ವಿಟ್ಲ: ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು “Name jihad’ ಎಂದು ಬರೆದ ಘಟನೆ ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ನಲ್ಲಿ ನಡೆದಿದೆ. ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಮರುದಿನ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬರಹ ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ಲರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.