ಪುತ್ತೂರು: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾಣಿಜ್ಯ ಕಟ್ಟಡದ ಕೊಠಡಿಗಳನ್ನು ನೀಡುವ ಸಲುವಾಗಿ ಬಹಿರಂಗ ಏಲಂ ಪ್ರಕ್ರಿಯೆ ಅ. 21 ರಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ.
ಇತ್ತೀಚೆಗೆ ಉದ್ಘಾಟನೆಗೊಂಡ ಬ್ಯಾಂಕಿನ ಅತ್ಯಾಧುನಿಕ ಸೌಲಭ್ಯದ ಕೇಂದ್ರ ಕಚೇರಿ ಇರುವ ವಾಣಿಜ್ಯ ಕಟ್ಟಡದ 6 ಕೊಠಡಿಗಳ ಮತ್ತು ಕೆಳಗಿನ ನ್ಯಾಯಬೆಲೆ ಅಂಗಡಿಯ ಕಟ್ಟಡದ 2 ಕೊಠಡಿಗಳ ಬಾಡಿಗೆ ಏಲಂ ನಡೆಯಲಿದೆ. ಆಸಕ್ತರು ಬ್ಯಾಂಕ್ ವಿಧಿಸಿರುವ ಷರತ್ತುಗಳನ್ವಯ ಏಲಂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಆಡಳಿತ ಮಂಡಳಿಯ ಪರವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ರಾಮಯ್ಯ ರೈ ತಿಳಿಸಿದ್ದಾರೆ.