ಸಬಳೂರು ಅಯೋಧ್ಯಾನಗರ ಸುತ್ತಮತ್ತ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು; ರೈತರ ಕೃಷಿ ಹಾನಿ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಸುತ್ತಮುತ್ತ ಪರಿಸರದ ಕೃಷಿ ತೋಟಗಳಿಗೆ ಕಳೆದೊಂದು ವಾರದಿಂದ ರಾತ್ರಿ ವೇಳೆ ಕಾಡುಕೋಣಗಳು ಲಗ್ಗೆ ಇಟ್ಟು ಹಾನಿ ಮಾಡುತ್ತಿರುವುದಾಗಿ ವರದಿಯಾಗಿದೆ.

ಎರಡು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಬೀಡುಬಿಟ್ಟ ಕಾಡುಕೋಣವೊಂದು ರಾತ್ರಿ ವೇಳೆ ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡಿತ್ತು. ಇದೀಗ ಒಂದು ವಾರದಿಂದ ಈ ಪರಿಸರದ ಪಟ್ಟೆದಮೂಲೆ, ಸಬಳೂರು ಭಾಗದ ಕೃಷಿಕರ ತೋಟಗಳಿಗೆ ಕಾಡುಕೋಣ ದಾಳಿ ಮಾಡಿ ಹಾನಿಮಾಡುತ್ತಿದೆ. ಕೆಲವೊಂದು ಸಲ ರಸ್ತೆಯಲ್ಲಿ ಸಂಚಾರಿಸುವವರಿಗೂ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ತೋಟಗಳಲ್ಲಿ ತಡೆಬೇಲಿಗೆ ನೆಟ್ಟ ಗಿಡಗಳನ್ನು ಸಂಪೂರ್ಣ ತಿಂದು ಹಾಕುತ್ತಿದೆ. ಮೇವಿಗಾಗಿ ನಾಟಿ ಮಾಡಲಾದ ಹುಲ್ಲು, ನೈಸರ್ಗಿಕವಾಗಿ ತೋಟದಲ್ಲಿ ಬೆಳೆದ ಹುಲ್ಲನ್ನು ತಿನ್ನುತ್ತಿರುವುದರಿಂದ ಗೋವುಗಳಿಗೆ ಹುಲ್ಲು ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕೃಷಿಕ ರಾಜೀವ ಪಟ್ಟೆದಮೂಲೆಯವರು ತಿಳಿಸಿದ್ದಾರೆ. ರಾತ್ರಿ ವೇಳೆ ಕಾಣಿಸಿಕೊಳ್ಳುವ ಕಾಡುಕೋಣಗಳು ಹಗಲು ವೇಳೆ ಪಕ್ಕದ ಬಿರ್ಮರ ಗುಡ್ಡೆಯಲ್ಲಿ ಉಳಿದುಕೊಳ್ಳತ್ತವೆ ಎನ್ನುವ ಶಂಕೆ ಈ ಭಾಗದ ರೈತರು ವ್ಯಕ್ತಪಡಿಸುತ್ತಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ತಕ್ಷಣ ಕ್ರಮಕೈಗೊಳ್ಳುವಂತೆ ಕೃಷಿಕರು ಆಗ್ರಹಿಸಿದ್ದಾರೆ

LEAVE A REPLY

Please enter your comment!
Please enter your name here