ಪುತ್ತೂರಿನಲ್ಲಿ ಡಾ.ಹಸನ್ ಸಾಲಿಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಶುಭಾರಂಭ

0

ಪುತ್ತೂರು: ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ. ಹಸನ್ ಸಾಲಿ (ಬಿಎಎಂಎಸ್, ಎಂಡಿಸಿಟಿ)ಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಅ.17ರಂದು ಬಪ್ಪಳಿಗೆ ಸಮೃದ್ಧಿ ಬೈಪಾಸ್ ಸೆಂಟರ್‌ನಲ್ಲಿ ಶುಭಾರಂಭಗೊಂಡಿತು.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಳ್ ಪುತ್ತೂರು ದುವಾ ನೆರವೇರಿಸಿ ಶುಭ ಹಾರೈಸಿದರು.

ಕ್ಲಿನಿಕ್ ಆರಂಭಿಸಿರುವುದು ಅಭಿಮಾನದ ವಿಷಯ-ಮಾಣಿ ಉಸ್ತಾದ್:

ಕ್ಲಿನಿಕ್‌ನ್ನು ಉದ್ಘಾಟಿಸಿ ದುವಾ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಉಡುಪಿ-ಹಾಸನ-ಚಿಕ್ಕಮಗಳೂರು ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರು ಹಸನ್ ಸಾಲಿಯವರು ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಇದೀಗ ಕ್ಲಿನಿಕ್ ಆರಂಭಿಸಿರುವುದು ನಮಗೆಲ್ಲಾ ಅಭಿಮಾನದ ವಿಚಾರ. ಈ ಕ್ಷೇತ್ರದಲ್ಲಿ ಜಾತಿ, ಧರ್ಮ, ಪಂಗಡ ಎಂಬುವುದಿಲ್ಲ, ಸೇವೆಗೆ ಮಾತ್ರ ಇಲ್ಲಿ ಪ್ರಾಮುಖ್ಯತೆ ಇದೆ ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವುದು ಖುಷಿ ನೀಡಿದೆ-ಡಾ.ಶ್ರೀಪತಿ ರಾವ್:

ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ಫಿಸೀಷಿಯನ್ ಡಾ. ಯು ಶ್ರೀಪತಿ ರಾವ್ ಮಾತನಾಡಿ ಹಸನ್ ಸಾಲಿಯವರ ಕುಟುಂಬ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುಟುಂಬವಾದರೂ ಉದ್ಯಮ ಕ್ಷೇತ್ರ ಬಿಟ್ಟು ಮೆಡಿಕಲ್ ಫೀಲ್ಡ್ ಆಯ್ದುಕೊಂಡಿರುವುದು ಆಶ್ಚರ್ಯ ಮತ್ತು ಖುಷಿ ತಂದಿದೆ. ನಮ್ಮ ಆಸ್ಪತ್ರೆಯಲ್ಲಿ ಇಂಟರ‍್ನ್‌ಶಿಪ್‌ಗೆ ಬರುತ್ತಿದ್ದ ನಮ್ಮದೇ ಹುಡುಗ ಹಸನ್ ಸಾಲಿಯವರು ಕ್ಲಿನಿಕ್ ಆರಂಭಿಸಿರುವುದು ಸಂತೋಷ ನೀಡಿದೆ ಎಂದು ಹೇಳಿದರು.

ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ-ಡಾ.ಶ್ರೀಕಾಂತ್ :

ಪುತ್ತೂರು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಶ್ರೀಕಾಂತ್ ರಾವ್ ಮಾತನಾಡಿ ಹಸನ್ ಸಾಲಿಯವರು ಕ್ಲಿನಿಕ್ ಆರಂಭಿಸಿರುವುದು ಸಂತೋಷ ತಂದಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಹಸನ್ ಸಾಲಿಯವರಿಗೆ ದೇವರು ಶಕ್ತಿ ನೀಡಲಿ. ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ ಎಂದು ಹೇಳಿ ಶುಭ ಹಾರೈಸಿದರು.

ಆರೋಗ್ಯ ಕ್ಷೇತ್ರವೆಂದರೆ ಅದು ಸೇವಾ ಕ್ಷೇತ್ರ-ವಿಜಯ ಹಾರ್ವಿನ್:

ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ| ವಿಜಯ ಹಾರ್ವಿನ್ ಮಾತನಾಡಿ ಆರೋಗ್ಯ ಕ್ಷೇತ್ರವೆಂದರೆ ಅದು ಸೇವಾ ಕ್ಷೇತ್ರ. ಮಕ್ಕಳನ್ನು ಮತ್ತು ವಯಸ್ಕರನ್ನು ನೆಗ್ಲೆಕ್ಟ್ ಮಾಡದೇ ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಈ ಕ್ಲಿನಿಕ್ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ವೈದ್ಯರು ನೀಡುವ ಸೇವೆಗೆ ಬೆಲೆ ಕಟ್ಟಲಾಗದು-ಅರವಿಂದ:

ಸಭೆ ಉದ್ಘಾಟಿಸಿದ ಚಾರ್ಟರ್ಡ್ ಅಕೌಂಟೆಟ್ ಅರವಿಂದ ಮಾತನಾಡಿ ವೈದ್ಯರು ನೀಡುವ ಸೇವೆಗೆ ಬೆಲೆ ಕಟ್ಟಲಾಗದು. ಹಸನ್ ಸಾಲಿಯವರ ಕ್ಲಿನಿಕ್ ಯಶಸ್ವಿಯಾಗಿ ಮುಂದೆ ಸಾಗಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಖಾಸಿಂ ಹಾಜಿ ಮಿತ್ತೂರು ಉಪಸ್ಥಿತರಿದ್ದರು.


ದ.ಕ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಸಯ್ಯದ್ ಅ-ಮ್ ತಂಳ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಡಾ.ಶ್ರೀಪ್ರಕಾಶ್, ಡಾ.ಭಾಗ್ಯೇಶ್ ಬೆಳ್ಳಾರೆ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ಆದಂ ಹಾಜಿ ಸಿಟಿ ಗೋಲ್ಡ್, ಟಿ.ಕೆ ಮಹಮ್ಮದ್ ಟಾಪ್ಕೋ ಗೋಲ್ಡ್, ಅಬ್ರಾಹಂ ವರ್ಗಿಸ್ ನೆಲ್ಯಾಡಿ, ಇಂಜಿನಿಯರ್ ಸಂತೋಷ್ ಶೆಟ್ಟ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಟ್ಯಾಕ್ಸ್ ಕನ್ಸಲ್ಟೆಂಟ್ ತೇಜಸ್, ಡಾ.ಶಶಿಧರ್ ಕಜೆ, ಡಾ.ರವಿ ನಾರಾಯಣ್, ಡಾ.ನಝೀರ್ ಅಹ್ಮದ್, ರೋಟರಿ ಕ್ಲಬ್ ಪುತ್ತೂರು ಎಲೈಟ್‌ನ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಡಿಸೋಜಾ, ಕಲ್ಲೇಗ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಸಾಜ ಮತ್ತು ಸಾರ್ಯ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಕೋಶಾಧಿಕಾರಿ ಯೂಸುಫ್ ಹಾಜಿ ಕೈಕಾರ, ಬನ್ನೂರು ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬನ್ನೂರು, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್, ಕಲಾಂ ಕಟ್ಟೆಕಾರ‍್ಸ್, ರಫೀಕ್ ಬಾಹಸನಿ, ಹಮೀದ್ ಸಾಲ್ಮರ, ಬಪ್ಪಳಿಗೆ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಗಡಿನಾಡ ಪತ್ರಿಕೆಯ ಸಂಪಾದಕ ಹಾಜಿ ಅಬೂಬಕ್ಕರ್ ಆರ್ಲಪದವು, ರತ್ನಾಕರ ರೈ ತಿಂಗಳಾಡಿ, ರಶೀದ್ ವಿಟ್ಲ, ಅಬೂಶಝ ಉಸ್ತಾದ್, ಹಸೈನಾರ್ ಬನಾರಿ, ಅಲಿ ಕೀಲಂಪಾಡಿ, ನವೀನ್ ನಾಯ್ಕ್ ಸೇರಿದಂತೆ ಹಲವಾರು ಮಂದಿ ಗಣ್ಯರು, ಹಿತೈಷಿಗಳು, ಡಾ.ಹಸನ್ ಸಾಲಿಯವರ ಕುಟುಂಬಸ್ಥರು ಆಗಮಿಸಿ ಶುಭ ಹಾರೈಸಿದರು.

ಡಾ. ಹಸನ್ ಸಾಲಿಯವರ ಹಿರಿಯ ಸಹೋದರ ಇಬ್ರಾಹಿಂ ಖಲಂದರ್, ಹಾಜಿ ಮಹಮ್ಮದ್ ಸಿದ್ದೀಕ್ ಮಂಗಳೂರು, ಹಾಜಿ ಮೊಯಿನುದ್ದೀನ್ ಮಂಗಳೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಡಾ.ಹಸನ್ ಸಾಲಿಯವರ ಸಹೋದರ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಡ್ವೊಕೇಟ್ ರಮೀಝ್, ಉವೈಸ್ ಬೀಟಿಗೆ ಸಹಕರಿಸಿದರು.

ದಿ.ಉಸ್ಮಾನ್ ಹಾಜಿಯವರ ಕೊಡುಗೆಯನ್ನು ಸ್ಮರಿಸಿದ ಗಣ್ಯರು

ಡಾ| ಹಸನ್ ಸಾಲಿಯವರ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದವರೆಲ್ಲರೂ ಡಾ| ಹಸನ್ ಸಾಲಿಯವರ ತಂದೆ ದಿ.ಉಸ್ಮಾನ್ ಹಾಜಿ ಮಿತ್ತೂರುರವರ ಗುಣಗಾನ ಮಾಡಿದರು. ಉಸ್ಮಾನ್ ಹಾಜಿಯವರು ಸಮಾಜ ಸುಧಾರಣೆಗೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಗಣ್ಯರು ಬಣ್ಣಿಸಿದರು. ಅಲ್ಲದೇ ಉಸ್ಮಾನ್ ಹಾಜಿಯವರ ನಾಲ್ಕು ಮಂದಿ ಗಂಡು ಮಕ್ಕಳ ಸಾಧನೆಯ ಬಗ್ಗೆ ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದರು. ಉಸ್ಮಾನ್ ಹಾಜಿಯವರು ನಮಗೆಲ್ಲಾ ಪ್ರೀತಿ ಪಾತ್ರರಾದ ವ್ಯಕ್ತಿಯಾಗಿದ್ದರು. ಅವರ ಮಕ್ಕಳು ಸಮಾಜದ ಆಸ್ತಿಯಾಗಿ ಮೂಡಿಬರುತ್ತಿದ್ದಾರೆ ಎಂದು ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರು. ಡಾ| ಹಸನ್ ಸಾಲಿಯವರು ಅವರ ತಂದೆ ನನ್ನ ಆತ್ಮೀಯರಾಗಿದ್ದ ಉಸ್ಮಾನ್ ಹಾಜಿ ಜೊತೆ ನಮ್ಮ ಆಸ್ಪತ್ರೆಗೆ ಚಿಕ್ಕಂದಿನಲ್ಲಿ ಬರುತ್ತಿದ್ದರು ಎಂದು ಡಾ.ಶ್ರೀಪತಿ ರಾವ್ ಹೇಳಿದರು. ಉಸ್ಮಾನ್ ಹಾಜಿಯವರು ಉತ್ತಮ ವ್ಯಕ್ತಿಯಾಗಿದ್ದು ಅವರ ಗೌರವ ಅವರ ಮಕ್ಕಳ ಮೂಲಕ ಮುಂದುವರಿಯಲಿ ಎಂದು ಡಾ.ಶ್ರೀಕಾಂತ್ ಹೇಳಿದರು. ಉಸ್ಮಾನ್ ಹಾಜಿಯವರು ಬಡವರಿಗೆ ನೆರವು ನೀಡುತ್ತಿದ್ದುದಲ್ಲದೇ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದರು ಎಂದು ರೆ| ವಿಜಯ ಹಾರ್ವಿನ್ ಹೇಳಿದರು. ಉಸ್ಮಾನ್ ಹಾಜಿಯವರು ಸಮಾಜದ ಪರ ಚಿಂತನೆಯುಳ್ಳ ವ್ಯಕ್ತಿಯಾಗಿದ್ದು, ಜಾತಿ ಭೇದವಿಲ್ಲದೇ ಎಲ್ಲರ ಪ್ರೀತಿ ಸಂಪಾದಿಸಿದ್ದರು ಎಂದು ಸಿ.ಎ ಅರವಿಂದ ಹೇಳಿದರು


ಪ್ರತೀ ಸೋಮವಾರದಿಂದ ಶನಿವಾರದವರೆಗೆ ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ ಗಂಟೆ 8-30ರಿಂದ ಮದ್ಯಾಹ್ನ ಗಂಟೆ ೧೨ರ ವರೆಗೆ ವೈದ್ಯಕೀಯ ಸೇವೆಗೆ ಲಭ್ಯವಿರಲಿದ್ದೇವೆ. ವೈದ್ಯರ ಸಂದರ್ಶನ, ವೂಂಡ್ ಡ್ರೆಸ್ಸಿಂಗ್, ಕಪ್ಪಿಂಗ್ ಥೆರಫಿ, ರಕ್ತ ಶುಗರ್ ಪರೀಕ್ಷೆ, ನೆಬುಲೈಝೇಷನ್, -ರ್ಮಸಿ ಮುಂತಾದ ಸೇವೆಗಳು ಕ್ಲಿನಿಕ್‌ನಲ್ಲಿ ಲಭ್ಯವಿರಲಿದೆ.

-ಡಾ| ಹಸನ್ ಸಾಲಿ

LEAVE A REPLY

Please enter your comment!
Please enter your name here