ಅರುಣಾದಲ್ಲಿ ಅಬ್ಬರಿಸುತ್ತಿರುವ ` ಕಾಂತಾರ’:ಹೌಸ್‌ಫುಲ್ 3 ನೇ ವಾರ

0

ಪುತ್ತೂರು: ಕಾಂತಾರ-ಒಂದು ದಂತ ಕಥೆ…ಸಿನಿ ರಂಗದಲ್ಲಿ ಬಿರುಗಾಳಿ ಎಬ್ಬಿಸುತ್ತಾ ಬಾಕ್ಸ್‌ ಆಫೀಸ್ ಚಿಂದಿ ಉಡಾಯಿಸಿ ಮುನ್ನುಗ್ಗುತ್ತಿರುವ ಸಿನಿಮಾ. ಪಕ್ಕಾ ತುಳುನಾಡಿನ ಕಥಾ ಹಂದರವಿರುವ ಕಾಂತಾರಕ್ಕೆ ಜಗತ್ತಿನಾದ್ಯಂತ ಸಿನಿ ಪ್ರೇಕ್ಷಕರು ತಲೆತೂಗಿದ್ದಾರೆ. ಅದೆಷ್ಟೋ ಸೂಪರ್‌ಸ್ಟಾರ್‌ಗಳ ದಾಖಲೆಗಳನ್ನು ನುಚ್ಚುನೂರು ಮಾಡುತ್ತಾ ಸಾಗುತ್ತಿರುವ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಪುತ್ತೂರು ಅರುಣಾ ಚಿತ್ರಮಂದಿರದಲ್ಲಿ ಹೌಸ್‌ಫುಲ್ 3 ನೇ ವಾರದ ಪ್ರದರ್ಶನ ಕಾಣುತ್ತಿದೆ. ಪ್ರತಿ ದಿನ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ವೀಕ್ಷಿಸಲು ಸಿನಿ ಪ್ರೇಕ್ಷಕರು ಟಿಕೆಟ್‌ಗಾಗಿ ಮುಗಿಬೀಳುತ್ತಿದ್ದಾರೆ.


ದಿನಾ 4 ದೇಖಾವೆಗಳು
ಪ್ರತಿ ದಿನ ಬೆಳಿಗ್ಗೆ 11 ಮಧ್ಯಾಹ್ನ 2, ಸಂಜೆ 6 ಮತ್ತು ರಾತ್ರಿ 9 ಗಂಟೆಗೆ ಪ್ರತಿದಿನಾ 4 ದೇಖಾವೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಸಿನಿ ಪ್ರೇಕ್ಷಕರು ಟಾಕೀಸ್‌ಗೆ ಬಂದು ಚಿತ್ರ ನೋಡಿ ಪ್ರೋತ್ಸಾಹಿಸುವಂತೆ ಚಿತ್ರಮಂದಿರದ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here