ರಾಜ್ಯ ಗುಪ್ತ ವಾರ್ತೆ ನಿವೃತ್ತ ಎಎಸೈ ಸುರೇಶ್ ರೈಯವರಿಗೆ ಸ್ನೇಹಿತರ ಬಳಗದಿಂದ ಅಭಿಮಾನದ ಗೌರವ

0

ಪುತ್ತೂರು :ರಾಜ್ಯ ಗುಪ್ತ ವಾರ್ತೆ ಮಂಗಳೂರು ಘಟಕದ ನಿವೃತ್ತ ಎಎಸೈ ಸುರೇಶ್ ರೈ ಅವರಿಗೆ ಸ್ನೇಹಿತರ ಬಳಗದ ವತಿಯಿಂದ ಅಭಿಮಾನದ ಗೌರವ ಸಮಾರಂಭ ಪುತ್ತೂರಿನ ಕುಂಕುಮ್ ಅಸೋಸಿಯೇಟ್ಸ್‌ನ ಸಭಾಂಗಣದಲ್ಲಿ ಅ.8ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಅವರು, ಸುರೇಶ್ ರೈ ಅವರು ವೃತ್ತಿಯಿಂದ ನಿವೃತ್ತರಾದರೂ ಗೌರವ ಪಡೆಯುವ ವ್ಯಕ್ತಿ. ಸುರೇಶ್ ರೈ ಅವರು ಅಧಿಕಾರದಲ್ಲಿ ಇದ್ದರೂ, ನಿವೃತ್ತರಾದರೂ ಸಮಾನ ಗೌರವಕ್ಕೆ ಪಾತ್ರರಾಗುವಂತಹ ವ್ಯಕ್ತಿತ್ವ ಹೊಂದಿದವರು ಎಂದರು.

ತಾ.ಪಂ.ಮಾಜಿ ಸದಸ್ಯ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ, ಸುರೇಶ್ ರೈ ಅವರು ನಿವೃತ್ತರಾದರೂ ಅವರ ಹುರುಪು, ಯೌವನತೆ ಎಲ್ಲರಿಗೂ ಸ್ಪೂರ್ತಿ, ಜೀವನದಲ್ಲಿ ಉತ್ತಮ ನಡತೆ ಹೊಂದಿರುವ ವ್ಯಕ್ತಿತ್ವ, ಎಲ್ಲರ ಕಷ್ಟ-ಸುಖದಲ್ಲಿ ಭಾಗಿಯಾಗುವ ವ್ಯಕ್ತಿತ್ವದ ಸುರೇಶ್ ರೈ ಅವರು ಮೃದು ಸ್ವಭಾವದ ವ್ಯಕ್ತಿಯಾಗಿದ್ದಾರೆ.ಅವರು ಆತ್ಮೀಯತೆಯಿಂದ ಗೌರವ ಹೆಚ್ಚಿಸಿಕೊಂಡವರು ಎಂದರು.

ಸುರೇಶ್ ರೈಯವರ ಬಾವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿ ಗಂಗಾಧರ ರೈ ಪೆಜಕ್ಕಳ ಮಾತನಾಡಿ,ಸಮಾಜ ಸೇವೆಯಲ್ಲಿ ಸುರೇಶ್ ರೈ ಅವರು ಉತ್ತಮವಾಗಿ ತೊಡಗಿಸಿಕೊಂಡವರು. ಸರಳತೆ, ಉತ್ತಮ ಬಾಂಧವ್ಯದಿಂದ ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾದವರು.ಸ್ನೇಹ ಸಂಬಂಧಕ್ಕೆ ಭಾಷ್ಯ ಬರೆದ ಸುರೇಶ್ ರೈ ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ ಎಂದರು.

ಪೊಲೀಸ್ ಇಲಾಖೆಯ ಬಸವರಾಜ್ ಅವರು ಮಾತನಾಡಿ, ಸುರೇಶ್ ರೈ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಅಽಕಾರಿ,ಪೊಲೀಸ್ ಇಲಾಖೆಯ ಅನರ್ಘ್ಯ ರತ್ನ.ಸ್ಪಂದನಾ ಶೀಲ ವ್ಯಕ್ತಿಯಾಗಿದ್ದ ಅವರು ನಿವೃತ್ತರಾದರೂ ಇಲಾಖೆಯಲ್ಲಿ ಅವರ ಹೆಸರು ಶಾಶ್ವತ ,ಗೆಜ್ಜೆಗಿರಿಯ ಕಾರ್ಯಕ್ರಮದಲ್ಲಿ ನಿರಂತರವಾಗಿ ಶ್ರಮಿಸಿದರು.ಕೇವಲ ನಾಲ್ಕು ಗಂಟೆ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದರು.ಇದು ಅವರ ಕರ್ತವ್ಯನಿಷ್ಟೆಗೆ ಕೈಗನ್ನಡಿ ಎಂದು ಮೆಲುಕು ಹಾಕಿದರು.

ಕುಂಕುಮ್ ಅಸೋಸಿಯೇಟ್ಸ್‌ನ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಸುರೇಶ್ ರೈ ಹಾಗೂ ನನಗೆ ಸುಮಾರು 25 ವರ್ಷಗಳಿಗೂ ಮೀರಿದ ಸ್ನೇಹ ಸಂಬಂಧ, ಈವರೆಗೆ ನಮ್ಮಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಅನ್ಯೋನ್ಯತೆಯಿರುವ ಸಂಬಂಧ. ಆತ್ಮೀಯತೇ ಎಷ್ಟೆಂದರೆ ಸುರೇಶ್ ರೈ ಅವರಿಗೆ ಹೆಣ್ಣು ನೋಡುವಾಗಲೂ ಇಬ್ಬರೂ ಸ್ಕೂಟರ್ ನಲ್ಲಿ ಜತೆಯಾಗಿ ಹೋಗಿದ್ದೆ.ನಮ್ಮದೊಂದು ಸ್ನೇಹಿತರ ಅಡ್ಡೆಯಿತ್ತು.ಹರೀಶ್ ಭಂಡಾರಿ ಸೇರಿದಂತೆ ಹಲವರು ತಂಡದಲ್ಲಿದ್ದೆವು.ವೃತ್ತಿಯಿಂದ ನಿವೃತ್ತರಾದರೂ ಅವರು ನಮ್ಮ ಬಳಗದೊಂದಿಗೆ ಸದಾ ಇರುತ್ತಾರೆ ಎಂದು ಅವರ ಸ್ನೇಹ ಸಂಬಂಧವನ್ನು ವಿವರಿಸಿದರು.

ಸ್ನೇಹಿತರ ಬಳಗದಿಂದ ಅಭಿಮಾನದ ಗೌರವ ಸ್ವೀಕರಿಸಿದ ಸುರೇಶ್ ರೈ ಅವರು ಮಾತನಾಡಿ, ತಾನು ವೃತ್ತಿಯಿಂದ ನಿವೃತ್ತನಾದರೂ ಪುತ್ತೂರಲ್ಲೇ ಇರುತ್ತೇನೆ. ಇದರಿಂದಾಗಿ ತಾನು ಯಾವುದೇ ಕಾರ್ಯಕ್ರಮ ಬೇಡವೆಂದು ಸ್ನೇಹಿತರಲ್ಲಿ ವಿನಂತಿಸಿದರೂ ಕೇಳಲಿಲ್ಲ.ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಚಿರ ಋಣಿ.ಸೇವಾವಽಯಲ್ಲಿ ಐಪಿಎಸ್ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಎಲ್ಲರೂ ಉತ್ತಮ ಸಹಕಾರ,ಮಾರ್ಗದರ್ಶನ ನೀಡಿದ್ದಾರೆ.ಈಶ್ವರಮಂಗಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಲವು ವಿರೋಧ,ಆಕ್ಷೇಪಗಳು,ದೂರುಗಳು ಬಂದಿದ್ದರೂ,ಮೇಲಾಽಕಾರಿಗಳ ಸಹಕಾರ ಹಾಗೂ ತನಿಖೆಯಿಂದ ಯಾವುದೇ ಸಮಸ್ಯೆಯಾಗಲಿಲ್ಲ ಎಂದರು.

ಈ ಸಂದರ್ಭದಲ್ಲಿ ಸುರೇಶ್ ರೈ ಅವರ ಪತ್ನಿ ವನಜಾಕ್ಷಿ ರೈ ,ಪುತ್ರಿ ಪರೀಕ್ಷಾ ರೈ ,ಅರಿಯಡ್ಕ ಚಿಕ್ಕಪ್ಪ ನಾಯ್ಕ್ ,ಕುತ್ಯಾಡಿ ರಾಜೀವ ರೈ,ಕೇನ್ಯ ರವೀಂದ್ರ ನಾಥ ರೈ ,ಸಂತೋಷ್ ಕುಮಾರ್ ರೈ ಇಳಂತಾಜೆ,ಎನ್.ಕರುಣಾಕರ ರೈ ದೇರ್ಲ ,ಅರುಣ್ ಕುಮಾರ್ ರೈ ಆನಾಜೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸುರೇಶ್ ರೈ ಅವರ ಸ್ನೇಹಿತರು, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಪ್ರಿಶಾ ರೈ ,ಸಾನ್ವಿ ರೈ ಪ್ರಾರ್ಥಿಸಿದರು. ಶರತ್ ಕುಮಾರ್ ರೈ ಕಾವು ಸ್ವಾಗತಿಸಿ,ವಂದಿಸಿದರು.ಪ್ರಿಶಾ ರೈ ಅವರು ಸನ್ಮಾನ ಪತ್ರ ವಾಚಿಸಿದರು.ಡಾ.ವೀಣಾ ಸಂತೋಷ್ ರೈ,ಬಾಲಕೃಷ್ಣ ಗೌಡ,ಹರೀಶ್ ನಾಯ್ಕ್ ,ಅಶಿತ್ ಶೆಟ್ಟಿ ಅವರು ಸಹಕರಿಸಿದರು.

ಸುರೇಶ್ ರೈ ಅವರು 1989ರ ನವೆಂಬರ್ 6ರಂದು ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪಿಸಿಯಾಗಿ ವೃತ್ತಿ ಜೀವನ ಆರಂಭಿಸಿ ,ಈ ಠಾಣೆಯಲ್ಲಿ 4.6 ವರ್ಷ ಸೇವೆ ಬಳಿಕ ಪುತ್ತೂರು ಎಎಸ್ಪಿ ಕಚೇರಿಯಲ್ಲಿ 17 ವರ್ಷ,ಮೆಸ್ಕಾಂ ವಿಜಿಲೆನ್ಸ್ ನಲ್ಲಿ 4.6 ವರ್ಷ ಸೇವೆ ಸಲ್ಲಿಸಿ 2016ರಲ್ಲಿ ಎಎಸೈ ಆಗಿ ಪದೋನ್ನತಿಗೊಂಡು ಸುಳ್ಯ ಪೊಲೀಸ್ ಠಾಣೆಯಲ್ಲಿ 1 ವರ್ಷ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯದಲ್ಲಿ 2 ವರ್ಷ, ಈಶ್ವರಮಂಗಲ ಪೊಲೀಸ್ ಹೊರಠಾಣೆಯಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದಾರೆ. ಕಳೆದ 2 ವರ್ಷಗಳಿಂದ ಮಂಗಳೂರಿನ ರಾಜ್ಯ ಗುಪ್ತ ವಾರ್ತೆಯಲ್ಲಿ ಕರ್ತವ್ಯದಲ್ಲಿದ್ದು ಅವರು ಸೆ.30ರಂದು ನಿವೃತ್ತಿಯಾದರು.

LEAVE A REPLY

Please enter your comment!
Please enter your name here