ಭಾರತ್ ಸ್ಕೌಟ್, ಗೈಡ್ ರಾಜ್ಯ ಪುರಸ್ಕಾರ ಪರೀಕ್ಷೆ; ರಾಮಕುಂಜೇಶ್ವರ ಆ.ಮಾ.ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ತೇರ್ಗಡೆ

0

ರಾಮಕುಂಜ: ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಮೂಡಬಿದಿರೆಯಲ್ಲಿ ನಡೆದ ಗೈಡ್ಸ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿನಿಯರಾದ ಭೂಮಿಕಾ ಕೆ, ಪಂಚಮಿ, ಹಿಮಾನಿ, ಲೀಕ್ಷಿತಾ, ಗ್ರೀಷ್ಮಾ, ಸಾವರಿಯಾ ರೈ, ದೀಕ್ಷಾ, ಮೈತ್ರಿ, ರಕ್ಷಿತಾ ಶೆಟ್ಟಿಯವರು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಲಯದ ಗೈಡ್ ಶಿಕ್ಷಕಿಯರಾದ ಪ್ರೇಮ ಹಾಗೂ ದಿವ್ಯರವರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here