ವಿಟ್ಲ: ಕಾರು – ಲಾರಿ ಮಧ್ಯೆ ಅಪಘಾತ – ಇಬ್ಬರಿಗೆ ಗಾಯ

0

ವಿಟ್ಲ: ಕಾರು ಹಾಗೂ ಲಾರಿಯ ಮಧ್ಯೆ ಅಪಘಾತ ಸಂಭವಿಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಚಂದಳಿಕೆ ಸಮೀಪದ ಸಿ.ಪಿ.ಸಿ.ಆರ್.ಐ. ಸಮೀಪ ನಡೆದಿದೆ.

ವಿಟ್ಲ ಭಾಗದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಮತ್ತು ಪುತ್ತೂರು ಕಡೆಯಿಂದ ವಿಟ್ಲ ಭಾಗಕ್ಕೆ ತೆರಳುತ್ತಿದ್ದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.

ಘಟನೆಯಿಂದಾಗಿ ಕಾರಿನಲ್ಲಿದ್ದ ಮಂಜೇಶ್ವರ ನಿವಾಸಿಗಳಾದ ಅಬ್ದುಲ್ ಗಫುರ್ ಹಾಗೂ ಹುಸೈನ್ ಎಂಬವರು ಗಾಯಗೊಂಡಿರುವುದಾಗಿ ಮಾಹಿತಿ ಲಭಿಸಿದೆ. ಕಾರು ಆಟೋ ರಿಕ್ಷಾವೊಂದನ್ನು ಓವರ್ ಟೆಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ‌ ದಾಖಲು ಮಾಡಲಾಗಿದೆ. ಸ್ಥಳಕ್ಕೆ ತೆರಳಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here