ಕನ್ನಡಕಗಳ ಮಳಿಗೆ ’ಐ ಲುಕ್ ಅಪ್ಟಿಕಲ್ಸ್’ ಶುಭಾರಂಭ

0

ಶುಭಾರಂಭದ ಪ್ರಯುಕ್ತ ಕನ್ನಡಗಳ ಮೇಲೆ ಶೇ.40ರಿಯಾಯಿತಿ

ಪುತ್ತೂರು: ಬ್ರ್ಯಾಂಡೆಡ್ ಲೆನ್ಸ್ ಸಹಿತ ವಿವಿಧ ನಮೂನೆಯ ಕನ್ನಡಕಗಳ ಮಳಿಗೆ ’ಐ ಲುಕ್ ಒಪ್ಟಿಕಲ್ಸ್’ ಅ.15ರಂದು ಪುತ್ತೂರು ಎಂ.ಟಿ.ರಸ್ತೆಯ ಎ.ಹೆಚ್.ಹಿಂದುಸ್ಥಾನ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತ್ತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ, ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯ ಜೊತೆಗೆ ಗ್ರಾಹಕರಿಗೂ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಮಧುಸೂಧನ್ ಹಾರಾಡಿ ಸಹಿತ ಅನೇಕರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ಬ್ರ್ಯಾಂಡೆಡ್ ಲೆನ್ಸ್‌ಗಳು, ಬ್ಲೂ ಪಿಲ್ಟರ್ ಲೆನ್ಸ್‌ಗಳು, ತಂಪು ಕನ್ನಡಕಗಳು, ಕಲರ್ ಕಾಂಟಾಕ್ಟ್ ಲೆನ್ಸ್‌ಗಳು, ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಬಳಸುವ ಕನ್ನಡಕಗಳು, ಡ್ರೈವ್‌ಸೇಫ್ ಕನ್ನಡಗಳು ನೂತನ ಮಳಿಗೆಯಲ್ಲಿದೆ. ಶುಭಾರಂಭದ ಪ್ರಯುಕ್ತ ಎಲ್ಲಾ ತರದ ಕನ್ನಡಗಳ ಖರೀದಿ ಮೇಲೆ ಶೇ.40 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕ ವಿನಯ ಅಲಿನ್ ಹೆಗ್ಡೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here