ಸವಣೂರಿನಲ್ಲಿ ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ,ಯಕ್ಷ ಪ್ರತಿಭೆ ಪ್ರಶಸ್ತಿ ಪ್ರದಾನ

0

ಸವಣೂರು : ಶ್ರವಣ ರಂಗ ಪ್ರತಿಷ್ಠಾನ ಸವಣೂರು,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಮತ್ತು ಜನಜಾಗೃತಿ ವೇದಿಕೆ ಸವಣೂರು ವಲಯ ಇದರ ಸಹಯೋಗದಲ್ಲಿ ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ,ರಾಮಚಂದ್ರ ಅರ್ಬಿತ್ತಾಯ ಯಕ್ಷ ಪ್ರತಿಭೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.


ಶ್ರವಣರಂಗ ಪ್ರತಿಷ್ಠಾನದ ಪೋಷಕ ಗಿರಿಶಂಕರ ಸುಲಾಯ ಮಾತನಾಡಿ,ರಾಮಚಂದ್ರ ಅರ್ಬಿತ್ತಾಯರ ಯಕ್ಷಗಾನ ಶಿಷ್ಯಂದಿರು ಯಕ್ಷಗಾನ ಕಲೆಯನ್ನು ಬೆಳೆಸಿ ಇನ್ನೊಬ್ಬರಿಗೂ ಕಲಿಸುವುದೇ ಅವರಿಗೆ ಸಲ್ಲಿಸುವ ಗೌರವ,ರಾಮಚಂದ್ರ ಅರ್ಬಿತ್ತಾಯರು ಸವಣೂರು ಯುವಕ ಮಂಡಲದ ಯಕ್ಷಗಾನ ತಂಡ ರಾಜ್ಯಮಟ್ಟದಲ್ಲಿ ಗೆಲ್ಲುವಂತೆ ಮಾಡಿದ್ದಾರೆ.ರಾಮಚಂದ್ರ ಅರ್ಬಿತ್ತಾಯರ ಯಕ್ಷಗಾನ ಸೇವೆ ಅವರನ್ನು ಸ್ಮರಣೀಯವಾಗಿಸಿದೆ ಎಂದರು.

ರಾಮಚಂದ್ರ ಅರ್ಬಿತ್ತಾಯ ಯಕ್ಷ ಪ್ರತಿಭೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ರಾಮಚಂದ್ರ ಅರ್ಬಿತ್ತಾಯ ಯಕ್ಷ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಬಾಲ ಕಲಾವಿದ ಸುಬ್ರಹ್ಮಣ್ಯ ಅವರಿಗೆ ಹಿರಿಯ ಯಕ್ಷಗಾನ ಕಲಾವಿದ ಕೇಶವ ಬೈಪಾಡಿತ್ತಾಯ ಕಡಬ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯಲ್ಲಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಪ್ರಿತ್ ರೈ ಖಂಡಿಗ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಸವಣೂರು ವಲಯಾಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿ,ಶ್ರವಣರಂಗ ಪ್ರತಿಷ್ಠಾನದ ಅಧ್ಯಕ್ಷ ಆನಂದ ಇಡ್ಯಾಡಿ ಅವರು ವಂದಿಸಿದರು.ಶ್ರವಣರಂಗ ಪ್ರತಿಷ್ಠಾನದ ಸಂಚಾಲಕ ತಾರಾನಾಥ ಸವಣೂರು ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣುರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ,ಗಣೇಶ್ ಕೆ.ವಿ.ಪೆರುವಾಜೆ,ಉಮೇಶ್ ಕುಮಾರಮಂಗಲ,ಶಿಕ್ಷಕರಾದ ಸುಜಯ ಜಿ.ಸುಲಾಯ,ವಸಂತಿ ತಾರಾನಾಥ್ ಮೊದಲಾದವರಿದ್ದರು.

ಯಕ್ಷಗಾನ ತಾಳಮದ್ದಳೆ
ಕಾರ್ಯಕ್ರಮದ ಅಂಗವಾಗಿ ವೀರ ತರಣಿಸೇನ ಯಕ್ಷಗಾನ ತಾಳಮದ್ದಳೆ ನಡೆಯಿತು.ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು,ಡಿ.ಕೆ.ಆಚಾರ್ ಶರವೂರು,ಆನಂದ ಸವಣೂರು,ಹೇಮಸ್ವಾತಿ ಕುರಿಯಾಜೆ,ನೇಸರ ಸವಣೂರು,ಶ್ರಾವ್ಯಾ ಪೆರುವಾಜೆ, ಮಾನ್ವಿ ಜಿ.ಎಸ್.,ಶ್ರೇಯಾ ಸವಣೂರು,ಭವಹರಿ ರೈ ಕೆರೆಕ್ಕೋಡಿ, ಚೆಂಡೆ ಮದ್ದಳೆಯಲ್ಲಿ ಕೇಶವ ಬೈಪಾಡಿತ್ತಾಯ,ಕುಮಾರ ಸುಬ್ರಹ್ಮಣ್ಯ ವಳಕುಂಜ,ಬಾಲಕೃಷ್ಣ ಬೊಮ್ಮಾರು,ಮೋಹನ್ ಶರವೂರು,ಅಚ್ಚುತ ಭಕ್ತಕೋಡಿ, ಸುಬ್ರಹ್ಮಣ್ಯ,ಮುಮ್ಮೇಳದಲ್ಲಿ ಕಲಾವಿದರಾಗಿ ಗಣರಾಜ ಕುಂಬ್ಳೆ,ಮಲೆಯಾಳ ಸತ್ಯಶಂಕರ, ಗುಡ್ಡಪ್ಪ ಬಲ್ಯ,ಚಂದ್ರಶೇಖರ ಆಲಂಕಾರು,ಪಿ.ಎಸ್.ಶರ್ಮ ಕಡಬ, ತಾರನಾಥ ಸವಣೂರು,ಪ್ರಸಾದ್ ಸವಣೂರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here