ರಿಕ್ಷಾ ಚಾಲಕನಿಂದ ನಕಲಿ ನೋಟು ನೀಡಿ ವಂಚನೆ

0

ಪುತ್ತೂರು : ರಿಕ್ಷಾ ಚಾಲಕರೊಬ್ಬರು ಪ್ರಯಾಣಿಕರೋರ್ವರಿಗೆ ರೂ.200ರ ನಕಲಿ ನೋಟು ನೀಡಿ ವಂಚಿಸಿದ ಘಟನೆ ನಡೆದಿದೆ.

ಪರ್ಲಡ್ಕ ನಿವಾಸಿ ಹರ್ಷವರ್ಧನ್ ನ್ಯಾಕ್ ಎಂಬವರು ವಂಚನೆಗೊಳಗಾದ ವ್ಯಕ್ತಿ. ಹರ್ಷವರ್ಧನ್ ನ್ಯಾಕ್‌ ರವರು ಬೊಳುವಾರುನಿಂದ ಪರ್ಲಡ್ಕಕ್ಕೆ ರಾತ್ರಿ 7 ಗಂಟೆ ಸಮಯದಲ್ಲಿ ಅಟೋರಿಕ್ಷಾ ಬಾಡಿಗೆಗೆ ಗೊತ್ತುಮಾಡಿ ಪ್ರಯಾಣಿಸಿದ್ದರು. ಪರ್ಲಡ್ಕದಲ್ಲಿ ಇಳಿದ ಹರ್ಷವರ್ಧನ ನ್ಯಾಕ್ ರಿಕ್ಷಾ ಚಾಲಕನಿಗೆ ಬಾಡಿಗೆ ಹಣ ರೂ.500ರ ನೋಟು ನೀಡಿದ್ದರು. ಚಾಲಕನು ಬಾಡಿಗೆ ಮೊತ್ತ ಕಳೆದು ಉಳಿದ ಹಣ ಕೊಡುವಾಗ ರೂ.200ರ ನಕಲಿ ಒಂದು ನೋಟನ್ನು ಕೊಟ್ಟಿದ್ದರು. ಬಳಿಕ ಮನೆಗೆ ಹೋದ ಹರ್ಷವರ್ಧನ್‌ರವರು ನೋಟು ನೋಡಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ.

LEAVE A REPLY

Please enter your comment!
Please enter your name here