ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ-ಕಟಾ ವಿಭಾಗದಲ್ಲಿ ಸರಳಿಕಾನದ ಸಹೋದರ, ಸಹೋದರಿ ಪ್ರಥಮ

0

ಪುತ್ತೂರು; ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ ಕೊಡಗು ಕಪ್ ಕರಾಟೆ ಸ್ಪರ್ಧಾಕೂಟದಲ್ಲಿ ದೃಶನಾ ಸುರೇಶ್ ಸರಳಿಕಾನರವರು ಕಟಾ ಮತ್ತು ಕುಮಿಟೆ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ವೈಟ್ ಬೆಲ್ಟ್ ವಿಭಾಗದಲ್ಲಿ ರಿಶಾನ್ ಸುರೇಶ್ ಸರಳಿಕಾನರವರು ಕಟಾ ಪ್ರಥಮ ಕುಮಿಟೆ ತೃತೀಯ ಸ್ಥಾನ ಪಡೆದಿದ್ದಾರೆ.


ಇವರು ಪುತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಪುತ್ತೂರು ಶಾಖೆಯ ಶಿಕ್ಷಕದ ಶಿವಪ್ರಸಾದ್ ರವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾರ್ಥಿಗಳಾಗಿರುವ ದೃಶನಾ 6 ನೇ ತರಗತಿ ಹಾಗೂ ರಿಷಾನ್ ಯುಕೆಜಿಯ ವಿದ್ಯಾರ್ಥಿಗಳು. ಇವರು ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ವಿದ್ಯಾಶ್ರೀ ಮತ್ತು ಸುರೇಶ್ ಗೌಡ ಸರಳಿಕಾನ ದಂಪತಿ ಮಕ್ಕಳು.

LEAVE A REPLY

Please enter your comment!
Please enter your name here