ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಇದರ ವತಿಯಿಂದ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ

0

ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಇದರ ವತಿಯಿಂದ ಪ್ರಾಥಮಿಕ ಅರೋಗ್ಯ ಕೇಂದ್ರ ತಿಂಗಳಾಡಿ ಇಲ್ಲಿ  ಅ.13ರಂದು ಇಬ್ಬರು ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಿಸಿದರು.

ಪ್ರದಾನಿ ಕನಸಿನಂತೆ 2025ಕ್ಕೆ ಕ್ಷಯ ರೋಗ (ಟಿ ಬಿ )ಮುಕ್ತ ಭಾರತ ಇದರ ಸಲುವಾಗಿ ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಇಬ್ಬರು ಕ್ಷಯ ರೋಗಿಗಳಿಗೆ ಮುಂದಿನ 5 ತಿಂಗಳ ಕಾಲ ಪೌಷ್ಟಿಕ ಆಹಾರ ವನ್ನು ನೀಡಲಿದ್ದು.ಪ್ರಸ್ತುತ ಒಂದು ತಿಂಗಳ ಪೌಷ್ಟಿಕ ಆಹಾರ ನೀಡಿದರು.

 ಕಾರ್ಯಕ್ರಮದಲ್ಲಿ ಕ್ಲಬ್ಬಿ ನ ಅಧ್ಯಕ್ಷ ಸತೀಶ್ ರೈ ಮಿತ್ತೋಡಿ ಅಧ್ಯಕ್ಸತೆ ವಹಿಸಿದರು. ಅತಿಥಿ ಡಾ. ಭವ್ಯ  ಮಾತನಾಡಿ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು.  ಅರೋಗ್ಯ ಸಹಾಯಕಿ ವಿದ್ಯಾ  ಮಾತನಾಡಿ ಸುತ್ತಮುತ್ತಲಿನ 4 ಗ್ರಾಮದಲ್ಲಿ ಒಟ್ಟು 9 ಜನ ಕ್ಷಯ ರೋಗಿಗಳಿದ್ದು ಅತೀ ಬಡತನದಲ್ಲಿದ್ದ 2 ರೋಗಿಗಳಿಗೆ 5 ತಿಂಗಳಿಗೆ ಬೇಕಾದ ಪೌಷ್ಟಿಕ ಆಹಾರ ಒದಗಿಸಿದ ಸ್ಪೋರ್ಟ್ಸ್ ಕ್ಲಬ್ಬಿನ ಎಲ್ಲರಿಗು ಅಭಿನಂದನೆ ಸಲ್ಲಿಸಿದರು. ಸ್ಪೋರ್ಟ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ರವಿಕುಮಾರ್ ರೈ ಪ್ರಾಸ್ತವಿಕ ಮಾತನಾಡಿದರು. 

ಸಭೆಯಲ್ಲಿ ಕ್ಲಬ್ಬಿನ ವಿವಿಧ ಪದಾಧಿಕಾರಿಗಳು. ನಿಶಾಂತ್ ರೈ, ಶರತ್ ಗುತ್ತು, ಗಣೇಶ್ ರೈ ಸುಭಾಸ್ ರೈ , ವರುಣ್ ಗಾಂಧಿನಗರ ಹಾಗೂ ಅರೋಗ್ಯ ಕೇಂದ್ರ ದ ಸಿಬ್ಬಂದಿ ವರ್ಗ ಮತ್ತು ಆಶಾ ಕಾರ್ಯಕರ್ತೆಯರು ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಲೋಹಿತ್ ಗುತ್ತು ವಂದನಾರ್ಪಣೆ ಮಾಡಿದರು.ಸ್ಪೋರ್ಟ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ರವಿಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರ

LEAVE A REPLY

Please enter your comment!
Please enter your name here