ಉಪ್ಪಿನಂಗಡಿ: ವೃದ್ಧನ ಕೈಯಲ್ಲಿದ್ದ ಹಣದ ಚೀಲ ಎಗರಿಸಲೆತ್ನ

0

ಇಬ್ಬರು ಮಹಿಳೆಯರ ಕೃತ್ಯ,  ಸಿಸಿ ಕ್ಯಾಮರಾದಲ್ಲಿ ಸೆರೆ

ಉಪ್ಪಿನಂಗಡಿ : ಮೋಡಿ ಮಾಡಿ ವಂಚಿಸುತ್ತಿರುವ ಪ್ರಕರಣಗಳಿಂದ ಗಮನ ಸೆಳೆದಿರುವ ಉಪ್ಪಿನಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ವೃದ್ದರೊಬ್ಬರ ಕೈಯಲ್ಲಿದ್ದ ಹಣವಿದ್ದ ಚೀಲವನ್ನೇ ರಾಜಾರೋಷವಾಗಿ ಎಳೆಯಲು ಯತ್ನಿಸಿದ ಘಟನೆ ಬುಧವಾರದಂದು ನಡೆದಿದೆ.

ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಅಡಕೆ ಅಂಗಡಿಯಲ್ಲಿ ಅಡಕೆ ಮಾರಾಟ ಮಾಡಿ ದೊರೆತ ಹಣದೊಂದಿಗೆ ಹಿಂತಿರುಗುತ್ತಿದ್ದ ವೃದ್ದರೊಬ್ಬರ ಹಿಂದೆ ಮುಂದೆ ನಿಂತು ಹೊಂಚು ಹಾಕುತ್ತಿದ್ದ ಮಹಿಳೆಯರಿಬ್ಬರ ಪೈಕಿ ಹಿಂಬದಿ ಇದ್ದಾಕೆ ವೃದ್ದರ ಕೈಯಲ್ಲಿದ್ದ ಚೀಲವನ್ನು ಎಳೆಯುತ್ತಿದ್ದಂತೆಯೇ ಜಾಗೃತಗೊಂಡ ವೃದ್ದ ಚೀಲವನ್ನು ಬಲವಾಗಿ ಹಿಡಿದುಕೊಂಡರು. ಯಾರು ಹಣವಿದ್ದ ಚೀಲವನ್ನು ಎಳೆದದ್ದು ಎಂದು ತಿಳಿಯುವಷ್ಠರಲ್ಲಿ ಬೇರೊಂದು ವಿಚಾರದ ಬಗ್ಗೆ ಗಮನ ಸೆಳೆದವರಂತೆ ವರ್ತಿಸಿ ಮಹಿಳೆಯರಿಬ್ಬರೂ ಸ್ಥಳದಿಂದ ನಿರ್ಗಮಿಸುತ್ತಿರುವುದು ಸ್ಥಳದಲ್ಲಿನ ಸಿಸಿ ಕ್ಯಾಮರಾದದಲ್ಲಿನ ದೃಶ್ಯಾವಳಿಯಿಂದ ಸ್ಪಷ್ಠವಾಗಿ ಗೋಚರಿಸುತ್ತಿದೆ.

ಇಂತಹ ಮಹಿಳೆಯರ ಆಗಮನ ನಿಮ್ಮೂರಿನಲ್ಲಿಯೂ ಆಗಬಹುದೆಂದೂ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಅಡಕೆ ಅಂಗಡಿ ವರ್ತಕರು ಸಿ ಸಿ ಕ್ಯಾಮರಾದ ದೃಶ್ಯಾವಳಿಯನ್ನು ಮಾಧ್ಯಮಕ್ಕೆ ನೀಡಿರುತ್ತಾರೆ.

LEAVE A REPLY

Please enter your comment!
Please enter your name here