ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂಡೋವುಮೂಲೆ ಎಂಬಲ್ಲಿ ರಸ್ತೆ ವಿಚಾರವಾಗಿ ಇದ್ದ ವಿವಾದವೊಂದು ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಮೂಲಕ ಬಗೆ ಹರಿದ ಘಟನೆ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಮುಂಡೋವುಮೂಲೆ ದ.ಕ.ಜಿ.ಮರಾಟಿ ಸಂರಕ್ಷಣಾ ಸಮಿತಿ ಸಂಚಾಲಕ ಶ್ರೀಧರ್ ನಾಯ್ಕರವರ ತಂದೆ ಶೀನ ನಾಯ್ಕ ಅವರ ಮನೆಯನ್ನು ಸಂಪರ್ಕಿಸುವ ರಸ್ತೆ ಇದ್ದು, ಇದು ಏರು ರಸ್ತೆಯಾದ ಕಾರಣ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾದ ಮಾತಾಗಿತ್ತು. ಈ ಸ್ಥಳ ಬೇರೆಯವರ ಸ್ವಾಧೀನದಲ್ಲಿದ್ದ ಕಾರಣ ರಸ್ತೆ ತಗ್ಗಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅನೇಕ ಬಾರಿ ಮಾತುಕತೆಗಳು ನಡೆದಿದ್ದರೂ ಫಲಪ್ರದಾಯಕವಾಗಿರಲಿಲ್ಲ.
ಈ ಬಗ್ಗೆ ಶೀನ ನಾಯ್ಕರ ಮನವಿಯನ್ನು ಸ್ವೀಕರಿಸಿದ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲರವರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ರಸ್ತೆ ತಗ್ಗಿಸಲು ಒಪ್ಪಲಾಗಿದೆ. ಮಾತುಕತೆಯು ಇತ್ತಂಡದವರೊಡನೆ ಹಾಗೂ ಪೋಲೀಸ್ ಇಲಾಖೆಯವರಿದ್ದು ನಡೆದಿದ್ದು, ಅದೇ ದಿನ ಹಿಟಾಚಿ ಯಂತ್ರದ ಮೂಲಕ ರಸ್ತೆ ತಗ್ಗಿಸಲಾಯಿತು. ಒಟ್ಟಾರೆ ಮರಾಟಿ ಸಂರಕ್ಷಣಾ ಸಮಿತಿಯ ಶ್ರಮದಿಂದ 25 ವರ್ಷದಿಂದ ಇದ್ದ ಸಮಸ್ಯೆಯೊಂದು ಪರಿಹಾರ ಕಂಡಿದೆ.
ಬಹಳ ದಿನಗಳ ರಸ್ತೆಯ ತಕಾರಾರು ಅಂತ್ಯ ಕಂಡಿದೆ ಸರ್ಕಾರದ ಜಾಗವನ್ನು ಅತಿಕ್ರಮಿಸಿಕೊಂಡು ಅತೀ ಎತ್ತರದ ದಾರಿಯನ್ನು ತಗ್ಗಿಸಲು ನಮಗೂ ಬೇಡ ನಿಮಗೂ ಬೇಡ ಎಂಬ ವಾದವನ್ನೇ ಮುಂದುವರಿಸುತ್ತಾ ರಸ್ತೆಯನ್ನು ಮಾಡಲು ಬಿಡದೆ ಮಳೆಗಾಲದಲ್ಲಿ ತನ್ನ ವಾಹನ ಇತರ ಸಾಮಗ್ರಿಗಳನ್ನು ಹೊತ್ತುಕೊಂಡು ನಡೆಯುವ ಕಷ್ಟದ ಸಮಯದಲ್ಲಿ ಯಾರಿಗೂ ಅರ್ಥ ಆಗದ ಪರಿಸ್ಥಿತಿ ಇತ್ತು. ಮರಾಟಿ ಸಮುದಾಯದ ವೇದನೆ ಅರಿತು. ಇನ್ನೊಂದು ಕುಟುಂಬದ ಭಾರೀ ವಿರೋಧದ ನಡುವೆ ಸುಮಾರು ನಾಲ್ಕು ಗಂಟೆಗಳ ಮಾತುಕತೆಯ ಮೂಲಕ ದ.ಕ .ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ. ಅವರ ಚಾಣಾಕ್ಷತನದಿಂದ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸರ್ಕಾರದ ಜಾಗವನ್ನು ಅಕ್ರಮಿಸಿ ವಿರೋಧ ವ್ಯಕ್ತ ಪಡಿಸುವ ಆ ಕುಟುಂಬಕ್ಕೆ ನೇರವಾಗಿ ಸಮಸ್ಯೆಯನ್ನು ವಿವರಿಸಿ ಬಗೆಹರಿಸುವಲ್ಲಿ ಯಶಸ್ವಿಯಾದರು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಸಂಘಟಕರು ಉಪಸ್ಥಿತಿ ಇದ್ದರು.