ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ‘ಆನ್ ಓಪನ್ ಡಿಸ್ಕಷನ್ ಕ್ಯಾಂಪ್’ ವಿಶೇಷ ಕಾರ್ಯಕ್ರಮ

0

ಪುತ್ತೂರು: ವಿದ್ಯಾರ್ಥಿನಿಯರ ಒಳ ಮನಸ್ಸನ್ನು ಅರಿತು ಅವರೊಂದಿಗೆ ಬೆರೆತು ಪಾಠ ಕಲಿಸುವಂತಾದರೆ ಮಾತ್ರ ನಮ್ಮ ಪ್ರವಚನಗಳಿಗೆ ಅವರಿಂದ ಸ್ಪಂದನೆ ದೊರೆಯುತ್ತದೆ. ನಾವು ತಾಯಿಯಾಗಿ, ತಂದೆಯಾಗಿ, ಅಣ್ಣನಾಗಿ, ಸ್ನೇಹಿತನಾಗಿ, ಗುರುವಾಗಿ ಅವರೊಂದಿಗೆ ಒಡನಾಡಿಯಾದಾಗ ಅವರಿಂದ ಅನಿರೀಕ್ಷಿತ ಬದಲಾವಣೆಗಳನ್ನು ನಾವು ಗಮನಿಸಬಹುದಾಗಿದೆ ಎಂದು ಹುಬ್ಬಳ್ಳಿಯ ಶಾಹಿನ್ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಹೇಳಿದರು.

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆದ ‘ಆನ್ ಓಪನ್ ಡಿಸ್ಕಷನ್ ಕ್ಯಾಂಪ್’ನಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು. ಖ್ಯಾತ ಮೋಟಿವೇಟರ್ ರಫೀಕ್ ಮಾಸ್ಟರ್ ಮಾತನಾಡಿ ಉಪನ್ಯಾಸಕರ ಕರ್ತವ್ಯ, ವಿದ್ಯಾರ್ಥಿನಿಯರ ಪರ್ಸನಲ್ ಜೀವನದೊಳಗಿನ ಮತ್ತೊಂದು ಮುಖ, ಯಾರಲ್ಲೂ ಹೇಳಲಾಗದೆ ಚಡಪಡಿಸುವ ಅವರೊಳಗಿನ ಕೆಲವೊಂದು ಗಂಭೀರ ಸಮಸ್ಯೆಗಳ ಬಗ್ಗೆ ಅವರು ವಿವರಿಸಿ ಮಾತನಾಡಿದರು.

ಮುಸ್ಲಿಂ ಸಮಾಜದ ವಿದ್ಯಾರ್ಥಿನಿಯರ ಕಲಿಯುವ ಗುರಿ, ಕಲಿತು ಸಾಧನೆ ಮಾಡಲು ಮುಂದಾಗುವ ವಿದ್ಯಾರ್ಥಿನಿಯರ ಮಾಹಿತಿ, ನಮ್ಮ ವಿದ್ಯಾರ್ಥಿನಿಯರ ಆಮೂಲಾಗ್ರ ಬದಲಾವಣೆಗೆ ಅನುಸರಿಸಬೇಕಾದ ಅಂಶಗಳು ಮುಂತಾದ ವಿಚಾರಗಳಲ್ಲಿ ಪುತ್ತೂರು ಕಮ್ಯುನಿಕೇಶನ್ ಸೆಂಟರ್‌ನ ಹನೀಫ್ ಪುತ್ತೂರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಅಡ್ವಕೇಟ್ ಶಾಕಿರ್ ಹಾಜಿ ಮಾತನಾಡಿ ಉಪನ್ಯಾಸಕರ ಘನತೆ, ಸಮಾಜ ಅವರಿಗೆ ನೀಡುತ್ತಿರುವ ಗೌರವ ಎಷ್ಟೇ ದೊಡ್ಡ ಖ್ಯಾತನಾಮರಾದರೂ ಉಪನ್ಯಾಸಕರ ಗರಡಿಯಲ್ಲಿ ಪಳಗಿಯೇ ಬೆಳೆದ ಬಾಲ್ಯ ಮುಂತಾದ ವಿಚಾರಗಳಲ್ಲಿ ಉತ್ತಮ ಅಭಿಪ್ರಾಯಗಳನ್ನು ಮಂಡಿಸಿದರು.

ಕಮ್ಯುನಿಕೇಶನ್ ಸೆಂಟರ್ ಉಪಾಧ್ಯಕ್ಷ ಶೇಖ್ ಅಬ್ದುಲ್ಲ ಹಾಜಿ, ಇಮ್ತಿಯಾಝ್ ಮುಂತಾದವರು ಸಂದರ್ಭೋಚಿತವಾಗಿ ಮಾತನಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು.

ಕೋಶಾಧಿಕಾರಿ ಕೆ.ಬಿ ಕಾಸಿಂ ಹಾಜಿ ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗ, ಪದವಿವಿಭಾಗದ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here