ಪುತ್ತೂರು: ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ವತಿಯಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಪಿಪಿಎಲ್ ಕ್ರಿಕೆಟ್ ಸೀಸನ್-೪ SHAKZ CUP 2022 ಪಂದ್ಯಾಟದಲ್ಲಿ ಜಝ ಸ್ಪೋಟ್ಸ್ ಅಕಾಡೆಮಿ ಚಾಂಪಿಯನ್ಸ್ ಆಗಿ ಮೂಡಿ ಬಂದಿದೆ. ಮ್ಯಾಕ್ಸ್ ಆಲುಂಗಲ್ ರನ್ನರ್ಸ್ ಸ್ಥಾನ ಪಡೆದುಕೊಂಡಿದೆ.
ಜಝ ಸ್ಪೋಟ್ಸ್ ಅಕಾಡೆಮಿಯ ಆಟಗಾರ ಸಲ್ಮಾನ್ ಜಝ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಐಫೋನ್ ಪಡೆದುಕೊಂಡರು. ಜಝ ತಂಡದ ಸಲ್ಮಾನ್ ರಿಯಾದ್ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ ಸ್ಮಾರ್ಟ್ ಫೋನ್ ಪಡೆದುಕೊಂಡರು. ಜಝ ತಂಡದ ಸಲ್ಮಾನ್ ರಿಯಾದ್ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯಾಗಿ ಎಲ್ ಇ ಡಿ ಟಿವಿ ಪಡೆದುಕೊಂಡರು. ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದ ಅಬ್ದುಲ್ ವಾಹಿದ್ ಎಲ್‌ಇಡಿ ಟಿ ವಿ ಪಡೆದುಕೊಂಡರು. ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದ ಮ್ಯಾಕ್ಸ್ ಆಲುಂಗಲ್ ತಂಡದ ಮುಸ್ತಾಕ್ ಪಡೆದುಕೊಂಡರು.
ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯನ್ನು-ಹಸನ್(ಜಝ) ಪಡೆದುಕೊಂಡರು. ಪಿಪಿ ಲ್ ಕಮಾಲ್, ಕ್ಯಾಚ್-ಸಲ್ಮಾನ್ ರಿಯಾದ್(ಜಝ), ಮೋಸ್ಟ್ ಸಿಕ್ಸ್-ಸಲ್ಮಾನ್ ರಿಯಾದ್(ಜಝ), ಲಕ್ಕಿ ಕ್ಯಾಪ್ಟನ್-ಝಹೀರ್(ಕುಡ್ಲ ಬುಲ್ಸ್) ಪಡೆದುಕೊಂಡರು. ಮುಖ್ಯ ಅತಿಥಿಗಳಾಗಿ ಜಾವೆದ್ ಮಿಯಾಂದಾದ್, ಶಿಫಾನ್ ಶೈಖ್ ಗ್ರೇ ಲೈನ್, ಆರಿಫ್ ಬಜ್ಪೆ, ಮುಸ್ತಫ ಪುಣಚ, ನಿಶಾದ್ ಲೊದರ್ಸ್, ಹನೀಫ್ ಕಂಬಳಬೆಟ್ಟು, ಮೊಹ್ಸಿನ್ ವಾಮಂಜೂರು, ಷರೀಫ್ ತೋಡಾರ್, ಹಬೀಬ್ ಮ್ಯಾಕ್ಸ್ ಆಲುಂಗಲ್, ಆಸಿಫ್ ಅಲ್ ಬಸ್ರಿ, ಇರ್ಶಾದ್ ಸಿಕ್ಸ್ ಡೋಟ್ಸ್, ಸಿಬ್ಗತುಲ್ಲಾಹ್ ರಹೀಮ್ ಎನ್ ಟಿ ಎಕ್ಸ್ ಪ್ರೆಸ್ ಶರಫುದ್ದೀನ್ ಲುಲು ಮ್ಯಾಕ್ಸ್ ಜೈಸನ್ ಕುಡ್ಲ ಬುಲ್ಸ್ ರಹೀಸ್ ಕ್ಲಾಸಿಕ್ ಮ್ಯಾನೆಜರ್ ಹಾಗೂ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ಇದರ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ನೌಶಾದ್ ಮೊಟ್ಟತಡ್ಕ, ಹುರೈಸ್ ಪುತ್ತೂರು, ಸಿನಾನ್ ಪೆರ್ನೆ, ಇಫ್ರಾಝ್ ಬೆಳುವಾಯಿ ಮೊದಲಾದವರು ಪಂದ್ಯಾಕೂಟದ ಆಯೋಜಕರಾಗಿದ್ದರು.