ಕಡ್ಯ ಕೊಣಾಜೆಯಲ್ಲಿ ಹಾರಾಡಿದ ಡ್ರೋನ್! ಮಾಹಿತಿಯಿಲ್ಲದೆ ಆತಂಕಗೊಂಡ ಜನತೆ

0

ಕಡಬ: ಕಡ್ಯ ಕೊಣಾಜೆಯ ಪುತ್ತಿಗೆ ಭಾಗದಲ್ಲಿ ದಿಢೀರ್ ಡ್ರೋನ್ ಹಾರಾಡಿದ್ದು, ಜನತೆ ಆತಂಕಗೊಂಡಿದ್ದಾರೆ. ಕಡ್ಯ ಕೊಣಾಜೆಯ ಪುತ್ತಿಗೆ ಪರಿಸರದಲ್ಲಿ ಶುಕ್ರವಾರ ಸಂಜೆ ಡ್ರೋನ್ ಹಾರಾಟ ನಡೆಸಿದೆ ಎಂದು ಅಲ್ಲಿನ ಜನರು ತಿಳಿಸಿದ್ದು, ಡ್ರೋನ್ ಮನೆ ಸಮೀಪ, ಕೃಷಿ ತೋಟದ ಮೇಲ್ಭಾಗದಲ್ಲಿ ಹಾರಾಟ ನಡೆಸಿದೆ.ಬಳಿಕ ಕಲ್ಲುಗುಡ್ಡೆ ಭಾಗದತ್ತ ಹಾರಾಟ ನಡೆಸಿದೆ.ಈ ಕುರಿತು ಸ್ಥಳೀಯರಿಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇರುವುದರಿಂದ ಆತಂಕ ವ್ಯಕ್ತಪಡಿಸಿದ್ದಾರೆ.

ಸಿನಿಮಾ, ಮದುವೆ ಛಾಯಾಗ್ರಹಣಕ್ಕೆ ಸೀಮಿತವಾಗಿದ್ದ ಡ್ರೋನ್‌ಗಳನ್ನು ಕೃಷಿ, ನಗರಾಭಿವೃದ್ಧಿ, ಪೊಲೀಸ್, ಸೇನಾ ಕಾರ್ಯಾಚರಣೆಯಂತಹ ಪ್ರಮುಖ ಕಾರ್ಯಗಳಿಗೂ ಇತ್ತೀಚೆಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ.ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಪ್ರಕಟಿಸಿತ್ತು.ಹೊಸ ನಿಯಮಾವಳಿಗಳ ಅನ್ವಯ ಮನರಂಜನೆ, ಮದುವೆ ಮುಂತಾದ ಕಾರ್ಯಕ್ರಮಗಳ ಛಾಯಾಗ್ರಹಣಕ್ಕೆ ಬಳಸಲಾಗುವ ಪುಟ್ಟ ಡ್ರೋನ್‌ಗಳಿಗೂ ವಿಶೇಷ ಗುರುತಿನ ಸಂಖ್ಯೆ(ಯುಐಎನ್)ಪಡೆಯುವುದು ಕಡ್ಡಾಯವಾಗಿದೆ.ಸದ್ಯ ಈ ಭಾಗದಲ್ಲಿ ಹಾರಾಟ ನಡೆಸಿರುವ ಡ್ರೋನ್ ಬಗ್ಗೆ ಪೊಲೀಸರಿಗೂ ಯಾವುದೇ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here