಸಾರಿರುವ ಪ್ರವಾದಿಯವರು ಸತ್ಯ ಮತ್ತು ನ್ಯಾಯವನ್ನು ಪ್ರತಿಪಾದಿಸಿದ ಮಹಾನ್ ನಾಯಕರಾಗಿದ್ದಾರೆ ಎಂದು ಹೇಳಿದರು. ಅನ್ಯಾಯ, ಅನೀತಿ, ಅಕ್ರಮ ದೌರ್ಜನ್ಯಗಳ ವಿರುದ್ಧ ಸಮುದಾಯ ಒಗ್ಗಟ್ಟಿನಲ್ಲಿರಬೇಕಾದ ಅನಿವಾರ್ಯತೆಯಿದೆ ಎಂದು ಅವರು ಹೇಳಿದರು.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಳ್ ಪುತ್ತೂರು ದುವಾಶೀರ್ವಚನ ನೀಡಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ದಫ್ ಪ್ರದರ್ಶನ: ಸಭೆಯ ಮೊದಲು ಹಯಾತುಲ್ ಇಸ್ಲಾಂ ದಫ್ ಪನೇಲ, ಕೋಣಾಜೆ ಹಾಗೂ ಲಜಿನತುಲ್ ಅನ್ಸಾರಿಯಾ ದಪ್‌ ಕಮಿಟಿ ಕೃಷ್ಣಾಪುರ ತಂಡದಿಂದ ಆಕರ್ಷಕ ದ- ಪ್ರದರ್ಶನ ನಡೆಯಿತು.

ಬುರ್ದಾ ಮಜ್ಲಿಸ್: ಸಯ್ಯದ್ ತ್ವಾಹಾ ತಂಳ್ ಪುಕಟೂರು, ಶಹೀನ್ ಬಾಬು ತಾನೂರು ಹಾಗೂ ಹಫೀಲ್ ಮಶ್ಹೂದ್ ಹಿಮಾಮಿ ಸಖಾಫಿಯವರಿಂದ ಬುರ್ದಾ ಮಜ್ಲಿಸ್ ನಡೆಯಿತು.

ಸಿಝಾನ್ ಹಸನ್‌ರವರಿಗೆ ಸನ್ಮಾನ: ಪುತ್ತೂರು ಬಸ್ ನಿಲ್ದಾಣದಲ್ಲಿ ಸುಮಾರು 50ರಷ್ಟು ಪ್ರಯಾಣಿಕರಿದ್ದ ಬಸ್ಸು ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಸಂದರ್ಭದಲ್ಲಿ ಸಮಯಪ್ರe ಮೆರೆದು ಜನರ ಜೀವ ಉಳಿಸಿದ ಆಪತ್ಬಾಂಧವ ಸಿಝಾನ್ ಹಸನ್ ಉಪ್ಪಿನಂಗಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಸ್‌ಡಿಪಿಐನಿಂದ ಸ್ವಚ್ಛತೆ: ಜಾಥಾದಲ್ಲಿ ಭಾಗವಹಿಸಿದವರಿಗೆ ಎಸ್‌ಡಿಪಿಐ ವತಿಯಿಂದ ಐಸ್‌ಕ್ರೀಂ ವ್ಯವಸ್ಥೆ ಮಾಡಲಾಗಿತ್ತು. ಜಾಥಾದ ಬಳಿಕ ಎಸ್‌ಡಿಪಿಐ ಕಾರ್ಯಕರ್ತರು ಪೇಟೆಯನ್ನು ಸ್ವಚ್ಛಗೊಳಿಸಿದರು.

ಅನ್ನದಾನ ವ್ಯವಸ್ಥೆ: ಬಪ್ಪಳಿಗೆ ಈದ್ ಮಿಲಾದ್ ಸಮಿತಿ ವತಿಯಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಪುತ್ತೂರು ತಾ| ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ಮುಹಮ್ಮದ್, ಸಾಜ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಗುತ್ತಿಗೆದಾರ ಉಸ್ಮಾನ್ ಹಾಜಿ ಚೆನ್ನಾರ್, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಖಾಸಿಂ ಹಾಜಿ ಮಿತ್ತೂರು, ಕೋಶಾಽಕಾರಿ ಯೂಸು- ಹಾಜಿ ಕೈಕಾರ, ಪ್ರ.ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಹಸನ್ ಹಾಜಿ ಸಿಟಿ ಬಜಾರ್, ಎಪಿಎಂಸಿ ನಿರ್ದೇಶಕ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಬಪ್ಪಳಿಗೆ ಮಸೀದಿ ಅಧ್ಯಕ್ಷ ಹಮೀದ್ ಹಾಜಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಸಾಲ್ಮರ ಸೈಯದ್‌ಮಲೆ ಮಸೀದಿ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಖತೀಬ್ ಉಮ್ಮರ್ ದಾರಿಮಿ, ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್, ದರ್ಬೆ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಪುತ್ತೂರು ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ಫಝಲ್ ರಹೀಂ, ನಗರಸಭಾ ಸದಸ್ಯರಾದ ರಿಯಾಝ್ ಪರ್ಲಡ್ಕ, ಯೂಸುಫ್ ಡ್ರೀಮ್ಸ್, ಅಬೂಶಝ ಉಸ್ತಾದ್, ಎಸ್ಸೆಸ್ಸೆಫ್ ಮುಖಂಡ ಶಫೀಕ್ ಮಾಸ್ಟರ್ ತಿಂಗಳಾಡಿ, ಪ್ರಮುಖರಾದ ಜಮಾಲುದ್ದೀನ್ ಹಾಜಿ ಮುಕ್ವೆ, ದಾವೂದ್ ಡಿ.ಎ ಬಪ್ಪಳಿಗೆ, ಆದಂ ಹಾಜಿ ಪಡೀಲ್, ಇಕ್ಬಾಲ್ ಭಾರತ್ ಲೈಮ್, ಫಾರೂಕ್ ಬಾಯಬೆ, ಶಬೀರ್ ಕೆಂಪಿ, ಯು.ಟಿ ತೌಸೀಫ್, ಕೆ.ಎಂ ಹನೀಫ್ ಮಾಡಾವು, ಅರ್ಶದ್ ದರ್ಬೆ, ಅಬ್ದುಲ್ ಅಝೀಝ್, ಹನೀಫ್ ಸುನ್ನೀಟುಡೇ, ಇಬ್ರಾಹಿಂ ಮುಲಾರ್, ವಿ.ಕೆ ಶರೀಫ್, ಯು ಅಬ್ದುಲ್ಲ ಹಾಜಿ, ಡಾ.ನಝೀರ್ ಅಹ್ಮದ್, ಹುಸೈನಾರ್ ಮಾಡಾವು, ಹಮೀದ್ ಹಾಜಿ ಸೋಂಪಾಡಿ, ಉಸ್ಮಾನ್ ಬೊಳ್ವಾರು, ಸ್ವಾಲಿಹ್ ಮುರ, ಆರ್.ಪಿ ರಝಾಕ್ ರಫೀಕ್ ಮಾಂತೂರು, ಸಿದ್ದೀಕ್ ಕೂರ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಶ್ರಫ್ ಬಾವು ವಂದಿಸಿದರು. ಕೆ.ಎಂ ಅಬ್ದುಲ್ ಖಾದರ್ ಕೂರ್ನಡ್ಕ ಕಾರ್ಯಕ್ರಮ ನಿರೂಪಿಸಿದರು.‌

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಕೋಶಾಽಕಾರಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಇಕ್ಬಾಲ್ ಬಪ್ಪಳಿಗೆ, ಕೋಶಾಧಿಕಾರಿ ಸೂಫಿ ಪಡೀಲ್ ಹಾಗೂ ಯುವಜನ ಪರಿಷತ್‌ನ ಪದಾಧಿಕಾರಿಗಳು, ಸದಸ್ಯರು, ಈದ್ ಮಿಲಾದ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಜಾಥಾದಲ್ಲಿ ಸಾವಿರಾರು ಮಂದಿ ಭಾಗಿ:

ದರ್ಬೆಯಲ್ಲಿ ಕಾಲ್ನಡಿಗೆ ಜಾಥಾ ಉದ್ಘಾಟನೆಗೊಂಡಿತು. ಸಿಟಿ ಬಝಾರ್‌ನ ಮಾಲಕ ಹಸನ್ ಹಾಜಿಯವರು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಖಾಸಿಂ ಹಾಜಿ ಮಿತ್ತೂರುರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು. ಪುತ್ತೂರು ಮುಖ್ಯ ರಸ್ತೆಯಾಗಿ ಸಾಗಿದ ಕಾಲ್ನಡಿಗೆ ಜಾಥಾವು ಕಿಲ್ಲೆ ಮೈದಾನದಲ್ಲಿ ಸಮಾಪ್ತಿಯಾಯಿತು. ಜಾಥಾದುದ್ದಕ್ಕೂ ಸ್ಕೌಟ್, ಗೈಡ್ಸ್ ಹಾಗೂ ದ- ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಜಾಥಾದಲ್ಲಿ ಪ್ರವಾದಿ ಮಹಮ್ಮದ್(ಸ.ಅ) ರವರ ಸ್ವಲಾತ್ ಹಾಗೂ ಮದ್‌ಹ್ ಗಾನಗಳೊಂದಿಗೆ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ವಿವಿಧ ಕಡೆಗಳಿಂದ ಆಗಮಿಸಿದ ವಿವಿಧ ತಂಡಗಳು ವಿವಿಧ ಸಮವಸಗಳೊಂದಿಗೆ ಜಾಥಾದಲ್ಲಿ ಭಾಗಿಯಾದರು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಪೇಟೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜಾಥಾ ವೀಕ್ಷಿಸಿದರು. ಮುಸ್ಲಿಂ ಯುವಜನ ಪರಿಷತ್ ಪದಾಧಿಕಾರಿಗಳು ಹಾಗೂ ಮಿಲಾದ್ ಸಮಿತಿಯ ಪದಾಽಕಾರಿಗಳು ಮುಂಚೂಣಿಯಲ್ಲಿದ್ದುಕೊಂಡು ಜಾಥಾ ಸುಸೂತ್ರವಾಗಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಸಿಹಿ ವಿತರಣೆ:

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ದರ್ಬೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು. ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕೆ.ಸಿ ಅಶೋಕ್ ಶೆಟ್ಟಿ, ದಾಮೋದರ್ ಮುರ, ರವಿಪ್ರಸಾದ್ ಶೆಟ್ಟಿ, ನಾಗೇಶ್ ಆಚಾರ್ಯ, ಗಂಗಾಧರ ಶೆಟ್ಟಿ, ಕೇಶವ ಬೆದ್ರಾಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here